SUDDIKSHANA KANNADA NEWS/ DAVANAGERE/ DATE:02-01-2024
ದಾವಣಗೆರೆ: ಜನ ಆರೋಗ್ಯ ಸಂಸ್ಥೆ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಇವರಿಂದ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ ಯುವ ಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಯುವ ಸ್ಪಂದನ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಟಾನ ಯೋಜನೆ ಯುವ ಸ್ಪಂದನ ಅಡಿಯಲ್ಲಿರುವ ಯುವ ಪರಿವರ್ತಕರ ಹಾಗೂ ಯುವ ಸಮಾಲೋಚಕರ ತರಬೇತಿಗಾಗಿ ಯುವತಿ,ಯುವಕರಿಂದ ಅರ್ಜಿಯನ್ನು
ಆಹ್ವಾನಿಸಲಾಗಿದೆ.
ಅಭ್ಯರ್ಥಿಯು 21 ರಿಂದ 35 ವರ್ಷದೊಳಗಿನ ವಯೋಮಾನದವರಾಗಿರಬೇಕು. ಪದವಿ ಹಾಗೂ ಮೇಲ್ಪಟ್ಟು(Psychology, Social work) ಪದವಿ ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಭಾವಚಿತ್ರದ ಸ್ವ ವಿವರೊಂದಿಗೆ ಸಹಾಯಕ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಕಛೇರಿಗೆ ಜ.12 ರೊಳಗಾಗಿ ಸಲ್ಲಿಸಬೇಕು ಹೆಚ್ಚಿನ ವಿವರಗಳಿಗೆ ದೂ ಸಂ: 9008343253, 08192-237480ನ್ನು ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀ ಬಾಯಿ ತಿಳಿಸಿದ್ದಾರೆ.