ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕುವೆಂಪು ವಿವಿಯಿಂದ ಪದವಿ ಪ್ರದಾನಕ್ಕೆ ಅರ್ಜಿ ಆಹ್ವಾನ

On: May 13, 2025 2:01 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-13-05-2025

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 35 ನೇ ವಾರ್ಷಿಕ ಘಟಿಕೋತ್ಸವ ಮೇ/ಜೂನ್-2025 ರ ಮಾಹೆಯಲ್ಲಿ ಜರುಗಲಿದ್ದು ಅರ್ಹ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.

ಆಗಸ್ಟ್/ಸೆಪ್ಟಂಬರ್-2024 ರ ಸ್ನಾತಕ, ಅಕ್ಟೋಬರ್/ನವೆಂಬರ್-2024 ರ ಬಿ.ಪಿ ಇಡಿ, ಸ್ನಾತಕೋತ್ತರ, ಪಿಜಿ ಡಿಪ್ಲೋಮಾ, ಜನವರಿ/ಫೆಬ್ರವರಿ-2025ರ ಬಿ.ಇಡಿ ಹಾಗೂ 2025 ಜನವರಿ 31 ಮತ್ತು ನಂತರದಲ್ಲಿ ಪಿಹೆಚ್.ಡಿ
ಪದವಿಗೆ ಪ್ರಕಟಣೆ ಹೊರಡಿಸಲಾದ ಅರ್ಹ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ.

ಘಟಿಕೋತ್ಸವದಲ್ಲಿ ರ‍್ಯಾಂಕ್/ ಸ್ವರ್ಣ ಪದಕ/ನಗದು ಬಹುಮಾನ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಿದ್ದು, ಮೇಲ್ಕಂಡ ವರ್ಷದಲ್ಲಿ ಪ್ರವೇಶ ಶುಲ್ಕದ ಜೊತೆಗೆ ಘಟಿಕೋತ್ಸವ ಶುಲ್ಕವನ್ನು ಪಾವತಿಸಿರುವ ದೂರ ಶಿಕ್ಷಣದ ವಿದ್ಯಾರ್ಥಿಗಳು ಹಾಗೂ ರೆಗ್ಯೂಲರ್ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.

ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ವಿಶ್ವವಿದ್ಯಾಲಯದ ವೆಬ್‌ಸೈಟ್ ವಿಳಾಸ www.kuvempu.ac.in ನಲ್ಲಿ ವಿದ್ಯಾರ್ಥಿಗಳು ಎಕ್ಸಾಮಿನೇಷನ್ ಗೆ ಲಾಗಿನ್ ಆಗಿ ಕಾನ್ವೊಕೇಶನ್ ಅಪ್ಲಿಕೇಷನ್ ಎಂಬ ಲಿಂಕ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು. ಇ–ಅರ್ಜಿಯನ್ನು ಅಪ್‌ಲೋಡ್ ಮಾಡುವ ಬಗ್ಗೆ ಸೂಚನೆಗಳನ್ನು ಈ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ.

ಪಿಹೆಚ್.ಡಿ, ಪದವೀಧÀರರು ಅರ್ಜಿಯನ್ನು ನೇರವಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್ www.kuvempu.ac.in ನೀಡಲಾಗಿರುವ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜೂ.2 ಕೊನೆಯ ದಿನಾಂಕವಾಗಿದೆ.

ದೂರಶಿಕ್ಷಣದ ಅಭ್ಯರ್ಥಿಗಳಿಗೆ ರೂ.1265, ಪಿಹೆಚ್.ಡಿ/ಎಂ.ಫಿಲ್ ಪದವೀಧರ(ಸಾಮಾನ್ಯ)ರಿಗೆ ರೂ.4125, ಎಸ್‌ಸಿ/ಎಸ್‌ಟಿಗೆ ರೂ.3610, ಹಾಗೂ ರೆಗ್ಯುಲರ್ ಅಭ್ಯರ್ಥಿಗಳಿಗೆ(ಸಾಮಾನ್ಯ) ರೂ.1045, ಎಸ್‌ಸಿ/ಎಸ್‌ಟಿಗೆ
ರೂ.905 ಎನ್‌ಆರ್‌ಐಗೆ ರೂ. 6985 ಶುಲ್ಕ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಶುಲ್ಕವನ್ನು ಎಟಿಎಂ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ಇಂಟರ್‌ನೆಟ್ ಬ್ಯಾಂಕಿಣಗ್ ಪೇ ಮೆಂಟ್/ ಪೇ ಯು ನಲ್ಲಿ ನೇರವಾಗಿ ಪಾವತಿಸಬಹುದಾಗಿದೆ.

ಘಟಿಕೋತ್ಸದಲ್ಲಿ ಆಯಾ ಪದವಿಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದವರಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ವೇದಿಕೆ ಮೇಲೆ ಪ್ರದಾನ ಮಾಡಲಿದ್ದು, ಇತರೆ ರ‍್ಯಾಂಕ್ ವಿಜೇತರಿಗೆ ಪದವಿ ಮತ್ತು ಪ್ರಮಾಣ ಪತ್ರ
ಖುದ್ದಾಗಿ ಘಟಿಕೋತ್ಸವದ ಕಚೇರಿಯಲ್ಲಿ ವಿತರಿಸಲಾಗುತ್ತದೆ. ರೆಗ್ಯುಲರ್ ಆಗಿ ಅಧ್ಯಯನ ಮಾಡಿರುವ ಸ್ನಾತಕ/ ಸ್ನಾತಕೋತ್ತರ ಪದವೀಧರರ ಪದವಿ ಪ್ರಮಾಣ ಪತ್ರವನ್ನು ಘಟಿಕೋತ್ಸವ ನಂತರದಲ್ಲಿ ಅವರು ಅಧ್ಯಯನ ಮಾಡಿದ ವಿಭಾಗ/ ಕಾಲೇಜುಗಳಿಂದ ಪಡೆದುಕೊಳ್ಳಬಹುದು. ಪ್ರಸುತ್ತ ಶೈಕ್ಷಣಿಕ ಸಾಲಿಗೆ ಹೊರತುಪಡಿಸಿ ಬೇರೆಲ್ಲಾ ಅರ್ಜಿದಾರರು ಘಟಿಕೋತ್ಸವದ ನಂತರದಲ್ಲಿ ಅವರವರ ವಿಭಾಗ/ಕಾಲೇಜು/ಅಧ್ಯಯನ ಕೇಂದ್ರಗಳಿಂದ ಅವರ ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರರ್ ಮೌಲ್ಯಮಾಪನ ಕಾರ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿ, ಶಂಕರಘಟ್ಟ-577451, ಇ-ಮೇಲ್:kusconvo@gmail.com ಹಾಗೂ ದೂ.ಸಂ: ಅಂಡರ್
ಗ್ರಾಜುಯೇಟ್ ಕೋರ್ಸ್-7022254997, ಪೋಸ್ಟ್ ಗ್ರಾಜುಯೇಟ್ ಕೋರ್ಸ್/ ಪ್ರೊಫೆಷನಲ್ ಕೋರ್ಸ್/ಪಿಹೆಚ್.ಡಿ-7022254993, ಡಿಸ್ಟೆಂಟ್ ಮೋಡ್-7022255891, ಕಂಪ್ಯೂಟರ್ ಸೆಕ್ಷನ್-8904712601, ಟಿಕ್ನಿಕಲ್
ಅಸಿಸ್ಟೆಂಟ್-7022255745, ಆನ್‌ಲೈನ್ ರಿಲೆಟೆಡ್ ಎನ್‌ಕ್ವೆರಿ-8183098138, 8183098136 ಗೆ ಸಂಪರ್ಕಿಸಬಹುದು ಎಂದು ಕುಲಸಚಿವರು ಮೌಲ್ಯಮಾಪನ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಗಣೇಶ

“ಗಣೇಶ ಹಬ್ಬದ ಪೆಂಡಾಲ್ ಗಳು ಕ್ರಾಂತಿಕಾರಿಗಳ ಕಾರ್ಖಾನೆಗಳು, ಇಲ್ಲಿಂದಲೇ ಸ್ವಾತಂತ್ರ್ಯ ಕ್ರಾಂತಿ: ಹಾರಿಕಾ ಮಂಜುನಾಥ್ ಅಬ್ಬರದ ಭಾಷಣ!

ಮೆಡಿಕವರ್ ಆಸ್ಪತ್ರೆಯಿಂದ ವೈದ್ಯ ಹೆಲ್ತ್ ಕೇರ್ ಕ್ಲಿನಿಕ್‌ನಲ್ಲಿ ಮೂಲಭೂತ ಆರೋಗ್ಯ ತಪಾಸಣೆ ಶಿಬಿರ

ದಾವಣಗೆರೆ

BIG BREAKING: ದಾವಣಗೆರೆಯ ಮಟ್ಟಿಕಲ್ ಫ್ಲೆಕ್ಸ್ ವಿವಾದ: ಪಿಎಸ್ಐ ಸಚಿನ್ ಸೇರಿ ಮೂವರ ಸಸ್ಪೆಂಡ್!

M. P. Renukacharya

ನೂರಾರು ಕೇಸ್ ಹಾಕಿ ತಾಕತ್ತಿದ್ದರೆ ಬಂಧಿಸಿ: ಎಫ್ಐಆರ್ ಬಳಿಕ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಎಂ. ಪಿ. ರೇಣುಕಾಚಾರ್ಯ ಸವಾಲ್!

M. P. Renukacharya

BIG NEWS: “ಡಿಜೆ ಬಳಸಿ, ತಾಕತ್ತಿದ್ದರೆ ಜಿಲ್ಲಾಡಳಿತ ತಡೆಯಲಿ” ಎಂದಿದ್ದ ಎಂ. ಪಿ. ರೇಣುಕಾಚಾರ್ಯ ವಿರುದ್ಧ ಎಫ್ ಐಆರ್! ದೂರಿನ ಕಂಪ್ಲೀಟ್ ಡೀಟೈಲ್ಸ್

Ganesha

“ಗಣೇಶ ಹಬ್ಬದ ನೆಪದಲ್ಲಿ ಬೆಂಕಿ ಹಚ್ಚುವವರ ಹತ್ತಿರ ಬಿಟ್ಟುಕೊಳ್ಳಬೇಡಿ”: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್!

Leave a Comment