Home ದಾವಣಗೆರೆ ಗೋವಿಂದ ಜೊತೆಗಿನ ಆತ್ಮೀಯ ಫೋಟೋಗಳ ಹಂಚಿಕೊಂಡ ನಟಿ ರಾಣಿ ಸ್ವರ್ಣಕಾರ್: ಮತ್ತೆ ಶುರುವಾಯ್ತು ಡೇಟಿಂಗ್ ಗಾಸಿಪ್!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರುವಾಣಿಜ್ಯಸಿನಿಮಾ

ಗೋವಿಂದ ಜೊತೆಗಿನ ಆತ್ಮೀಯ ಫೋಟೋಗಳ ಹಂಚಿಕೊಂಡ ನಟಿ ರಾಣಿ ಸ್ವರ್ಣಕಾರ್: ಮತ್ತೆ ಶುರುವಾಯ್ತು ಡೇಟಿಂಗ್ ಗಾಸಿಪ್!

Share
ಗೋವಿಂದ
Share

ಮುಂಬೈ: ಬಾಲಿವುಡ್ ಹಿರಿಯ ನಟ ಗೋವಿಂದ ಮತ್ತು ಅವರ ಮುಂಬರುವ ‘ರೂಪಾ’ ಚಿತ್ರದ ಸಹನಟಿ ರಾಣಿ ಸ್ವರ್ಣಕಾರ್ ಅವರ ನಡುವಿನ ಆತ್ಮೀಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ರಾಣಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಫೋಟೋಗಳಲ್ಲಿ, ಗೋವಿಂದ ಮತ್ತು ರಾಣಿ ಕೈಕೈ ಹಿಡಿದು ನಡೆಯುತ್ತಿರುವುದು ಹಾಗೂ ಪರಸ್ಪರ ಆಲಿಂಗಿಸಿಕೊಂಡಿರುವುದು ಕಂಡುಬಂದಿದೆ.

ಕಳೆದ ಕೆಲವು ತಿಂಗಳುಗಳಿಂದ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವಿನ ಸಾರ್ವಜನಿಕ ವಾಕ್ಸಮರದ ನಡುವೆಯೇ ಈ ಹೊಸ ಫೋಟೋಗಳು ಹೊರಬಿದ್ದಿರುವುದು, ಇವರಿಬ್ಬರ ಸಂಬಂಧದ ಕುರಿತಾದ ಊಹಾಪೋಹಗಳಿಗೆ ಮತ್ತೆ ರೆಕ್ಕೆಪುಕ್ಕ ನೀಡಿದೆ.

“ರೂಪಾ ಚಿತ್ರದ ಸುಂದರ ಕ್ಷಣಗಳು” ಎಂಬ ಶೀರ್ಷಿಕೆಯೊಂದಿಗೆ ರಾಣಿ ಸ್ವರ್ಣಕಾರ್ ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಗೋವಿಂದ ಬಿಳಿ ಬಣ್ಣದ ಬ್ಲೇಜರ್, ಕಪ್ಪು ಪ್ಯಾಂಟ್ ಮತ್ತು ದೊಡ್ಡ ಸನ್‌ಗ್ಲಾಸ್ ಧರಿಸಿ ಮಿಂಚಿದರೆ, ರಾಣಿ ಸ್ವರ್ಣಕಾರ್ ತಿಳಿ ನೇರಳೆ (ಲ್ಯಾವೆಂಡರ್) ಬಣ್ಣದ ಸೀರೆ ಮತ್ತು ಆಭರಣಗಳಲ್ಲಿ ಕಂಗೊಳಿಸಿದ್ದಾರೆ.

ಒಂದು ಫೋಟೋದಲ್ಲಿ ಗೋವಿಂದ ಅವರು ರಾಣಿ ಅವರ ಸೊಂಟದ ಸುತ್ತ ಕೈಹಾಕಿ ನಿಂತಿದ್ದರೆ, ಮತ್ತೊಂದು ಫೋಟೋದಲ್ಲಿ ಇಬ್ಬರೂ ಕೈ ಹಿಡಿದು ಸಾಗುತ್ತಿದ್ದಾರೆ. ಚಿತ್ರದ ಪ್ರಚಾರದ ಭಾಗವಾಗಿ ಈ ಫೋಟೋಗಳನ್ನು ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles