Home ಕ್ರೈಂ ನ್ಯೂಸ್ ಕಿರುಕುಳ, ಬೆದರಿಕೆಗೆ ಹೆದರಿ ಗೋದಾವರಿ ನದಿಗೆ ಹಾರಿ ಎಂಜಿನಿಯರ್ ಕುಟುಂಬ ಆತ್ಮಹತ್ಯೆ: ಡೆತ್ ನೋಟ್ ಆಧರಿಸಿ ರೈಫಲ್ ಶೂಟಿಂಗ್ ಕೋಚ್ ಶೇಕ್ ಸಾದಿಕ್ ಖಾನ್ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕಿರುಕುಳ, ಬೆದರಿಕೆಗೆ ಹೆದರಿ ಗೋದಾವರಿ ನದಿಗೆ ಹಾರಿ ಎಂಜಿನಿಯರ್ ಕುಟುಂಬ ಆತ್ಮಹತ್ಯೆ: ಡೆತ್ ನೋಟ್ ಆಧರಿಸಿ ರೈಫಲ್ ಶೂಟಿಂಗ್ ಕೋಚ್ ಶೇಕ್ ಸಾದಿಕ್ ಖಾನ್ ಬಂಧನ!

Share
ಗೋದಾವರಿ
Share

ಹೈದರಾಬಾದ್: ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದ ಪಂಚಾಯತ್ ರಾಜ್ ಸಹಾಯಕ ಎಂಜಿನಿಯರ್ ಹಾಗೂ ಅವರ ಕುಟುಂಬದ ಸಾಮೂಹಿಕ ನದಿ ಹಾರಾಟ ಮತ್ತು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ರೈಫಲ್ ಶೂಟಿಂಗ್ ಕೋಚ್ ಶೇಕ್ ಸಾದಿಕ್ ಖಾನ್‌ನನ್ನು ಉತ್ತರ ಪ್ರದೇಶದ ಮೀರತ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ರಾಜಮಹೇಂದ್ರವರದ ಗೋದಾವರಿ ನದಿಯ ರಸ್ತೆ-ಕಂ-ರೈಲು ಸೇತುವೆಯಿಂದ ಎಂಜಿನಿಯರ್ ತಿಲ್ಲಪುಡಿ ನೂಕರಜು, ಅವರ ಪತ್ನಿ ಮೀನಾ, ಮಗಳು ಸೌಮ್ಯ ಮತ್ತು ಮೊಮ್ಮಗ ನದಿಗೆ ಹಾರಿದ್ದರು. ಮೃತರ ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಖಾನ್ ವಿರುದ್ಧ ಕೊಲೆ, ಸುಲಿಗೆ ಮತ್ತು ಮತಾಂತರ ಬೆದರಿಕೆ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ಹಿನ್ನೆಲೆ: ಆಗಸ್ಟ್ 16 ಮತ್ತು 17ರ ಮಧ್ಯರಾತ್ರಿ, ತಿಲ್ಲಾಪುಡಿ ನೂಕರಾಜು (61), ಅವರ ಪತ್ನಿ ಮೀನಾ (58), ಮಗಳು ಸೌಜನ್ಯ (38) ಮತ್ತು 10 ವರ್ಷದ ಮೊಮ್ಮಗ ರಿಯಾನ್ಶ್ ಕಾರ್ತಿಕೇಯ ನದಿಯ ರೋಡ್-ಕಮ್-ರೈಲ್ ಬ್ರಿಡ್ಜ್‌ನಿಂದ ನದಿಗೆ ಹಾರಿದರು.

ಪ್ರಾಣಾಪಾಯದಿಂದ ಪಾರಾದ ಮಗು: ಸ್ಥಳೀಯ ಮೀನುಗಾರರ ಸಮಯೋಚಿತ ಸಹಾಯದಿಂದ 10 ವರ್ಷದ ಮೊಮ್ಮಗ ಮಾತ್ರ ಪ್ರಾಣಾಪಾಯದಿಂದ ಪಾರಾಗಿ ಉಳಿದುಕೊಂಡನು. ಆದರೆ ನೂಕರಾಜು ಮತ್ತು ಇತರ ಇಬ್ಬರು ಮಹಿಳೆಯರ ಪ್ರಾಣ ಕಳೆದುಹೋಯಿತು.

Suicide Note ಮತ್ತು ಆರೋಪ: ಮೃತರ ಬಳಿ ಪತ್ತೆಯಾದ ಡೆತ್ ನೋಟ್‌ನಲ್ಲಿ ರೈಫಲ್ ಶೂಟಿಂಗ್ ಕೋಚ್ ಶೇಖ್ ಸಾದಿಕ್ ಖಾನ್ ಎಂಬಾತನ ಕಿರುಕುಳ ಹಾಗೂ ಬೆದರಿಕೆಯೇ ಈ ದುರಂತಕ್ಕೆ ಕಾರಣವೆಂದು ಉಲ್ಲೇಖಿಸಲಾಗಿದೆ. ಕುಟುಂಬವನ್ನು ಬಲವಂತವಾಗಿ ಮತಾಂತರಗೊಳಿಸಲು ಯತ್ನಿಸುವುದು, ಆಸ್ತಿ ಕಬಳಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನೆಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಆರೋಪಿ ಬಂಧನ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ರೈಫಲ್ ಶೂಟಿಂಗ್ ಕೋಚ್ ಸಾದಿಕ್ ಖಾನ್‌ನನ್ನು ಆಂಧ್ರಪ್ರದೇಶ ಪೊಲೀಸರು ಉತ್ತರ ಪ್ರದೇಶದ ಮೀರತ್‌ನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles