SUDDIKSHANA KANNADA NEWS/ DAVANAGERE/ DATE:18-02-2024
ದಾವಣಗೆರೆ: ಸಿರಿಗೆರೆಯಲ್ಲಿ ಇದೇ ತಿಂಗಳು 22 ರಿಂದ 24ರ ವರೆಗೆ ಜರಗಲ್ಲಿರುವ 76ನೇ ವರ್ಷದ ತಳುಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಇಂದು ನಗರದ ಮಾಗನೂರು ಬಸಪ್ಪ ಮೈದಾನದಲ್ಲಿ ಗ್ರಾಮೀಣ ಯುವ ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಿತು.
ಉದ್ಯಮಿ ಬಿ. ಸಿ. ಉಮಾಪತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಸಿರಿಗೆರೆಯ ಜಗದ್ಗುರುಗಳ ಈ ವಿನೂತನ ಕ್ರೀಡಾ ಸ್ಪರ್ಧಾ ಕಾರ್ಯಕ್ರಮವು ಗ್ರಾಮೀಣ ಯುವಕ ಯುವತಿಯರಲ್ಲಿ ನವ ಚೇತನವನ್ನು ತುಂಬುವುದರ ಜೊತೆಗೆ ಆರೋಗ್ಯದ ದೃಢತೆಯನ್ನು ಕಾಪಾಡುವಲ್ಲಿ ಇದು ಸಹಕಾರಿಯಾಗುತ್ತದೆ ಎಂಬ ಅಂಶವನ್ನು ಮನಗಂಡೇ ಇಂತಹ ಕ್ರೀಡಾಕೂಟಗಳನ್ನು ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.
ಈ ಕ್ರೀಡಾಕೂಟ ಆಯೋಜನೆ ಮಾಡಿದ ಶಿವಸೈನ್ಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಹಾಗೂ ಪಿಡಕೂಟದ ವ್ಯವಸ್ಥೆಗೆ ಸಹಾಯ ಮಾಡಿದ ಎಲ್ಲರಿಗೂ ಮುಖ್ಯವಾಗಿ ಶಿವನಹಳ್ಳಿ ರಮೇಶ್ ಹಾಗೂ ಶ್ರೀನಿವಾಸ್ ಶಿವಗಂಗಾ
ಮತ್ತಿತರರನ್ನು ಕ್ರೀಡಾ ಸ್ಪರ್ಧೆ ವ್ಯವಸ್ಥಾಪಕರ ಪರವಾಗಿ ಶಿವ ಸೈನ್ಯದ ಗೌರವಾಧ್ಯಕ್ಷ ಶಶಿಧರವರು ಹೆಮ್ಮನಬೇತೂರು ಪ್ರಶಂಶಿಸಿ ಸನ್ಮಾನಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಸಮಾಜದ ಮುಖಂಡರೂ ಆದ ಶಿವನಹಳ್ಳಿ ರಮೇಶ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ತರಳಬಾಳು ಜಗದ್ಗುರುಗಳವರು, ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಗ್ರಾಮೀಣ
ಯುವಕ ಯುವತಿಯರಲ್ಲಿ ನವೋತ್ಸವವನ್ನು ಹಾಗೂ ಜಾಗೃತಿ ಮೂಡಿಸುವ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ತಾಲೂಕು ಶ್ರೀಮತ್ ಸಾಧು ಸಧರ್ಮ ವೀರಶೈವ ಸಮಾಜದ ಅಧ್ಯಕ್ಷ ಹೆಚ್. ಡಿ. ಮಹೇಶ್ವರಪ್ಪ ಅವರು ಮಾತನಾಡಿ ಗ್ರಾಮೀಣ ಯುವಕ ಯುವತಿಯರಲ್ಲಿ ಇಂದು
ಕ್ರೀಡೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ತಳಬಾಳು ಜಗದ್ಗುರುಗಳವರು ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಈ ಹೊಸ ಪರಿಕಲ್ಪನೆಗೆ ನಾಂದಿ ಹಾಡಿದ್ದಾರೆ ಎಂಬುದಾಗಿ ತಿಳಿಸಿದರು.
ಈ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ವಾಮದೇವಪ್ಪ ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ
ಗ್ರಾಮೀಣ ಪ್ರದೇಶದ ಯುವ ಜನಾಂಗಕ್ಕೆ ನವ ಚೇತನ ತುಂಬುವ ಇಂತಹ ಕ್ರೀಡಾ ಸ್ಪರ್ಧೆಗಳು ಅವಶ್ಯ ಎಂದು ಮನಗಂಡು ಈ ವರ್ಷದಿಂದ ಪ್ರಾರಂಭಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ 18ರಿಂದ 40 ವರ್ಷ ವಯೋಮಾನದ ಗ್ರಾಮೀಣ ಪ್ರದೇಶದ ಎಲ್ಲಾ ವರ್ಗದ ,ಜಾತಿ ,ಮತ, ಧರ್ಮ ಭೇದಗಳಿಲ್ಲದೆ ಭಾಗವಹಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ತಾಲೂಕು ಮಟ್ಟದಲ್ಲಿ ವಿಜೇತರಾದವರಿಗೆ ಸಿರಿಗೆರೆಯಲ್ಲಿ ನಡೆಯುವ ಅಂತಿಮ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳಿಗೆ ಪಾತ್ರ ಆಗುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ವಿವರಿಸಿದರು .
ಈ ಸಮಾರಂಭದ ವೇದಿಕೆಯಲ್ಲಿ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಗೌರವ ಕಾರ್ಯದರ್ಶಿ ಮಾಗನೂರು ಸಂಗಮೇಶ್ವರ ಗೌಡ, ಸಮಾಜ ಮುಖಂಡರಾದ ಶ್ರೀನಿವಾಸ್ ಶಿವಗಂಗಾ, ವಿದ್ಯಾನಗರದ ಮಹಾನಗರ ಪಾಲಿಕೆ ಸದಸ್ಯೆ ಗೀತಾ ದಿಳಿಯಪ್ಪ ಉಪಸ್ಥಿತರಿದ್ದರು.
ಶಿವಸೈನ್ಯದ ಅಧ್ಯಕ್ಷ ಉಮೇಶ್ ಮಾಗನೂರ್, ಕುಮಾರ್ ಮಳ್ಳಿಕಟ್ಟೆ, ಕೊರಟಿಕೆರೆ ಶಿವಕುಮಾರ್ ರವಿಕುಮಾರ್ ,ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರುಗಳು ಇನ್ನು ಮುಂತಾದವರು ಕ್ರೀಡಾ ಸ್ಪರ್ಧೆ ಆಯೋಜನೆಯಲ್ಲಿ ನೆರವಾಗಿದ್ದರು. ವಿನ್ನರ್ ಅಕಾಡೆಮಿಯ ಸಂಸ್ಥಾಪಕರಾಗಿರುವ ಶಿವರಾಜ್ ಕಬ್ಬೂರ್ ನಿರೂಪಿಸಿದರು. ಭಾಗವಹಿಸಿದ ಎಲ್ಲಾ ಕ್ರೀಡಾ ಸ್ಪರ್ಧಿಗಳಿಗೆ ಉಪಾಹಾರ ಮತ್ತು ಊಟ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರಗಳನ್ನು ಕೊಡುವ ವ್ಯವಸ್ಥೆ ಮಾಡಲಾಗಿತ್ತು.