Home ಕ್ರೈಂ ನ್ಯೂಸ್ ನಗುತ್ತಲೇ ರೂ.1.5 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಸೇಲ್ಸ್‌ವುಮನ್: ಸಿಸಿಟಿವಿಯಲ್ಲಿ ಸೆರೆಯಾಯ್ತು ಕೈಚಳಕ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುವಾಣಿಜ್ಯ

ನಗುತ್ತಲೇ ರೂ.1.5 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಸೇಲ್ಸ್‌ವುಮನ್: ಸಿಸಿಟಿವಿಯಲ್ಲಿ ಸೆರೆಯಾಯ್ತು ಕೈಚಳಕ!

Share
ಚಿನ್ನಾಭರಣ
Share

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ಖ್ಯಾತ ಚಿನ್ನದ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಅತ್ಯಂತ ಜಾಣ್ಮೆಯಿಂದ ₹1.5 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಕಳೆದ 11 ತಿಂಗಳಿಂದ ಇಲ್ಲಿ ಮಾರಾಟಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಈಕೆ, ಯಾರಿಗೂ ಸಂಶಯ ಬಾರದಂತೆ ಟ್ರೇನಲ್ಲಿದ್ದ ಉಂಗುರಗಳು, ಚೈನುಗಳು, ಮಂಗಳಸೂತ್ರ ಮತ್ತು ಕಾಲುಗೆಜ್ಜೆಗಳನ್ನು ಜೇಬಿಗೆ ಇಳಿಸಿಕೊಂಡಿದ್ದಾಳೆ.

ಮಳಿಗೆಯ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡುಬಂದಾಗ ಮ್ಯಾನೇಜರ್ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಈ ವೇಳೆ ಮಹಿಳೆಯ ಕೃತ್ಯ ಬಯಲಾಗಿದೆ.

ವಿಶೇಷವೆಂದರೆ, ಆಭರಣಗಳನ್ನು ಕದಿಯುವಾಗ ಆಕೆಯ ಮುಖದಲ್ಲಿ ಯಾವುದೇ ಭಯವಿರಲಿಲ್ಲ, ಬದಲಿಗೆ ನಗುಮುಖದಿಂದಲೇ ಈ ಕೆಲಸ ಮಾಡಿದ್ದಾಳೆ. ಸದ್ಯ ಆರೋಪಿ ಮಹಿಳೆ ಪರಾರಿಯಾಗಿದ್ದು, ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles