ಮೈಸೂರು: ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಕೃಷಿ ಪದವೀಧರರಿಗೆ ಉತ್ತಮ ಅವಕಾಶವೊಂದು ಲಭಿಸಿದೆ. ಮೈಸೂರು ಜಿಲ್ಲಾ ಕೃಷಿ ಇಲಾಖೆಯ ‘ಅಟ್ಮಾ’ (ATMA) ಯೋಜನೆಯಡಿ ಖಾಲಿ ಇರುವ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:
ತಾಲೂಕು ತಾಂತ್ರಿಕ ವ್ಯವಸ್ಥಾಪಕ (TTM): 03 ಹುದ್ದೆಗಳು
ಸಹಾಯಕ ತಾಂತ್ರಿಕ ವ್ಯವಸ್ಥಾಪಕ (ATM): 09 ಹುದ್ದೆಗಳು
ಒಟ್ಟು ಹುದ್ದೆಗಳು: 12
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ಅಥವಾ ಕೃಷಿ ಸಂಯೋಜಿತ ವಿಷಯಗಳಲ್ಲಿ ಪದವಿ (Graduation) ಅಥವಾ ಸ್ನಾತಕೋತ್ತರ ಪದವಿ (Post Graduation) ಪೂರ್ಣಗೊಳಿಸಿರಬೇಕು.
ವಯೋಮಿತಿ: ಗರಿಷ್ಠ 45 ವರ್ಷ ಮೀರಿರಬಾರದು (ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ).
ವೇತನ:
ತಾಲೂಕು ತಾಂತ್ರಿಕ ವ್ಯವಸ್ಥಾಪಕ: ₹30,000/– ಪ್ರತಿ ತಿಂಗಳು.
ಸಹಾಯಕ ತಾಂತ್ರಿಕ ವ್ಯವಸ್ಥಾಪಕ: ₹25,000/– ಪ್ರತಿ ತಿಂಗಳು.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರು ಅಧಿಕೃತ ಜಾಲತಾಣವಾದ raitamitra.karnataka.gov.in ನಿಂದ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ಸ್ವಯಂ ದೃಢೀಕೃತ ದಾಖಲೆಗಳನ್ನು (ಅಂಕಪಟ್ಟಿ, ಆಧಾರ್ ಕಾರ್ಡ್, ಅನುಭವ ಪ್ರಮಾಣಪತ್ರ ಇತ್ಯಾದಿ) ಲಗತ್ತಿಸಿ ದಿನಾಂಕ 21-ಆಗಸ್ಟ್-2026 ರೊಳಗೆ ಕೆಳಗಿನ ವಿಳಾಸಕ್ಕೆ ತಲುಪುವಂತೆ ನೋಂದಾಯಿತ ಅಂಚೆ, ಸ್ಪೀಡ್ ಪೋಸ್ಟ್ ಅಥವಾ ಖುದ್ದಾಗಿ ಸಲ್ಲಿಸಬೇಕಾಗಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ:ಜಂಟಿ ಕೃಷಿ ನಿರ್ದೇಶಕರ ಕಚೇರಿ, ಅಟ್ಮಾ (ATMA) ವಿಭಾಗ, ಸಾರ್ವಜನಿಕ ಕಚೇರಿಗಳ ಸಂಕೀರ್ಣ, ನವ ಸಯ್ಯಾಜಿರಾವ್ ರಸ್ತೆ, ಮೈಸೂರು – 570001.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03-08-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-08-2026
- Agriculture Department Mysore Recruitment 2026
- Assistant Technical Manager Mysuru
- ATMA Mysore Vacancies
- Karnataka Govt Jobs 2026
- Mysore Job Notification
- Mysuru Agriculture Jobs 2026
- Taluk Technical Manager Jobs Karnataka
- ಅಟ್ಮಾ ಯೋಜನೆ ಮೈಸೂರು
- ಆಫ್‌ಲೈನ್ ಅರ್ಜಿ 2026
- ಕರ್ನಾಟಕ ಕೃಷಿ ಇಲಾಖೆ ಕೆಲಸಗಳು
- ತಾಲೂಕು ತಾಂತ್ರಿಕ ವ್ಯವಸ್ಥಾಪಕ ಹುದ್ದೆ
- ಮೈಸೂರು ಉದ್ಯೋಗ ವಾರ್ತೆ
- ಮೈಸೂರು ಕೃಷಿ ಇಲಾಖೆ ನೇಮಕಾತಿ 2026
- ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗಳು





Leave a comment