ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸೇತುವೆಗೆ ಡಿಕ್ಕಿ ಹೊಡೆದು ಚರಂಡಿಗೆ ಪಲ್ಟಿ ಹೊಡೆದ ಬಸ್; ರಕ್ಷಿಸಲು ಹರಸಾಹಸ

On: December 27, 2024 7:40 PM
Follow Us:
---Advertisement---

ಪಂಜಾಬ್​ನ ಬತಿಂದಾ ಜಿಲ್ಲೆ ಜೀವನ್​ ಸಿಂಗ್​ವಾಲಾ ಗ್ರಾಮದ ಬಳಿ ಭೀಕರ್ ಬಸ್ ಅಪಘಾತವಾಗಿದೆ. ಸೇತುವೆಯಿಂದ ಚರಂಡಿ ನೀರಿಗೆ ಬಸ್​ ಬಿದ್ದ ಪರಿಣಾಮ 8 ಜನರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟಿರುವ ಬತಿಂದಾದ ಶಾಸಕ ಜಗರೂಪ್ ಸಿಂಗ್ ಗಿಲ್, ಬಸ್ ಅಪಘಾತದಿಂದಾಗಿ ಸ್ಥಳದಲ್ಲಿಯೇ 5 ಜನರು ಜೀವ ಕಳೆದುಕೊಂಡಿದ್ದು ಮೂವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುತ್ತಾ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ ಎಂದು ಹೇಳಿದ್ದಾರೆ.
ಹೇಳಿಕೆಗೂ ಮೊದಲು ಬತಿಂದಾದ ಭಾಯ್​ಮಣಿ ಸಿಂಗ್ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದ ಜಗರೂಪ್ ಸಿಂಗ್ ಗಿಲ್, ಒಟ್ಟು 18 ಗಾಯಾಗಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿವಿಲ್ ಸರ್ಜನ್ ಡಾ.ರಾಮ್​ದೀಪ್ ಸಿಂಗ್ ಹೇಳಿದ್ದಾರೆ.

ಖಾಸಗಿ ಬಸ್​ವೊಂದು ಜೀವನ್​ಸಿಂಗ್​ವಾಲಾ ಗ್ರಾಮದ ಬಳಿ ಹೋಗುವಾಗ ನಿಯಂತ್ರಣ ಕಳೆದುಕೊಂಡು ಸೇತುವೆಗೆ ಡಿಕ್ಕಿ ಹೊಡೆದು ಕೆಳಗಿದ್ದ ಚರಂಡಿ ನೀರಿಗೆ ಬಿದ್ದಿದೆ. ಸುದ್ದಿ ದೊರೆತ ಕೂಡಲೇ ಎನ್​ಡಿಆರ್​ಎಫ್ ಹಾಗೂ ಸ್ಥಳೀಯ ಪೊಲೀಸ್ ಪಡೆ ಹಾಗೂ ಸ್ಥಳೀಯರು ಸೇರಿ ಪ್ರಯಾಣಿಕರನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈಗಾಗಲೇ ಬಸ್​ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಆಚೆ ತೆಗೆಯಲಾಗಿದೆ. ಆದ್ರೆ ಸ್ಥಳದಲ್ಲಿಯೇ 5 ಜನರು ಜೀವ ಕಳೆದುಕೊಂಡಿದ್ದು.ಮೂರು ಜನ ಪ್ರಯಾಣಿಕರು ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾರೆ.

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಗುರುತು ಪತ್ತೆ ಹಚ್ಚುವ ಕಾರ್ಯ ಜಿಲ್ಲಾಡಳಿತದಿಂದ ಆಗಬೇಕಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ವೇಗವಾಗಿ ಬಂದ ಬಸ್​ ಸೇತುವೆಗೆ ಅಳವಡಿಸಿದ ಕಂಬಿಗಳನ್ನು ಗುದ್ದಿಕೊಂಡು ಚರಂಡಿ ನೀರಿಗೆ ಬಿದ್ದಿದೆಯಂತೆ

Join WhatsApp

Join Now

Join Telegram

Join Now

Leave a Comment