SUDDIKSHANA KANNADA NEWS/ DAVANAGERE/ DATE:11-11-2023
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಸ್ವಲ್ಪ ಕಡಿಮೆ ಆಗಿದೆ.
2300ಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ಶುಕ್ರವಾರ ಇತ್ತು. ಆದ್ರೆ, ಶನಿವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಸ್ವಲ್ಪ ಇಳಿಕೆ ಕಂಡಿದೆ.
ಭದ್ರಾ ಡ್ಯಾಂಗೆ 2005 ಕ್ಯೂಸೆಕ್ ಒಳಹರಿವಿದ್ದು, ಹೊರ ಹರಿವು 1 ಸಾವಿರ ಕ್ಯೂಸೆಕ್ ಇದೆ. ಒಟ್ಟು 1100 ಕ್ಯೂಸೆಕ್ ನೀರು ಬಳಕೆ ಮಾಡಲಾಗುತ್ತಿದೆ. ಉಳಿದಂತೆ ಸುಮಾರು ಒಂದು ಸಾವಿರ ಕ್ಯೂಸೆಕ್ ನೀರು ಜಲಾಶಯದಲ್ಲಿ ಸಂಗ್ರಹವಾಗುತ್ತಿದೆ.
ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 184.3 ಅಡಿ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಭದ್ರಾ ಜಲಾಶಯದ ನೀರಿನ ಮಟ್ಟ 31 ಅಡಿ ನೀರು ಕಡಿಮೆ ಆಗಿದೆ. ಕಳೆದ ವರ್ಷ ಭದ್ರಾ ಡ್ಯಾಂ ತುಂಬಿತ್ತು. ಉತ್ತಮ ಮಳೆಯಾದ ಕಾರಣ ಆದಷ್ಟು ಬೇಗವೇ ಭರ್ತಿಯಾಗಿತ್ತು. ರೈತರಿಗೆ ನೀರು ಹರಿಸಿದರೂ ಜಲಾಶಯದಲ್ಲಿ 184.3 ಅಡಿ ನೀರು ಇತ್ತು. ಆದ್ರೆ, ಈ ವರ್ಷ 152 ಅಡಿಗೆ ಕುಸಿದಿದೆ.
ಭದ್ರಾ ಜಲಾಶಯದ ನೀರಿನ ಸಂಗ್ರಹ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ನೀರಿನ ಮಟ್ಟ 152.7 ಅಡಿ ನೀರು ಸಂಗ್ರಹ ಇದೆ. ದಾವಣಗೆರೆ, ಶಿವಮೊಗ್ಗ ಸೇರಿದಂತೆ ಎಲ್ಲೆಡೆ ಉತ್ತಮ ಮಳೆಯಾಗಿದ್ದು, ಒಂದು ವಾರದವರೆಗೆ ನೀರು ನಿಲ್ಲಿಸಿ, ಮತ್ತೆ ಹತ್ತು ದಿನಗಳ ನೀರು ಹರಿಸುವುದನ್ನು ವಿಸ್ತರಿಸಬೇಕು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಆಗ್ರಹವಾಗಿದೆ.
ನೀರು ಸ್ಥಗಿತಗೊಳಿಸುವಂತೆ ಈಗಾಗಲೇ ರೈತ ಮುಖಂಡರು ಭದ್ರಾ ಜಲಾಶಯದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮಳೆಯಾಗಿರುವ ಕಾರಣ ಭೂಮಿ ಹದವಾಗಿದ್ದು, ಆನಂತರ ಹತ್ತು ದಿನಗಳ ಕಾಲ ನೀರು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
BHADRA DAM WATER LEVEL:
DATE: 11-11-2023
- ಭದ್ರಾ ಜಲಾಶಯದ ಗರಿಷ್ಠ ಮಟ್ಟ: 186 ಅಡಿ
- ಇಂದಿನ ನೀರಿನ ಮಟ್ಟ: 152.7 ಅಡಿ
- ಒಳಹರಿವು: 2005 ಕ್ಯೂಸೆಕ್
- ಹೊರಹರಿವು: ಎಡದಂಡೆ ನಾಲೆ: 1000 ಕ್ಯೂಸೆಕ್
- ನದಿ ಬಳಕೆ: 100 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ: 184. 3 ಅಡಿ