ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

2018ರಲ್ಲಿ 3 ಸಾವಿರ ಮತ ಖರೀದಿಸಿ ಸಿದ್ದರಾಮಯ್ಯ ಗೆಲ್ಲಿಸಿದ್ದೇವೆ: ಸಿಎಂ ಇಬ್ರಾಹಿಂ ಮಾತೇ ರಾಹುಲ್ ಗಾಂಧಿ ಮತಗಳ್ಳತನಕ್ಕೆ ತಕ್ಕ ಉತ್ತರ!

On: August 10, 2025 9:44 PM
Follow Us:
ಸಿದ್ದರಾಮಯ್ಯ
---Advertisement---

SUDDIKSHANA KANNADA NEWS/ DAVANAGERE/DATE:10_08_2025

ಬೆಂಗಳೂರು: “2018 ರ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಲ್ಲಿ ಜಯ ಸಾಧಿಸಿದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮ ಮಾರ್ಗದಲ್ಲಿ ಮತ ಖರೀದಿಸಿ ಜಯಶಾಲಿಯಾದರು” ಎಂಬ ಅಸಲಿ ಸತ್ಯವನ್ನು ಆ ಕಾಲದ ಅವರ ಆಪ್ತ ಸಿಎಂ ಇಬ್ರಾಹಿಂ ಅವರು ಬಹಿರಂಗ ಪಡಿಸಿದ್ದಾರೆ. “ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತೆ… ರಾಹುಲ್ ಅಂಡ್ ಕಂಪೆನಿ ಕುಚೇಷ್ಟೆ ಮಾಡುತ್ತಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

READ ALSO THIS STORY: ಮತಗಳ್ಳತನ ಆರೋಪದ ನಡುವೆ ಮೆಟ್ರೋ ಪ್ರಯಾಣ ವೇಳೆ ನರೇಂದ್ರ ಮೋದಿ, ಸಿದ್ದರಾಮಯ್ಯ, ಡಿಕೆಶಿ ಗಹಗಹಿಸಿ ನಗಲು ಕಾರಣವೇನು?

ಸ್ವತಃ ತಾವೇ 3,000 ಮತಗಳನ್ನು ಖರೀದಿಸಿ ಸಿದ್ದರಾಮಯ್ಯನವರನ್ನು ಗೆಲ್ಲಿಸಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ತುರ್ತು ಪರಿಸ್ಥಿತಿ ಹೇರಲು ಕಾರಣರಾದ ಅಕ್ರಮ ಮತದಾನದ ಗೆಲುವಿನ ರೂವಾರಿ ಇಂದಿರಾಗಾಂಧಿಯವರ ಮೊಮ್ಮಗನಾದ ರಾಹುಲ್ ಗಾಂಧಿಯವರು ಇಂದು ಸಾಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸಿ ಮತಗಳ್ಳತನವಾಗಿದೆ ಎಂದು ಬೊಬ್ಬೆ ಹಾಕುತ್ತಾ ಬಾಲಿಶತನ ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿಯವರಿಗೆ ಸಿಎಂ ಇಬ್ರಾಹಿಂ ಅವರು ಸರಿಯಾದ ತಕ್ಕ ಉತ್ತರವನ್ನೇ ನೀಡಿದ್ದಾರೆ. ಮತಗಳ್ಳತನದ ಸಂಸ್ಕೃತಿ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗ ಎನ್ನುವುದನ್ನು ಸಾರಿ ಹೇಳಿದ್ದಾರೆ. ಬದಾಮಿ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮತ ಖರೀದಿಸಿ ಅಕ್ರಮ ಮಾರ್ಗದಲ್ಲಿ ಗೆಲುವು ಸಾಧಿಸಿ ಸಾಂವಿಧಾನಿಕ ದ್ರೋಹ ಎಸಗಿ, ಪ್ರಜಾಪ್ರಭುತ್ವವದ ನೆತ್ತಿಯ ಮೇಲೆ ಕುಳಿತ ಸಿದ್ದರಾಮಯ್ಯನವರ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡಿ ಸಿಎಂ ಇಬ್ರಾಹಿಂ ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಅಲ್ಲಿಯವರೆಗೂ ಸಿದ್ದರಾಮಯ್ಯನವರ ವಿಧಾನಸಭಾ ಸದಸ್ಯತ್ವವನ್ನು ಅಮಾನತ್ತಿನಲ್ಲಿಡಬೇಕಿದೆ. ಈ ಸಂಬಂಧ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ
ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯವರು ಆರೋಪಿಸುತ್ತಿರುವುದು ನಿಜವೇ ಆದರೆ 2023ರಲ್ಲಿಯೂ ಮತಗಳ್ಳತನ, ಮತ ವ್ಯಾಪಾರ ಮಾಡಿಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರಬೇಕು ಏಕೆಂದರೆ 2೦18 ರ ಬಾದಾಮಿ ಚುನಾವಣೆಯಲ್ಲಿ ಮತ ಖರೀದಿಸಿದ ಕುತಂತ್ರವನ್ನೇ 2023 ರಲ್ಲಿಯೂ ಬಳಸಿರ ಬಹುದು? ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಮತ್ತೆ ಆಯ್ಕೆ ಮಾಡಿರಬೇಕು? ಎಂಬುದು ಸಿಎಂ ಇಬ್ರಾಹಿಂ ಅವರ ಹೇಳಿಕೆಯನ್ನು ಗಮನಿಸಿದಾಗ ಸ್ಪಷ್ಟವಾಗುತ್ತಿದೆ ಎಂದಿದ್ದಾರೆ.

ರಾಹುಲ್ ಆರೋಪಿಸಿರುವಂತೆ ಮತಗಳ್ಳತನವಾಗಿದ್ದರೆ, 2೦24ರ ಲೋಕಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದದು ಕಾಂಗ್ರೆಸ್ ಸರ್ಕಾರವೇ ಅಲ್ಲವೇ? ಮತದಾರರ ಪಟ್ಟಿ ಮಾಡಿದ್ದು ನೀವೇ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment