Home ದಾವಣಗೆರೆ ಸಿದ್ದರಾಮಯ್ಯ ಅಹಿಂದ ಸಭೆ ಮಾಡಿದರೆ ತಪ್ಪೇನಿದೆ? ಒಂದೇ ಪಕ್ಷದವರು ಚೆನ್ನಾಗಿದ್ದಾರೆ, ನೀವ್ಯಾಕೆ ತಲೆಕೆಡಿಸಿಕೊಳ್ಳುತ್ತೀರಿ?: ಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನೆ!
ದಾವಣಗೆರೆನವದೆಹಲಿಬೆಂಗಳೂರು

ಸಿದ್ದರಾಮಯ್ಯ ಅಹಿಂದ ಸಭೆ ಮಾಡಿದರೆ ತಪ್ಪೇನಿದೆ? ಒಂದೇ ಪಕ್ಷದವರು ಚೆನ್ನಾಗಿದ್ದಾರೆ, ನೀವ್ಯಾಕೆ ತಲೆಕೆಡಿಸಿಕೊಳ್ಳುತ್ತೀರಿ?: ಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನೆ!

Share
ಸಿದ್ದರಾಮಯ್ಯ
Share

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರ ಸಭೆ ನಡೆಸಿದರೆ ತಪ್ಪೇನಿದೆ ಎಂದು ಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. 

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಹಿಂದ ಸಭೆ ನಡೆಸಿದರೆ ತಪ್ಪೇನಿದೆ? ತಪ್ಪೇನೂ ಇಲ್ಲವಲ್ಲ” ಎಂದು ಹೇಳಿದರು‌.

ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಒಟ್ಟಿಗೆ ಇದ್ದಾರೆ ಎಂಬ ಚರ್ಚೆಗೆ, “ಒಂದೇ ಪಕ್ಷದವರು ಚೆನ್ನಾಗಿಯೇ ಇದ್ದಾರೆ. ನೀವು ಯಾಕೆ ತಲೆಕೆಡಿಸಿಕೊಳ್ಳುತ್ತೀರಿ?” ಎಂದರು.

ಲಿಖಿತವಾಗಿ ಭರವಸೆ ನೀಡಲು ಸಾಧ್ಯವಿಲ್ಲ

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಾಗೂ ಬೇಡಿಕೆಗಳ ಬಗ್ಗೆ ಕೇಳಿದಾಗ, “ಆಶಾ ಕಾರ್ಯಕರ್ತರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ. ಆದರೆ, ಅವರು ಕೇಳುತ್ತಿರುವ ಎಲ್ಲ ಭರವಸೆಗಳನ್ನು ಲಿಖಿತವಾಗಿ ನೀಡಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

“ಆಶಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಬೇಕು. ರಾಜ್ಯ ಸರ್ಕಾರವೊಂದನ್ನೇ ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸುವುದು ಸರಿಯಲ್ಲ. ಲಿಖಿತವಾಗಿ ಭರವಸೆ ಕೊಡಿ ಎಂದು ಕೇಳುತ್ತಿದ್ದಾರೆ. ಯಾವ ಸರ್ಕಾರಕ್ಕೂ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತವಾಗಿ ಬರೆದುಕೊಡಲು ಸಾಧ್ಯವಿಲ್ಲ” ಎಂದರು.

“ಆಶಾ ಕಾರ್ಯಕರ್ತೆಯರ ಸೇವೆಯನ್ನು ಸರ್ಕಾರ ಗೌರವಿಸುತ್ತದೆ. ಬೇರೆ ಕೆಲವು ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಇರುವ ಸೌಲಭ್ಯಗಳಿಗಿಂತ ಕರ್ನಾಟಕದಲ್ಲಿ ಉತ್ತಮ ರೀತಿಯಲ್ಲಿ ಗೌರವ ನೀಡಲಾಗುತ್ತಿದೆ ಎಂದು ಹೇಳಿದರು.

“ಅವರು ನಮ್ಮ ಹೆಣ್ಣುಮಕ್ಕಳು. ಆಶಾ ಕಾರ್ಯಕರ್ತೆಯರ ವ್ಯವಸ್ಥೆಯನ್ನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಆರಂಭಿಸಲಾಯಿತು. ಅವರ ಶ್ರಮದ ಬಗ್ಗೆ ನಮಗೆ ಗೌರವವಿದೆ. ಕೆಲವು ಪ್ರೋತ್ಸಾಹಧನಗಳ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವರ ಬಗ್ಗೆ ನನಗೂ ಸಹಾನುಭೂತಿಯಿದೆ. ಈ ವಿಚಾರವಾಗಿ ನಾನು ಈಗಾಗಲೇ ಅವರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಪ್ರತಿಭಟನೆ ನಡೆಸಿದವರ ನೋವು, ಸಮಸ್ಯೆ ಮತ್ತು ಬೇಡಿಕೆಗಳು ಸರ್ಕಾರಕ್ಕೆ ಅರ್ಥವಾಗಿವೆ” ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ರಾಜಕೀಯ ಬೆರೆಸಲಾಗುತ್ತಿದೆ. ಕೆಲವರು ರಾಜಕೀಯಕ್ಕಾಗಿ ಈ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರಾಗಿ ಬರುವುದು, ಸಿನಿಮಾ ಕ್ಷೇತ್ರದವರನ್ನು ಕಳುಹಿಸುವುದು, ಕಾರ್ಯಕರ್ತರನ್ನು ಕಳುಹಿಸುವುದು ಹೀಗೆ ಹಲವು ಬೆಳವಣಿಗೆಗಳು ನಡೆಯುತ್ತಿವೆ. ನನಗೆ ಇವೆಲ್ಲವೂ ಗೊತ್ತಿದೆ. ಅವರ ಹೋರಾಟವನ್ನು ರಾಜಕೀಯಗೊಳಿಸಬಾರದು. ಸರ್ಕಾರವನ್ನು ಎದುರಿಸುವ ಹೋರಾಟ ಎಂಬ ಭಾವನೆ ಮೂಡಬಾರದು” ಎಂದು ಹೇಳಿದರು.

“ಆಶಾ ಕಾರ್ಯಕರ್ತೆಯರಿಗೆ ಕೆಲಸಕ್ಕೆ ಮರಳುವಂತೆ ಮನವಿ ಮಾಡಿದ್ದೇನೆ. ಸರ್ಕಾರ ಅವರ ಬೇಡಿಕೆಗಳನ್ನು ನಿರ್ಲಕ್ಷಿಸಿಲ್ಲ” ಎಂದರು.

ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅನ್‌ಫಿಟ್ ಆಗಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಟೀಕೆಯ ಬಗ್ಗೆ ಕೇಳಿದಾಗ, “ಫಿಟ್ ಮಾಡಿಕೊಳ್ಳೋಣ. ಅವರೇ ಫಿಟ್ ಮಾಡಲಿ” ಎಂದು ತಿರುಗೇಟು ನೀಡಿದರು.

ಆಶಾ ಕಾರ್ಯಕರ್ತೆಯರಿಗೆ ಅಧಿವೇಶನದಲ್ಲಿ ಗುಡ್‌ನ್ಯೂಸ್ ನೀಡುವುದಾಗಿ ಹೇಳಿದ್ದೀರಿ ಎಂದು ಕೇಳಿದಾಗ, “ಅದೆಲ್ಲವನ್ನೂ ಚರ್ಚೆ ಮಾಡಬೇಕು. ಮಾಧ್ಯಮದವರು ಹೇಳುತ್ತಾರೆ ಎಂಬ ಕಾರಣಕ್ಕೆ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ನಾನು ಅವರೊಂದಿಗೆ ಮಾತನಾಡಿದ್ದೇನೆ” ಎಂದರು.

Share

Recent Posts

Recent Comments

No comments to show.
Related Articles