Home ದಾವಣಗೆರೆ ಅಮರನಾಥ ಮಾರ್ಗದ “ಶೇಷನಾಗ” ಸರೋವರದಲ್ಲಿ ಜೆಸಿಬಿ ಕಾರ್ಯಾಚರಣೆ: ಪರಿಸರ ನಾಶ ಹಾಗೂ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದೊಂದಿಗೆ ಭುಗಿಲೆದ್ದ ಆಕ್ರೋಶ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಅಮರನಾಥ ಮಾರ್ಗದ “ಶೇಷನಾಗ” ಸರೋವರದಲ್ಲಿ ಜೆಸಿಬಿ ಕಾರ್ಯಾಚರಣೆ: ಪರಿಸರ ನಾಶ ಹಾಗೂ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದೊಂದಿಗೆ ಭುಗಿಲೆದ್ದ ಆಕ್ರೋಶ!

Share
ಶೇಷನಾಗ
Share

ಶ್ರೀನಗರ: ಅಮರನಾಥ ಯಾತ್ರೆಯ ಮಾರ್ಗದಲ್ಲಿರುವ ಕಾಶ್ಮೀರದ ಪವಿತ್ರ ಶೇಷನಾಗ ಸರೋವರದ ಬಳಿ ಜೆಸಿಬಿ ಹಾಗೂ ಭಾರಿ ಯಂತ್ರೋಪಕರಣಗಳನ್ನು ಬಳಸಿ ರಸ್ತೆ ನಿರ್ಮಾಣ ಹಾಗೂ ಗುಡ್ಡ ಅಗೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರ ಆಕ್ರೋಶ ಹಾಗೂ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿಯಾಗುವ ಭೀತಿಯ ಜತೆಗೆ, ಇದು ಹಿಂದೂ ಧರ್ಮದ ನಂಬಿಕೆ ಹಾಗೂ ಪವಿತ್ರತೆಗೆ ಎಸಗಿರುವ ಅಪರಾಧ ಎಂದು ವಿಪಕ್ಷಗಳು ಮತ್ತು ಸ್ಥಳೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಅನಂತನಾಗ್ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ 11,780 ಅಡಿ ಎತ್ತರದಲ್ಲಿರುವ ಶೇಷನಾಗ ಸರೋವರವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ದೇವದೇವ ಮಹಾದೇವನು ಅಮರನಾಥ ಗುಹೆಗೆ ತೆರಳುವ ಮುನ್ನ ತನ್ನ ಮೈಯಲ್ಲಿದ್ದ ಸರ್ಪಗಳನ್ನು ಇಲ್ಲಿ ಬಿಟ್ಟುಹೋಗಿದ್ದನೆಂಬ ಧಾರ್ಮಿಕ ನಂಬಿಕೆಯಿದೆ. ಆದರೆ, ಪ್ರಸ್ತುತ ಇಲ್ಲಿ ಭಾರೀ ಯಂತ್ರಗಳನ್ನು ಬಳಸಿ ಮಣ್ಣು ತೆಗೆಯುತ್ತಿರುವುದು ಪರಿಸರವಾದಿಗಳ ಕಂಗಣ್ಣಿಗೆ ಗುರಿಯಾಗಿದೆ.

ಗ್ಲೇಶಿಯಲ್ ಸರೋವರವಾಗಿರುವ ಕಾರಣ ಇಲ್ಲಿ ಅನಧಿಕೃತ ನಿರ್ಮಾಣಗಳು ನೇಪಾಳ ಮಾದರಿಯ ಪ್ರಾಕೃತಿಕ ವಿಪತ್ತಿಗೆ ಆಹ್ವಾನ ನೀಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಗಡಿ ರಸ್ತೆಗಳ ಸಂಸ್ಥೆ ಸ್ಪಷ್ಟನೆ: ಅಮರನಾಥ ಯಾತ್ರೆಯ ಹಾದಿಯನ್ನು ಸುಲಭಗೊಳಿಸಲು ಮತ್ತು ಹಿಂದಿನ ಅನುಭವಗಳ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಹಾದಿಯನ್ನು ಅಗಲೀಕರಣಗೊಳಿಸುವ ಹಾಗೂ ಸುರಕ್ಷಿತಗೊಳಿಸುವ ಕಾಮಗಾರಿಯನ್ನು ಮಾತ್ರ ಪರಿಸರ ನಿಯಮಗಳನ್ನು ಪಾಲಿಸಿ ನಡೆಸಲಾಗುತ್ತಿದೆ ಎಂದು ಬಿಆರ್‌ಒ  ಸ್ಪಷ್ಟಪಡಿಸಿದೆ.

ರಾಜಕೀಯ ನಾಯಕರಿಂದ ತೀವ್ರ ವಿರೋಧ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಶೇಷನಾಗ ಕಡೆಗೆ ತೆರಳಲು ಯತ್ನಿಸಿದಾಗ ಪೊಲೀಸರು ತಡೆದಿದ್ದಾರೆ. ಇದು ಮಾನವ ನಿರ್ಮಿತ ವಿಪತ್ತಿಗೆ ದಾರಿ ಮಾಡಿಕೊಡಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಪಿಡಿಪಿ ನಾಯಕ ಮೊಹಿತ್ ಭಾನ್ ಇದನ್ನು “ಹಿಂದೂ ನಂಬಿಕೆಯ ಮೇಲಿನ ಅಪರಾಧ” ಎಂದು ಜರೆದಿದ್ದಾರೆ.

ಕಾಂಗ್ರೆಸ್ ಹಾಗೂ ಎಡಪಕ್ಷಗಳ ಆಕ್ರೋಶ: ಹಿರಿಯ ಕಾಂಗ್ರೆಸ್ ನಾಯಕ ಪವನ್ ಮತ್ತು ಸಿಪಿಐ(ಎಂ) ಮುಖಂಡ ಎಂ.ವೈ. ತಾರಿಗಾಮಿ ಅವರು ಮಾತನಾಡಿ, ಸೂಕ್ಷ್ಮ ಹಿಮಾಲಯನ್ ಪರಿಸರ ವಲಯದಲ್ಲಿ ಇಂತಹ ನಿರ್ಮಾಣ ಕಾರ್ಯಗಳು ಅಪಾಯಕಾರಿ ಎಂದಿದ್ದು, ಕೂಡಲೇ ಪರಿಸರ ತಜ್ಞರ ತಂಡದಿಂದ ಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ.

ಬಸ್ ಅಥವಾ ವಾಹನಗಳು ನೇರವಾಗಿ ಸರೋವರದ ತಲುಪಲು ರಸ್ತೆಯಿಲ್ಲದ ಕಾರಣ, ಚಂದನ್‌ವಾರಿಯಿಂದ ಸುಮಾರು 18-20 ಕಿ.ಮೀ ಟ್ರಕ್ಕಿಂಗ್ ಮಾಡಬೇಕಾಗುತ್ತದೆ. ಸದ್ಯ ಈ ವಿವಾದವು ಕಣಿವೆ ರಾಜ್ಯದಲ್ಲಿ ಧಾರ್ಮಿಕ ಮತ್ತು ಪರಿಸರ ವಿಚಾರವಾಗಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

Share

Recent Posts

Recent Comments

No comments to show.
Related Articles