Home ಕ್ರೈಂ ನ್ಯೂಸ್ ಶಾಲಾ ಪುನರ್ಮಿಲನದಲ್ಲಿ ಚಿಗುರಿದ್ದ ಪ್ರೀತಿ: ಹಳೇ ಗೆಳತಿ ಹಾಗೂ ಆಕೆ ಸಂಬಂಧಿಕನ ಕಡಿದು ಕೊಂದ ಪಾಪಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಶಾಲಾ ಪುನರ್ಮಿಲನದಲ್ಲಿ ಚಿಗುರಿದ್ದ ಪ್ರೀತಿ: ಹಳೇ ಗೆಳತಿ ಹಾಗೂ ಆಕೆ ಸಂಬಂಧಿಕನ ಕಡಿದು ಕೊಂದ ಪಾಪಿ!

Share
ಪ್ರೀತಿ
Share

ತಿರುಪತ್ತೂರು (ತಮಿಳುನಾಡು): ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಪ್ರೇಮ ವೈಫಲ್ಯ ಹಾಗೂ ಅಸೂಯೆಯಿಂದಾಗಿ ನಡೆದ ಭೀಕರ ಹತ್ಯಾಕಾಂಡವೊಂದು ರಾಜ್ಯದಲ್ಲಿ ತಲ್ಲಣ ಮೂಡಿಸಿದೆ. ಶಾಲಾ ಪುನರ್ಮಿಲನದಲ್ಲಿ ಪರಿಚಯವಾಗಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಮಾಲಿನಿ ಹಾಗೂ ಮತ್ತೊಬ್ಬ ಯುವಕ ರಂಜಿತ್ ಕುಮಾರ್ ಎಂಬುವವರನ್ನು ಆರೋಪಿ ಸಂಜಯ್ ಗಾಂಧಿ ಎಂಬಾತ ಕ್ಯಾಬ್‌ನಿಂದ ಇಳಿಯುತ್ತಿದ್ದಂತೆ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದಾನೆ.

ಹಳೇ ಗೆಳತಿ ಮಾಲಿನಿ ಇತ್ತೀಚೆಗೆ ತನಗಿಂದ ದೂರಾಗುತ್ತಿದ್ದು, ಬೇರೆ ಯುವಕ ರಂಜಿತ್ ಕುಮಾರ್ ಜೊತೆ ನಿಕಟವಾಗಿದ್ದಾಳೆ ಎಂಬ ಅಸೂಯೆಯಿಂದ ಕಾರ್ಮಿಕನಾಗಿರುವ ಸಂಜಯ್ ಗಾಂಧಿ ಈ ಕೃತ್ಯ ಎಸಗಿದ್ದಾನೆ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಸಂಜಯ್ ಗಾಂಧಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

ಘಟನೆಯ ಹಿನ್ನೆಲೆ: ತಿರುವಣ್ಣಾಮಲೈ ಜಿಲ್ಲೆಯ ಒಂದೇ ಶಾಲೆಯಲ್ಲಿ ಓದಿದ್ದ ಸಂಜಯ್ ಗಾಂಧಿ ಹಾಗೂ ಮಾಲಿನಿ, ಕಳೆದ ವರ್ಷ ನಡೆದ ಶಾಲಾ ಪುನರ್ಮಿಲನ ಕಾರ್ಯಕ್ರಮದಲ್ಲಿ ಭೇಟಿಯಾದ ಬಳಿಕ ಪ್ರೇಮದ ಬಲೆಗೆ ಬಿದ್ದಿದ್ದರು. ಆದರೆ ಮಾಲಿನಿ ತನಗಿಂದ ದೂರಾಗುತ್ತಿದ್ದಾಳೆ ಎಂಬ ಕೋಪ ಆರೋಪಿಯಲ್ಲಿತ್ತು.

ಹೌಸಿಂಗ್ ಸೈಟ್ ಬಳಿ ಹತ್ಯೆ: ಮಾಲಿನಿ ಹಾಗೂ ಆಕೆಯ ಸಂಬಂಧಿ ರಂಜಿತ್ ಕುಮಾರ್ ಹೌಸಿಂಗ್ ಪ್ಲಾಟ್ ಸೈಟ್‌ಗೆ ತೆರಳಲು ಕ್ಯಾಬ್‌ನಿಂದ ಇಳಿಯುತ್ತಿದ್ದಂತೆಯೇ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿ ಇಬ್ಬರನ್ನೂ ಭೀಕರವಾಗಿ ಹತ್ಯೆ ಮಾಡಲಾಗಿದೆ.

ರಾಜಕೀಯ ವಾಕ್ಸಮರ: ಈ ಘಟನೆಯು ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

Share

Recent Posts

Recent Comments

No comments to show.
Related Articles