Home ಕ್ರೈಂ ನ್ಯೂಸ್ ಪೋಷಕರೇ ಹುಷಾರ್: ಮಗಳು ತಯಾರಿಸಿದ್ದ ನೂಡಲ್ಸ್ ತಿಂದು 7 ವರ್ಷದ ಬಾಲಕಿ ಸಾವು, ಅಕ್ಕ ಅಸ್ವಸ್ಥ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪೋಷಕರೇ ಹುಷಾರ್: ಮಗಳು ತಯಾರಿಸಿದ್ದ ನೂಡಲ್ಸ್ ತಿಂದು 7 ವರ್ಷದ ಬಾಲಕಿ ಸಾವು, ಅಕ್ಕ ಅಸ್ವಸ್ಥ!

Share
ನೂಡಲ್ಸ್
Share

ಜೈಪುರ (ರಾಜಸ್ಥಾನ): ರಾಜಸ್ಥಾನದ ಜೈಪುರದಲ್ಲಿ ಮನೆಯಲ್ಲಿ ತಾವೇ ತಯಾರಿಸಿದ ನೂಡಲ್ಸ್ ತಿಂದ ಪರಿಣಾಮ 7 ವರ್ಷದ ಬಾಲಕಿಯೊಬ್ಬಳು ಮೃತಪಟ್ಟು, ಆಕೆಯ ಅಕ್ಕ ಅಸ್ವಸ್ಥಗೊಂಡಿರುವ ದಾರುಣ ಘಟನೆ ವರದಿಯಾಗಿದೆ. ಮೇಲ್ನೋಟಕ್ಕೆ ಇದು ಆಹಾರ ವಿಷಬಾಧೆ  ಎಂದು ಶಂಕಿಸಲಾಗಿದ್ದು, ಪೊಲೀಸರು ನೂಡಲ್ಸ್ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (Lab) ಪರೀಕ್ಷೆಗೆ ಕಳುಹಿಸಿದ್ದಾರೆ.

ನವೆಂಬರ್ 19 ರಂದು ಈ ಘಟನೆ ನಡೆದಿದ್ದು, ಬಾಲಕಿಯರಾದ ಪೀಹು ಕುಮಾವತ್ ಹಾಗೂ ದಿವ್ಯಾಂಶಿ ಮನೆಯಲ್ಲಿ ಒಂಟಿಯಾಗಿದ್ದಾಗ ನೂಡಲ್ಸ್ ತಯಾರಿಸಿ ತಿಂದಿದ್ದಾರೆ. ತಿಂದು ಮುಗಿಸಿದ ಬಳಿಕ ಇಬ್ಬರೂ ನಿದ್ದೆ ಮಾಡಿದ್ದಾರೆ. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತಾಯಿ ಮನೆಗೆ ವಾಪಸಾದಾಗ ಅಕ್ಕ ದಿವ್ಯಾಂಶಿ ಅಸ್ವಸ್ಥಳಾಗಿ ಎಚ್ಚರಗೊಂಡಿದ್ದಳು. ಆದರೆ, ಕಿರಿಯ ಮಗಳು ಪೀಹು ಪ್ರಜ್ಞೆ ತಪ್ಪಿ ಬಿದ್ದಿದ್ದಳು. ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಪೀಹು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಚಿಕಿತ್ಸೆ ಪಡೆದ ದಿವ್ಯಾಂಶಿ ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮನೆಯಲ್ಲಿ ಒಂಟಿಯಾಗಿದ್ದ ಮಕ್ಕಳು: ಪೋಷಕರು ಹೊರಗಿದ್ದಾಗ ಇಬ್ಬರು ಹೆಣ್ಣುಮಕ್ಕಳು ಮನೆಯಲ್ಲಿ ನೂಡಲ್ಸ್ ಮಾಡಿಕೊಂಡು ತಿಂದಿದ್ದು, ಬಾಲಕಿಯರ ಮತ್ತೊಬ್ಬ ಸಹೋದರ ಗೋವಿಂದ್ ಅನಾರೋಗ್ಯದಿಂದ ಕಳೆದ ಎರಡು ತಿಂಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮರಣೋತ್ತರ ಪರೀಕ್ಷೆ: ಪ್ರಾಥಮಿಕ ತನಿಖೆಯಿಂದ ಆಹಾರ ವಿಷಬಾಧೆ ಎಂದು ತಿಳಿದುಬಂದಿದ್ದರೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ತನಿಖೆ: ಮೃತರ ಕುಟುಂಬಸ್ಥರು ಕಾರ್ಧಾನಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ನೂಡಲ್ಸ್ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ.

Share
Related Articles