Home ದಾವಣಗೆರೆ ಭದ್ರಾ ಎಡ ಮತ್ತು ಬಲ ನಾಲೆಗಳ ನೀರು ತಾತ್ಕಾಲಿಕ ಬಂದ್, ಡಿಸೆಂಬರ್ 1 ಅಥವಾ 2ರಂದು ಐಸಿಸಿ ಸಭೆಯಲ್ಲಿ ನಿರ್ಧಾರ: ಎಚ್.ಆರ್. ಲಿಂಗರಾಜ್ ಶಾಮನೂರು ಮಾಹಿತಿ
ದಾವಣಗೆರೆನವದೆಹಲಿಬೆಂಗಳೂರು

ಭದ್ರಾ ಎಡ ಮತ್ತು ಬಲ ನಾಲೆಗಳ ನೀರು ತಾತ್ಕಾಲಿಕ ಬಂದ್, ಡಿಸೆಂಬರ್ 1 ಅಥವಾ 2ರಂದು ಐಸಿಸಿ ಸಭೆಯಲ್ಲಿ ನಿರ್ಧಾರ: ಎಚ್.ಆರ್. ಲಿಂಗರಾಜ್ ಶಾಮನೂರು ಮಾಹಿತಿ

Share
ಭದ್ರಾ
Share

ದಾವಣಗೆರೆ/ಬೆಂಗಳೂರು: ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಎಲ್ಲ ಶಾಸಕರೊಂದಿಗೆ ನಡೆದ ಸುದೀರ್ಘ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಭದ್ರಾ ಅಣೆಕಟ್ಟೆಯಿಂದ ಎಡ ಮತ್ತು ಬಲ ನಾಲೆಗಳಿಗೆ ಹರಿಸಲಾಗುತ್ತಿದ್ದ ನೀರನ್ನು ಸದ್ಯಕ್ಕೆ ನಿಲ್ಲಿಸಲು ಆದೇಶ ಹೊರಡಿಸಲಾಗಿದೆ ಎಂದು ಭಾರತೀಯ ರೈತ ಒಕ್ಕೂಟದ ದಾವಣಗೆರೆ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ್ ಶಾಮನೂರು ತಿಳಿಸಿದ್ದಾರೆ.

ನಾಡಿನ ರೈತರ ಹಿತಾಸಕ್ತಿ ಹಾಗೂ ನೀರಿನ ಲಭ್ಯತೆಯನ್ನು ಪರಿಗಣಿಸಿ ಸಭೆಯಲ್ಲಿ ಕೈಗೊಂಡಿರುವ ಪ್ರಮುಖ ನಿರ್ಣಯಗಳ ವಿವರಗಳನ್ನು ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ನೀರು ಬಿಡುಗಡೆ ತಾತ್ಕಾಲಿಕ ಸ್ಥಗಿತ: ಭದ್ರಾ ಜಲಾಶಯದಿಂದ ಎಡ ಹಾಗೂ ಬಲ ನಾಲೆಗಳಿಗೆ ಪ್ರಸ್ತುತ ಹರಿಸಲಾಗುತ್ತಿರುವ ನೀರನ್ನು ನಿಲ್ಲಿಸುವಂತೆ ಆದೇಶಿಸಲಾಗಿದ್ದು, ಇದರ ಅಧಿಕೃತ ಆದೇಶದ ಪ್ರತಿ ಇಂದೇ ರಾತ್ರಿಯೊಳಗೆ ಲಭ್ಯವಾಗಲಿದೆ.

ಡಿಸೆಂಬರ್ 1 ಅಥವಾ 2ರಂದು ಐಸಿಸಿ ಸಭೆ: ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಬೇಸಿಗೆ ಬೆಳೆಯ ನೀರಾವರಿಗೆ (ಅಂಗವಿ) ನಿರಂತರವಾಗಿ ನೀರು ಒದಗಿಸುವ ಕುರಿತು ಡಿಸೆಂಬರ್ 1 ಅಥವಾ 2ರಂದು ಐಸಿಸಿ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ರೈತ ಒಕ್ಕೂಟದಿಂದ ಮನವಿ: ಭದ್ರಾ ಅಚ್ಚುಕಟ್ಟು ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಈ ಸಭೆಯ ತೀರ್ಮಾನದಂತೆ ರೈತರು ಸಹಕರಿಸಬೇಕು ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಎಚ್.ಆರ್. ಲಿಂಗರಾಜ್ ಶಾಮನೂರು ಕೋರಿದ್ದಾರೆ.

Share

Recent Posts

Recent Comments

No comments to show.
Related Articles