Home ಕ್ರೈಂ ನ್ಯೂಸ್ ಜಮ್ಮು-ಕಾಶ್ಮೀರದ ಕುಲ್ಗಾಮ್ ದಾಳಿಗೂ ಮುನ್ನ ಸಿಸಿಟಿವಿಯಲ್ಲಿ ಸೆರೆಯಾದ ಉಗ್ರರ ಸಂಚು: ಎನ್‌ಕೌಂಟರ್‌ನಲ್ಲಿ ಲಷ್ಕರ್ ಉಗ್ರ ಹತ್ಯೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಜಮ್ಮು-ಕಾಶ್ಮೀರದ ಕುಲ್ಗಾಮ್ ದಾಳಿಗೂ ಮುನ್ನ ಸಿಸಿಟಿವಿಯಲ್ಲಿ ಸೆರೆಯಾದ ಉಗ್ರರ ಸಂಚು: ಎನ್‌ಕೌಂಟರ್‌ನಲ್ಲಿ ಲಷ್ಕರ್ ಉಗ್ರ ಹತ್ಯೆ!

Share
ಕುಲ್ಗಾಮ್
Share

ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್  ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸುವ ಮುನ್ನ ದಿನ ಉಗ್ರರು ಸ್ಥಳವನ್ನು ಪರಿಶೀಲನೆ ನಡೆಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಷ್ಕರ್-ಎ-ತೈಬಾ (LeT) ಕಮಾಂಡರ್ ಲತೀಫ್ ಭಟ್ ಹಾಗೂ ಹತ್ಯೆಗೀಡಾದ ಉಗ್ರ ಉಮರ್ ನಿಸಾರ್ ದಾರ್ ಅವರು ದಾಳಿಗೂ ಮುನ್ನ ವಿವಿಧ ಪ್ರದೇಶಗಳಲ್ಲಿ ತಿರುಗಾಡಿ ಸಂಚು ರೂಪಿಸಿದ್ದಕ್ಕೆ ಸಾಕ್ಷ್ಯಗಳು ಲಭಿಸಿವೆ. ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಉಮರ್ ಹತ್ಯೆಯಾಗಿದ್ದು, ಗುಂಡೇಟು ತಿಂದಿದ್ದ ಲತೀಫ್ ಭಟ್ ಪರಾರಿಯಾಗಿದ್ದಾನೆ.

ನವೆಂಬರ್ 10 ರಂದು ಮೀರ್ ಬಜಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಮ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಉಗ್ರರು ಬೈಕ್ ಹಾಗೂ ಕಾಲ್ನಡಿಗೆಯಲ್ಲಿ ಸಂಚರಿಸಿ ಭದ್ರತಾ ಪಡೆಗಳ ಮೇಲೆ ದಾಳಿಗೆ ಸ್ಥಳ ಗುರುತಿಸಿದ್ದರು. ನವೆಂಬರ್ 11 ರಂದು ನಡೆದ ದಾಳಿಯ ಬಳಿಕ ಅವರು ಪರಾರಿಯಾದ ದೃಶ್ಯಗಳೂ ಸಿಸಿಟಿವಿಯಲ್ಲಿ ದಾಖಲಾಗಿವೆ. ಕಳೆದ 5-6 ತಿಂಗಳಿಂದ ಉಮರ್ ನಿಸಾರ್ ದಾರ್ ಈ ಲಷ್ಕರ್ ಕಮಾಂಡರ್‌ಗೆ ಆಶ್ರಯ ನೀಡಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಎನ್‌ಕೌಂಟರ್ ವಿವರ: ಕುಲ್ಗಾಮ್‌ನ ಲಾರೂ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಉಮರ್ ನಿಸಾರ್ ದಾರ್ ಹತ್ಯೆಯಾಗಿದ್ದು, ಗಾಯಗೊಂಡಿದ್ದ ಲತೀಫ್ ಭಟ್ ತಪ್ಪಿಸಿಕೊಂಡಿದ್ದಾನೆ.

ಸಿಸಿಟಿಪಿ ಕಣ್ಗಾವಲು: ದಾಳಿಗೂ ಮುನ್ನ ಉಗ್ರರು ಪ್ರದೇಶವನ್ನು ಸುತ್ತಿ ವೀಕ್ಷಣೆ ಮಾಡುತ್ತಿದ್ದ ದೃಶ್ಯಗಳು ವಿವಿಧ ಕಡೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ತೀವ್ರ ಶೋಧ: ಪರಾರಿಯಾಗಿರುವ ಲಷ್ಕರ್-ಎ-ತೈಬಾ ಕಮಾಂಡರ್ ಲತೀಫ್ ಭಟ್ ಪತ್ತೆಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

Share

Leave a comment

Leave a Reply

Your email address will not be published. Required fields are marked *

Related Articles