Home ಕ್ರೈಂ ನ್ಯೂಸ್ ಸಂಸಾರದ ಕಲಹ ಬಗೆಹರಿಸಲು AI ಮೊರೆ ಹೋದ ಪತಿ: ಚಾಟ್‌ಬಾಟ್ ನೀಡಿದ ಸಲಹೆ ಕೇಳಿ ದೊಡ್ಡ ಶಾಕ್!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಸಂಸಾರದ ಕಲಹ ಬಗೆಹರಿಸಲು AI ಮೊರೆ ಹೋದ ಪತಿ: ಚಾಟ್‌ಬಾಟ್ ನೀಡಿದ ಸಲಹೆ ಕೇಳಿ ದೊಡ್ಡ ಶಾಕ್!

Share
ಪತಿ
Share

ವಡೋದರಾ: ಗುಜರಾತ್‌ನ ವಡೋದರಾದಲ್ಲಿ ಸಂಸಾರಿಕ ಕಲಹಗಳನ್ನು ಬಗೆಹರಿಸಿಕೊಳ್ಳಲು ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಸಲಹೆ ಪಡೆದ ಶಿಕ್ಷಕರೊಬ್ಬರು, ಕೊನೆಗೆ ಪತ್ನಿ ಜತೆಗಿನ ಸಂಬಂಧವನ್ನೇ ಮುರಿದುಕೊಳ್ಳಲು ಮುಂದಾಗಿರುವ ಅಚ್ಚರಿಯ ಘಟನೆ ನಡೆದಿದೆ.

ದಂಪತಿಗಳ ನಡುವಿನ ಸಣ್ಣಪುಟ್ಟ ಜಗಳಗಳನ್ನು ಪರಿಹರಿಸುವಂತೆ AI ಚಾಟ್‌ಬಾಟ್ ಕೇಳಿದಾಗ, ಅದು ‘ವಿಚ್ಛೇದನ’  ಪಡೆದುಕೊಳ್ಳುವಂತೆ ಸಲಹೆ ನೀಡಿದೆ. ಇದರಿಂದ ವಿಚಲಿತರಾದ ಪತ್ನಿ ಮಹಿಳಾ ಸಹಾಯವಾಣಿಯ ಮೊರೆ ಹೋಗಿದ್ದಾರೆ.

ವಡೋದರಾದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿರುವ 25 ವರ್ಷದ ಯುವಕ ಹಾಗೂ ಅವರ ಪತ್ನಿಗೆ ಮದುವೆಯಾಗಿ ಎರಡು ವರ್ಷಗಳಾಗಿದ್ದವು. ಪತ್ನಿ ಉದ್ಯೋಗ ಬಿಟ್ಟು ಗೃಹಿಣಿಯಾಗಿರಲು ಬಯಸಿದರೆ, ಪತಿ ಮಾತ್ರ ಆಕೆ ಕೆಲಸಕ್ಕೆ ಹೋಗಬೇಕೆಂದು ಒತ್ತಾಯಿಸುತ್ತಿದ್ದರು. ಈ ವಿಚಾರವಾಗಿ ಕಳೆದ ಆರು ತಿಂಗಳಿಂದ ದಂಪತಿ ನಡುವೆ ನಿರಂತರ ವಾಗ್ವಾದ ನಡೆಯುತ್ತಿತ್ತು. ಸಮಸ್ಯೆ ಬಗೆಹರಿಸಿಕೊಳ್ಳಲು ಗಂಡ AI ಚಾಟ್‌ಬಾಟ್ ಬಳಸಲು ಆರಂಭಿಸಿದ್ದರು.

AI ಸಲಹೆಗಳು: ದಂಪತಿಗಳ ಜಗಳವನ್ನು ಆಡಿಯೋ ಹಾಗೂ ವೀಡಿಯೊ ರೂಪದಲ್ಲಿ ರೆಕಾರ್ಡ್ ಮಾಡುವಂತೆ AI ಸಲಹೆ ನೀಡಿತ್ತು. ಅದರಂತೆ ಪತಿ ಜಗಳಗಳನ್ನು ರೆಕಾರ್ಡ್ ಮಾಡಲು ಆರಂಭಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು.

ವಿಚ್ಛೇದನಕ್ಕೆ ಪಟ್ಟು: ನಿರಂತರ ಚರ್ಚೆಯ ಬಳಿಕ ದಂಪತಿ ಬೇರೆಯಾಗುವುದೇ ಸೂಕ್ತ ಎಂದು AI ಚಾಟ್‌ಬಾಟ್ ಸಲಹೆ ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪತಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು.

ಅಭಯಂ ಸಹಾಯವಾಣಿ ಮಧ್ಯಸ್ಥಿಕೆ: ಸಂಸಾರ ಉಳಿಸಿಕೊಳ್ಳಲು ಬಯಸಿದ ಪತ್ನಿ ‘ಅಭಯಂ’ ಮಹಿಳಾ ಸಹಾಯವಾಣಿಗೆ ಕರೆ ಮಾಡಿದರು. ಕೌನ್ಸಿಲರ್‌ಗಳು ದಂಪತಿಗೆ ಯಂತ್ರದ ಸಲಹೆ ಕೇಳಿ ಮದುವೆ ಮುರಿಯಬೇಡಿ ಎಂದು ಬುದ್ಧಿಮಾತು ಹೇಳಿದರು.

ಕೌನ್ಸಿಲಿಂಗ್ ಬಳಿಕ ಎಚ್ಚೆತ್ತ ಪತಿ-ಪತ್ನಿ ತಮ್ಮ ತಪ್ಪುಗಳನ್ನು ಅರಿತು ಪರಸ್ಪರ ಮಾತುಕತೆ ಮೂಲಕ ರಾಜಿಗೆ ಬಂದಿದ್ದು, ಸದ್ಯ ಸಂಸಾರದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles