Home ಕ್ರೈಂ ನ್ಯೂಸ್ ಏರ್‌ಪೋರ್ಟ್ ಉದ್ಯೋಗಿ ವರ್ಷಾ ತುರ್ಕರ್ ಕೊಲೆ ಪ್ರಕರಣ: ಸ್ನೇಹಿತ ವಶಕ್ಕೆ, ಮುಖಗವಸಿನವರ ದಾಳಿ ನಾಟಕ ಬಯಲು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಏರ್‌ಪೋರ್ಟ್ ಉದ್ಯೋಗಿ ವರ್ಷಾ ತುರ್ಕರ್ ಕೊಲೆ ಪ್ರಕರಣ: ಸ್ನೇಹಿತ ವಶಕ್ಕೆ, ಮುಖಗವಸಿನವರ ದಾಳಿ ನಾಟಕ ಬಯಲು!

Share
ಏರ್‌ಪೋರ್ಟ್
Share

ಬಾಲಾಘಾಟ್ / ಗೋಂಡಿಯಾ: ಪುಣೆ ವಿಮಾನ ನಿಲ್ದಾಣದ ಇಂಡಿಗೋ ಟಿಕೆಟ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ವರ್ಷಾ ತುರ್ಕರ್ ಎಂಬ ಮಹಿಳಾ ಉದ್ಯೋಗಿ, ದೀಪಾವಳಿ ಹಬ್ಬವನ್ನು ಆಚರಿಸಲು ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದ ವೇಳೆ ಭೀಕರ ಹತ್ಯೆಗೆ ಒಳಗಾಗಿದ್ದಾರೆ.

ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ಗಡಿಭಾಗದ ಬೊಂಡ್ರಾನಿ ಅರಣ್ಯ ಪ್ರದೇಶದಲ್ಲಿ ರಕ್ತದ ಮಡುವಿನಲ್ಲಿ ವರ್ಷಾ ಅವರ ಶವ ಪತ್ತೆಯಾಗಿದ್ದು, ಪೊಲೀಸರು ಕೊಲೆ ಕೋನದಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅವರೊಂದಿಗೆ ತೆರಳಿದ್ದ ನಿತೇಶ್ ಅಗರ್ವಾಲ್ ಎಂಬ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಶನಿವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ವರ್ಷಾ ಅವರು ಸ್ನೇಹಿತ ನಿತೇಶ್ ಅಗರ್ವಾಲ್ ಜೊತೆ ವೈಂಗಂಗಾ ನದಿ ತೀರಕ್ಕೆ ತೆರಳಿದ್ದರು.

ಕೆಲವು ಗಂಟೆಗಳ ಬಳಿಕ ನಿತೇಶ್, ವರ್ಷಾ ಅವರ ಕುಟುಂಬಸ್ಥರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ತೆರಳಿದ ಕುಟುಂಬಸ್ಥರಿಗೆ ವರ್ಷಾ ತೀವ್ರವಾಗಿ ರಕ್ತಸ್ರಾವಗೊಂಡು ಗಾಯಗೊಂಡಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ತಮ್ಮ ಮೇಲೆ ಅಪರಿಚಿತ ಮುಖಗವ ಧರಿಸಿದ ದುಷ್ಕರ್ಮಿಗಳು ಹಲ್ಲೆ ನಡೆಸಿ ದರೋಡೆ ಮಾಡ1ದಿದ್ದಾರೆ ಎಂದು ಸ್ನೇಹಿತ ನಿತೇಶ್ ಸಮರ್ಥಿಸಿಕೊಂಡಿದ್ದಾನೆ. ಆದರೆ ಯಾವುದೇ ಗಾಯಗಳಿಲ್ಲದೆ ಆತ ಸುರಕ್ಷಿತವಾಗಿರುವುದು ಪೊಲೀಸರಿಗೆ ಅನುಮಾನ ಮೂಡಿಸಿದ್ದು, ಆತನ ಹೇಳಿಕೆಯಲ್ಲಿನ ವೈರುತ್ಯಗಳ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ದೀಪಾವಳಿ ರಜೆ ದುರಂತ: ಪುಣೆ ವಿಮಾನ ನಿಲ್ದಾಣದಲ್ಲಿ ಉದ್ಯೋಗದಲ್ಲಿದ್ದ ವರ್ಷಾ, ತಮ್ಮ ಎರಡೂವರೆ ವರ್ಷದ ಮಗಳೊಂದಿಗೆ ದೀಪಾವಳಿ ಹಬ್ಬ ಆಚರಿಸಲು ತವರಿಗೆ ಬಂದಿದ್ದಾಗ ಈ ದುರಘಟನೆ ಸಂಭವಿಸಿದೆ.

ಸ್ನೇಹಿತನ ವಿರುದ್ಧ ಅನುಮಾನ: ಮುಖಗವ ಧರಿಸಿದ ವ್ಯಕ್ತಿಗಳು ಹಲ್ಲೆ ನಡೆಸಿರುವುದಾಗಿ ಸ್ನೇಹಿತ ನಿತೇಶ್ ಸುಳ್ಳು ಕಥೆ ಕಟ್ಟಿದ್ದು, ಆತನಿಗೆ ಯಾವುದೇ ಗಾಯಗಳಾಗದಿರುವುದು ಪೊಲೀಸರ ತನಿಖೆಗೆ ಪ್ರಮುಖ ಸುಳುವಾಗಿದೆ.

ತನಿಖೆ ಚುರುಕು: ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಗಡಿಭಾಗದಲ್ಲಿ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವ ಪೊಲೀಸರು ಕೊಲೆ ಮತ್ತು ದರೋಡೆ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *