Home ಕ್ರೈಂ ನ್ಯೂಸ್ ಪೋಸ್ಟ್ ಆಫೀಸ್‌ನಲ್ಲಿ ಕೋಟ್ಯಂತರ ರೂ. ಹಗರಣ: ಮೃತ ದಂಪತಿ ಖಾತೆಯಿಂದ ಹಣ ಲಪಟಾಯಿಸಿದ ಇಬ್ಬರು ಉದ್ಯೋಗಿಗಳು ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪೋಸ್ಟ್ ಆಫೀಸ್‌ನಲ್ಲಿ ಕೋಟ್ಯಂತರ ರೂ. ಹಗರಣ: ಮೃತ ದಂಪತಿ ಖಾತೆಯಿಂದ ಹಣ ಲಪಟಾಯಿಸಿದ ಇಬ್ಬರು ಉದ್ಯೋಗಿಗಳು ಬಂಧನ!

Share
ದಂಪತಿ
Share

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಘಟಂಪುರ್ ಉಪ ಅಂಚೆ ಕಚೇರಿಯಲ್ಲಿ ಕೋಟ್ಯಂತರ ರೂಪಾಯಿಗಳ ಬ್ರಹ್ಮಾಂಡ ಹಗರಣ ಬೆಳಕಿಗೆ ಬಂದಿದೆ. ಮೃತ ದಂಪತಿಯೊಬ್ಬರ ಜಂಟಿ ಉಳಿತಾಯ ಖಾತೆಯಿಂದ ಅವರು ತೀರಿಕೊಂಡ ನಂತರವೂ ಲಕ್ಷಾಂತರ ರೂಪಾಯಿಗಳನ್ನು ಅಕ್ರಮವಾಗಿ ಡ್ರಾ ಮಾಡಲಾಗಿದೆ.

ಅಷ್ಟೇ ಅಲ್ಲದೆ, ಹಲವು ಗ್ರಾಮಸ್ಥರು ತಾವು ವರ್ಷಗಟ್ಟಲೆ ಹಣ ಪಾವತಿಸಿ ಖಾತೆ ತೆರೆದಿದ್ದರೂ, ಪೋಸ್ಟ್ ಆಫೀಸ್ ದಾಖಲೆಗಳಲ್ಲಿ ಯಾವುದೇ ಠೇವಣಿ ಇಲ್ಲದಿರುವುದು ಹಾಗೂ ಕೆಲವರ ಹೆಸರಿನಲ್ಲಿ ಖಾತೆಯೇ ಸೃಷ್ಟಿಯಾಗಿಲ್ಲದಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.

ಈ ಅಕ್ರಮ ಎಸಗಿದ ಆರೋಪದ ಮೇಲೆ ಅಂಚೆ ಸಹಾಯಕ ಶಿವಂ ಸಚನ್ ಮತ್ತು ಹಂಗಾಮಿ ಉಪ ಪೋಸ್ಟ್‌ಮಾಸ್ಟರ್ ರಾಕೇಶ್ ಕುಮಾರ್ ಮಿಶ್ರಾ  ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸಚನ್ ಅವರ ಯೂಸರ್ ಐಡಿ ಬಳಸಿ ಹಣ ಡ್ರಾ ಮಾಡಲಾಗಿದ್ದು, ಮಿಶ್ರಾ ಅವರ ಮೇಲ್ವಿಚಾರಣಾ ಐಡಿ  ಮೂಲಕ ಅದನ್ನು ದೃಢೀಕರಿಸಲಾಗಿದೆ ಎಂದು ತಿಳಿದುಬಂದಿದೆ.

ದೂರುದಾರರಾದ ಆಕಾಂಕ್ಷಾ ಚೌರಾಸಿಯಾ ಅವರ ಮೃತ ಪೋಷಕರ ಖಾತೆಯಿಂದಲೇ ಎರಡು ಹಂತಗಳಲ್ಲಿ ಒಟ್ಟು 7.13 ಲಕ್ಷ ರೂ.ಗಳನ್ನು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಲಾಗಿದೆ. ಘಟನೆ ಸಂಬಂಧ ಈಗಾಗಲೇ 25ಕ್ಕೂ ಹೆಚ್ಚು ಜನರು ದೂರು ದಾಖಲಿಸಿದ್ದು, ಹಗರಣದ ಒಟ್ಟು ಮೊತ್ತ ಕೋಟ್ಯಂತರ ರೂ. ದಾಟುವ ಸಾಧ್ಯತೆಯಿದೆ ಎಂದು ದಕ್ಷಿಣ ವಲಯದ ಡಿಸಿಪಿ ದೀಪೇಂದ್ರ ನಾಥ್ ಚೌಧರಿ ತಿಳಿಸಿದ್ದಾರೆ.

ಮೃತರ ಖಾತೆಯಿಂದ ಹಣ ಡ್ರಾ: ಆಕಾಂಕ್ಷಾ ಚೌರಾಸಿಯಾ ಅವರ ಪೋಷಕರಾದ ಜಿತೇಂದ್ರ ಕುಮಾರ್ ಮತ್ತು ಅರ್ಚನಾ ಚೌರಾಸಿಯಾ ನಿಧನರಾದ ಬಳಿಕವೂ, ಅವರ ಖಾತೆಯಿಂದ 2025ರ ಜನವರಿ 23ರಂದು 4.15 ಲಕ್ಷ ರೂ. ಹಾಗೂ ಮೇ 28ರಂದು 2.98 ಲಕ್ಷ ರೂ.ಗಳನ್ನು ಅಕ್ರಮವಾಗಿ ವಿತ್‌ಡ್ರಾ ಮಾಡಲಾಗಿದೆ.

ಗ್ರಾಹಕರ ದಿಗ್ಭ್ರಮೆ: ಗ್ರಾಮಸ್ಥರು ಹೂಡಿಕೆ ಮಾಡಿದ ಹಣದ ಅವಧಿ ಪೂರ್ಣಗೊಂಡು ಪೋಸ್ಟ್ ಆಫೀಸ್‌ಗೆ ಹೋದಾಗ ತಮ್ಮ ಹೆಸರಿನಲ್ಲಿ ಯಾವುದೇ ಖಾತೆ ಅಥವಾ ಹಣ ಜmೆಯಾಗಿರುವ ದಾಖಲೆ ಇಲ್ಲದಿರುವುದು ಕಂಡುಬಂದು ಆಘಾತಕ್ಕೊಳಗಾಗಿದ್ದಾರೆ.

ಅಧಿಕಾರಿಗಳ ಬಂಧನ ಮತ್ತು ತನಿಖೆ: ಅಂಚೆ ಇಲಾಖೆಯ ಉನ್ನತ ಅಧಿಕಾರಿಗಳ ತನಿಖೆಯ ಬಳಿಕ ಇಬ್ಬರೂ ಆರೋಪಿಗಳನ್ನು ವಜಾಗೊಳಿಸಿ ಪೊಲೀಸರಿಗೆ ದೂರು ನೀಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *