Home ಕ್ರೈಂ ನ್ಯೂಸ್ ಸಿದ್ದಸಿರಿ ಬ್ಯಾಂಕ್ ಹಗರಣ: ಆರೋಪಗಳಿಗೆ ಸ್ಪಷ್ಟನೆ ನೀಡಲು ಹೋಗಿ ಸಿಕ್ಕಿಬಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಕುಟುಂಬ; ಪತ್ರಿಕಾಗೋಷ್ಠಿಯಲ್ಲಿ ಬಯಲಾದ ಅಕ್ರಮಗಳೇನು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸಿದ್ದಸಿರಿ ಬ್ಯಾಂಕ್ ಹಗರಣ: ಆರೋಪಗಳಿಗೆ ಸ್ಪಷ್ಟನೆ ನೀಡಲು ಹೋಗಿ ಸಿಕ್ಕಿಬಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಕುಟುಂಬ; ಪತ್ರಿಕಾಗೋಷ್ಠಿಯಲ್ಲಿ ಬಯಲಾದ ಅಕ್ರಮಗಳೇನು?

Share
ಬಸನಗೌಡ ಪಾಟೀಲ್ ಯತ್ನಾಳ್
Share

ವಿಜಯಪುರ: ಹಿಂದೂ ಹುಲಿ ಎಂದೇ ಬಿಂಬಿಸಿಕೊಂಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಂಬದ ಒಡೆತನದ ‘ಸಿದ್ದಸಿರಿ ಕೋ-ಆಪರೇಟಿವ್ ಬ್ಯಾಂಕ್’ ಕುರಿತು ಕೇಂದ್ರದ ಸಿಆರ್‌ಸಿಎಸ್ ನೋಟಿಸ್‌ಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಕರೆದಿದ್ದ ಪತ್ರಿಕಾಗೋಷ್ಠಿಯು, ಅವರ ಮೇಲಿನ ಆರೋಪಗಳನ್ನು ದೂರ ಮಾಡುವ ಬದಲು ಸ್ವತಃ ಅವರ ಅಕ್ರಮಗಳನ್ನು ಬಟಾಬಯಲು ಮಾಡಿದೆ.

ಬ್ಯಾಂಕ್‌ನ ಅಧ್ಯಕ್ಷ ರಾಮನಗೌಡ ಪಾಟೀಲ್ ನೀಡಿರುವ ಸಮರ್ಥನೆಗಳು ಅಕ್ಷರಶಃ ವಿರೋಧಾಭಾಸದಿಂದ ಕೂಡಿದ್ದು, ಠೇವಣಿದಾರರಲ್ಲಿ ತೀವ್ರ ಆತಂಕ ಮೂಡಿಸಿದೆ.

ಬ್ಯಾಂಕ್‌ನ ಬಡ ಠೇವಣಿದಾರರ 1065 ಕೋಟಿ ರೂ. ಹಣವನ್ನು ಚಿಂಚೋಳಿಯ ಎಥೆನಾಲ್ ಘಟಕಕ್ಕೆ ಸುರಿಯಲಾಗಿದೆ ಎಂಬ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಮನಗೌಡರು, “ಸಿದ್ದಸಿರಿ ಎಥೆನಾಲ್ ಅಂಡ್ ಪವರ್ ಖಾಸಗಿ ಕಾರ್ಖಾನೆ ಅಲ್ಲ, ಅದು ಸಿದ್ದಸಿರಿ ಬ್ಯಾಂಕ್‌ನದ್ದೇ ಇನ್ನೊಂದು ಘಟಕ” ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಠೇವಣಿದಾರರ ಸ್ಪಷ್ಟ ಅನುಮತಿಯಿಲ್ಲದೆ ಕೇವಲ ಬೋರ್ಡ್ ಮೀಟಿಂಗ್ ನಿರ್ಣಯದ ಮೂಲಕ ಸಾವಿರಾರು ಕೋಟಿ ಹಣವನ್ನು ಸ್ವಂತ ಉದ್ಯಮಕ್ಕೆ ಹೂಡಿಕೆ ಮಾಡಿರುವುದು ಸ್ಪಷ್ಟ ನಿಯಮ ಉಲ್ಲಂಘನೆಯಾಗಿದೆ.

ಪಿಗ್ಮಿ ಏಜೆಂಟ್ ಕಮಿಷನ್ ಗೋಲ್ಮಾಲ್: ಒಬ್ಬನೇ ಪಿಗ್ಮಿ ಏಜೆಂಟರ್‌ಗೆ ಬರೋಬ್ಬರಿ 16 ಕೋಟಿ ರೂ. ಕಮಿಷನ್ ನೀಡಿರುವ ಕುರಿತು ಸಮರ್ಥನೆ ನೀಡುತ್ತಾ, ಆ ಏಜೆಂಟ್ ದಿನಕ್ಕೆ 3 ಕೋಟಿ ರೂ. ಕಲೆಕ್ಷನ್ ತರುತ್ತಾರೆ, ತಿಂಗಳಿಗೆ 3 ಲಕ್ಷ ರೂ. ಕಮಿಷನ್ ಕೊಡುತ್ತೇವೆ ಎಂದಿದ್ದಾರೆ. ತಿಂಗಳಿಗೆ 3 ಲಕ್ಷದಂತೆ ವರ್ಷಕ್ಕೆ 36 ಲಕ್ಷವಾದರೆ, ಬಾಕಿ 15 ಕೋಟಿಗೂ ಅಧಿಕ ಮೊತ್ತ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆಗೆ ಯಾವುದೇ ಉತ್ತರವಿಲ್ಲದೆ ಕಣ್ಮರೆಯಾಗಿದೆ.

ಹಿತಾಸಕ್ತಿ ಸಂಘರ್ಷ: ನಷ್ಟದಲ್ಲಿರುವ ಆದೇ ಆಸ್ಪತ್ರೆಗೆ ಬ್ಯಾಂಕ್‌ನಿಂದಲೇ 200 ಕೋಟಿ ರೂ. ಸಾಲ ಮಂಜೂರು ಮಾಡಿರುವುದು ಮತ್ತು ಸಾರ್ವಜನಿಕರ ಬೆವರಿನ ಹಣವನ್ನು ರಿಯಲ್ ಎಸ್ಟೇಟ್ ಹಾಗೂ ಸ್ವಂತ ವ್ಯವಹಾರಗಳಿಗೆ ಬಳಸಿರುವುದು ಸಹಕಾರಿ ಬ್ಯಾಂಕ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ನೋಟಿಸ್ ಹಾಗೂ ಆಡಿಟ್ ವರದಿ ಲೋಪ: ಬಹುರಾಜ್ಯ  ಕಾಯಿದೆಯ ನಿಯಮಗಳನ್ನು ಗಾಳಿಗೆ ತೂರಿ, ಒರಿಜಿನಲ್ ಆಡಿಟರ್ ಸಹಿ ಇಲ್ಲದೆ ಕೇವಲ ಸ್ವಯಂ ದೃಢೀಕೃತ ಪ್ರತಿಗಳನ್ನು ಅಪ್‌ಲೋಡ್ ಮಾಡಿರುವುದನ್ನು ಬ್ಯಾಂಕ್ ಅಧ್ಯಕ್ಷರು ಸಮರ್ಥಿಸಿಕೊಂಡಿರುವುದು ಕಾನೂನುಬಾಹಿರ ಹಾಗೂ ಹಣಕಾಸು ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ.

ಬ್ಯಾಂಕ್ ಆಡಳಿತ ಮಂಡಳಿಯು “ಅಧಿಕಾರ”, “ಠರಾವು” ಮತ್ತು “ಗ್ರೇಸ್ ಪೀರಿಯಡ್” ನೆಪಗಳೊಡ್ಡಿ ಸ್ವತಃ ತಾವೇ ನಿಯಮ ಉಲ್ಲಂಘಿಸಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಮುಖಂಡರ ಸ್ವಂತ ಬ್ಯಾಂಕಿನಲ್ಲಿ ನಡೆದಿರುವ ಈ ಬೆಳವಣಿಗೆಗಳು ಠೇವಣಿದಾರರನ್ನು ಆತಂಕಕ್ಕೆ ತಳ್ಳಿದ್ದು, ಸಾರ್ವಜನಿಕ ಹಣದ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles