Home ಕ್ರೈಂ ನ್ಯೂಸ್ ಯುಕೆಯಲ್ಲಿ ಅಪ್ರಾಪ್ತ ಬಾಲಕಿಯರ ಜೊತೆ ಆನ್‌ಲೈನ್ ವಂಚನೆ: 30 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಭಾರತೀಯ ವಿದ್ಯಾರ್ಥಿ ಬಿಲಾಲ್ ಕಾಜಿ ಯಾರು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಯುಕೆಯಲ್ಲಿ ಅಪ್ರಾಪ್ತ ಬಾಲಕಿಯರ ಜೊತೆ ಆನ್‌ಲೈನ್ ವಂಚನೆ: 30 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಭಾರತೀಯ ವಿದ್ಯಾರ್ಥಿ ಬಿಲಾಲ್ ಕಾಜಿ ಯಾರು?

Share
ಯುಕೆ
Share

ಲಂಡನ್ (ಯುನೈಟೆಡ್ ಕಿಂಗ್‌ಡಮ್): ಯುಕೆಯಲ್ಲಿ ಅಪ್ರಾಪ್ತ ಬಾಲಕಿಯರನ್ನು ಆನ್‌ಲೈನ್ ಮೂಲಕ ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿ, ಖಾಸಗಿ ವಿಡಿಯೋ ಹಾಗೂ ಚಿತ್ರಗಳನ್ನು ಪಡೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿ ಬಿಲಾಲ್ ಕಾಜಿಗೆ ಬ್ರಿಟನ್ ನ್ಯಾಯಾಲಯವು 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ಮುಂಬೈ ಮೂಲದ 27 ವರ್ಷದ ಬಿಲಾಲ್ ಕಾಜಿ ಯುಕೆಯಲ್ಲಿ ಪಿಎಚ್‌ಡಿ ಹಾಗೂ ರಸಾಯನಶಾಸ್ತ್ರ  ವ್ಯಾಸಂಗ ಮಾಡುತ್ತಿದ್ದಾಗ ಈ ಕೃತ್ಯ ಎಸೆಗಿದ್ದಾನೆ.

ನವೆಂಬರ್ 2021 ರಲ್ಲಿ ಡರ್ಬಿಶೈರ್ ಪೊಲೀಸರಿಗೆ ಬಾಲಕಿಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಈ ಘಟನೆ ಬೆಳಕಿಗೆ ಬಂದಿದೆ.

ಆರೋಪಿಯು ‘Reece’ ಎಂಬ ಹೆಸರಿನ ಬಿಳಿ ಬಣ್ಣದ ಬ್ರಿಟಿಷ್ ಹದಿಹರೆಯದ ಹುಡುಗನಂತೆ ನಟಿಸಿ, ಸ್ನ್ಯಾಪ್‌ಚಾಟ್, ರೋಬ್ಲಾಕ್ಸ್ (Roblox), ವಿಂಕ್ ಮತ್ತು ವಿಜ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ 10 ರಿಂದ 17 ವರ್ಷ ವಯಸ್ಸಿನ 70 ಕ್ಕೂ ಹೆಚ್ಚು ಬಾಲಕಿಯರನ್ನು ಗುರಿಯಾಗಿಸಿಕೊಂಡು ಮೋಸ ಮಾಡಿದ್ದಾನೆ.

ಪೊಲೀಸರ ತನಿಖೆಯ ಪ್ರಕಾರ, ಒಟ್ಟು 180ಕ್ಕೂ ಹೆಚ್ಚು ಬಾಲಕಿಯರು ಈತನ ಬಲೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ನಕಲಿ ಪ್ರೀತಿ ಹಾಗೂ ಬ್ಲ್ಯಾಕ್‌ಮೇಲ್: ಬಾಲಕಿಯರ ಜತೆ ನಕಲಿ ಪ್ರೇಮ ಸಂಬಂಧ ಬೆಳೆಸಿ, ನಂಬಿಕೆ ಗಳಿಸಿದ ಬಳಿಕ ಅವರ ಅಂತರಂಗದ ಚಿತ್ರಗಳು ಮತ್ತು ವಿಡಿಯೋಗಳನ್ನು ಕಳುಹಿಸುವಂತೆ ಬಲವಂತಪಡಿಸುತ್ತಿದ್ದ. ಬಾಲಕಿಯರು ನಿರಾಕರಿಸಿದರೆ ಖಾಸಗಿ ಫೋಟೋಗಳನ್ನು ಸ್ನೇಹಿತರಿಗೆ ಮತ್ತು ಕುಟುಂಬಕ್ಕೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದ.

ಸಾಮಾಜಿಕ ಜಾಲತಾಣ ಹ್ಯಾಕಿಂಗ್: ಕೆಲ ಪ್ರಕರಣಗಳಲ್ಲಿ ಬಾಲಕಿಯರ ಸೋಶಿಯಲ್ ಮೀಡಿಯಾ ಅಕೌಂಟ್‌ಗಳನ್ನು ಹ್ಯಾಕ್ ಮಾಡಿ, ಅವರ ಖಾಸಗಿ ಕಂಟೆಂಟ್‌ಗಳನ್ನು ನೇರವಾಗಿ ಅವರ ಗೆಳೆಯರಿಗೆ ಹಂಚಿ ಮಾನಸಿಕ ಹಿಂಸೆ ನೀಡುತ್ತಿದ್ದ.

ಪ್ರಮುಖ ಬಂಧನ ಮತ್ತು ಶಿಕ್ಷೆ: ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಬಿಲಾಲ್ ಕಾಜಿಯನ್ನು ಜುಲೈ 2023 ರಲ್ಲಿ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು. ಈತನನ್ನು “ಅತ್ಯಂತ ಅಪಾಯಕಾರಿ ವ್ಯಕ್ತಿ” ಎಂದು ಬಣ್ಣಿಸಿರುವ ನ್ಯಾಯಾಧೀಶ ಸ್ಟೀಫನ್ ಎವರೆಟ್, ಕನಿಷ್ಠ 20 ವರ್ಷಗಳ ಕಾಲ ಪೆರೋಲ್ ಸಿಗದಂತೆ ಒಟ್ಟು 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles