ಫರೀದಾಬಾದ್: ಡೇಟಿಂಗ್ ಆ್ಯಪ್ ‘ಟಿಂಡರ್’ ಬಳಸಿ ಶ್ರೀಮಂತ ಪುರುಷರನ್ನು ಪರಿಚಯಿಸಿಕೊಂಡು, ಹೋಟೆಲ್‌ಗಳಲ್ಲಿ ಭೇಟಿಯಾಗಿ ಪ್ರಜ್ಞೆತಪ್ಪಿಸಿ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಕುಖ್ಯಾತ ತಾಯಿ-ಮಗಳನ್ನು ಫರೀದಾಬಾದ್ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ.
ಬಂಧಿತ ಆರೋಪಿಗಳು ಕೇವಲ ದರೋಡೆಗೆ ಮಾತ್ರ ಸೀಮಿತವಾಗದೆ, ಸಂತ್ರಸ್ತರಿಗೆ ಸುಳ್ಳು ಅತ್ಯಾಚಾರ ಪ್ರಕರಣಗಳ ಭಯ ತೋರಿಸಿ ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡುತ್ತಿದ್ದರು ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ.
ಟಿಂಡರ್ ಹನಿಟ್ರ್ಯಾಪ್ ಜಾಲ: ಡೇಟಿಂಗ್ ಆ್ಯಪ್‌ನಲ್ಲಿ ಆರ್ಥಿಕವಾಗಿ ಸದೃಢರಾಗಿರುವ ವ್ಯಕ್ತಿಗಳನ್ನು ಗುರಿಯಾಗಿಸಿ ಗೆಳೆತನ ಬೆಳೆಸಿ ಹೋಟೆಲ್‌ಗೆ ಆಹ್ವಾನಿಸುತ್ತಿದ್ದರು.
ಡ್ರಗ್ಸ್ ನೀಡಿ ಸುಲಿಗೆ: ಹೋಟೆಲ್ ಕೊಠಡಿಗಳಲ್ಲಿ ಆಹಾರ ಅಥವಾ ಪಾನೀಯದಲ್ಲಿ ನಶೆಯುಕ್ತ ವಸ್ತುಗಳನ್ನು ಬೆರೆಸಿ ಪ್ರಜ್ಞೆತಪ್ಪಿಸಿ ದರೋಡೆಗೈದು ಪರಾರಿಯಾಗುತ್ತಿದ್ದರು.
ಸುಳ್ಳು ಕೇಸ್ ಬೆದರಿಕೆ: ಸಿಕ್ಕಿಬೀಳುವ ಭಯವಿದ್ದವರ ಮೇಲೆ ಬ್ಲ್ಯಾಕ್‌ಮೇಲ್ ತಂತ್ರ ಪ್ರಯೋಗಿಸಿ, ಅತ್ಯಾಚಾರದ ಸುಳ್ಳು ಕೇಸ್ ಜಪಿಸಿ ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡುತ್ತಿದ್ದರು.
ಅಂತರರಾಜ್ಯ ನಂಟು: ಈ ಗ್ಯಾಂಗ್ ಫರೀದಾಬಾದ್ ಮಾತ್ರವಲ್ಲದೆ ದೆಹಲಿ-ಎನ್‌ಸಿಆರ್, ಸೂರತ್ ಹಾಗೂ ಅಂಡಮಾನ್ ದ್ವೀಪಗಳಲ್ಲೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಇವರ ಇತರ ಸಹಚರರ ಪತ್ತೆಗಾಗಿ ತೀವ್ರ ವಿಚಾರಣೆ ನಡೆಸುತ್ತಿದ್ದು, ಡೇಟಿಂಗ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವ್ಯವಹರಿಸುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.





Leave a comment