Home ಕ್ರೈಂ ನ್ಯೂಸ್ “ಭಯೋತ್ಪಾದಕರು ಬಾಂಬ್ ಕಳುಹಿಸಿದರೆ ಕಾಂಗ್ರೆಸಿಗರು ಚಾಕು ಕಳುಹಿಸುತ್ತಾರೆ”: ಸಿ.ಟಿ. ರವಿ ಆಕ್ರೋಶ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಭಯೋತ್ಪಾದಕರು ಬಾಂಬ್ ಕಳುಹಿಸಿದರೆ ಕಾಂಗ್ರೆಸಿಗರು ಚಾಕು ಕಳುಹಿಸುತ್ತಾರೆ”: ಸಿ.ಟಿ. ರವಿ ಆಕ್ರೋಶ!

Share
ಸಿ.ಟಿ. ರವಿ
Share

ಬೆಂಗಳೂರು: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಆನ್‌ಲೈನ್ ಡೆಲಿವರಿ ಆ್ಯಪ್‌ಗಳ ಮೂಲಕ ನಿರಂತರವಾಗಿ ಚಾಕು ಮತ್ತು ಚೂರಿಗಳನ್ನು ಪಾರ್ಸೆಲ್ ಕಳುಹಿಸಿ ಬೆದರಿಕೆ ಒಡ್ಡಲು ಯತ್ನಿಸಿರುವ ಕಾಂಗ್ರೆಸ್ ಕಾರ್ಯಕರ್ತರ ಕೃತ್ಯವನ್ನು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಸಿ. ಟಿ. ರವಿ ತೀವ್ರವಾಗಿ ಖಂಡಿಸಿದ್ದಾರೆ.

ಭಯೋತ್ಪಾದಕರಿಗೂ ಕಾಂಗ್ರೆಸಿಗರಿಗೂ ವ್ಯತ್ಯಾಸವಿಲ್ಲ: ಸಿ.ಟಿ. ರವಿ ಆಕ್ರೋಶ

ಕಾಂಗ್ರೆಸ್ ಸರ್ಕಾರದ ‘ಗೂಂಡಾ ಸಂಸ್ಕೃತಿ’ ಹಾಗೂ ರಾಜ್ಯದ ಕಾನೂನು-ಸುವ್ಯವಸ್ಥೆಯ ವೈಫಲ್ಯವನ್ನು ಪ್ರಶ್ನಿಸಿದ ಸಿ.ಟಿ. ರವಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ:

ಸಿ. ಟಿ. ರವಿ ಏನು ಹೇಳಿದ್ದಾರೆ?

“ಭಯೋತ್ಪಾದಕರಿಗೂ ಕಾಂಗ್ರೆಸಿಗರಿಗೂ ಏನು ವ್ಯತ್ಯಾಸ? ಅವರು ಬಾಂಬ್ ಕಳುಹಿಸುತ್ತಾರೆ, ಕಾಂಗ್ರೆಸಿಗರು ಚಾಕು ಚೂರಿ ಕಳುಹಿಸುತ್ತಾರಷ್ಟೇ! ಸತತ ಮೂರು ದಿನ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಕಾಂಗ್ರೆಸಿಗರು ಚಾಕು ಚೂರಿ ಕಳುಹಿಸಿ ಬೆದರಿಕೆ ಒಡ್ಡಲು ಯತ್ನಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರೇ… ನಿಮ್ಮ ಆಡಳಿತದಲ್ಲಿ ಜನಪ್ರತಿನಿಧಿಗಳಿಗೇ ಬೆದರಿಕೆ ಒಡ್ಡುತ್ತಾರೆಂದರೆ, ಜನಸಾಮಾನ್ಯರ ಪರಿಸ್ಥಿತಿ ಏನು? ಇಂತಹ ಗೊಡ್ಡು ಬೆದರಿಕೆಗಳಿಗೆ ಬಿಜೆಪಿ ಎಂದಿಗೂ ಹೆದರುವುದಿಲ್ಲ. ಕಾಂಗ್ರೆಸ್ ಈ ನೀಚ ಕೃತ್ಯದ ಮೂಲಕ ತನ್ನ ಹಳೆಯ ‘ಕೊತ್ವಾಲ್ ಸಂಸ್ಕೃತಿ’ಯನ್ನು ನಾಡಿನ ಮುಂದೆ ಬಹಿರಂಗಪಡಿಸುತ್ತಿದೆಯಷ್ಟೇ!”

ವಿವಾದಾತ್ಮಕ ಹೇಳಿಕೆ: ಕಾಂಗ್ರೆಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ನೀಡಿದ್ದರೆನ್ನಲಾದ ಹೇಳಿಕೆಯನ್ನು ಪ್ರತಿಭಟಿಸಲು ಕಾಂಗ್ರೆಸ್‌ನ ಯುವ ಘಟಕ ಈ ಹಾದಿ ಹಿಡಿದಿತ್ತು.

ಆನ್‌ಲೈನ್ ಪಾರ್ಸೆಲ್: ಬೆದರಿಕೆ ತಂತ್ರವಾಗಿ ಎನ್‌ಎಸ್‌ಯುಐ (NSUI) ಕಾರ್ಯಕರ್ತರು ಬ್ಲಿಂಕಿಟ್ (Blinkit) ಆ್ಯಪ್ ಮೂಲಕ ‘ಕ್ಯಾಶ್ ಆನ್ ಡೆಲಿವರಿ’ (COD) ಆಧಾರದಲ್ಲಿ ಚಾಕು ಹಾಗೂ ಕಟರ್‌ಗಳನ್ನು ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ತಲುಪಿಸಲು ಯತ್ನಿಸಿದ್ದರು.

ಪೋಲಿಸ್ ಬಂದೋಬಸ್ತ್: ಈ ಮಾರಕಾಸ್ತ್ರಗಳ ಪಾರ್ಸೆಲ್‌ಗಳನ್ನು ನಿವಾಸದಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ತಡೆದು ವಾಪಸ್ ಕಳುಹಿಸಿದ್ದಾರೆ.

ಬಿಜೆಪಿ ದೂರು: ಘಟನೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ನಾಯಕರು, ವಿಪಕ್ಷ ನಾಯಕರಿಗೆ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles