ರಾವಲ್ಪಿಂಡಿ: ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿ ’92 ನ್ಯೂಸ್’ ನ ಹಿರಿಯ ಟಿವಿ ನಿರೂಪಕಿ ಹಾಗೂ ಕಾರ್ಯಕ್ರಮ ನಿರೂಪಕಿ ರಬಿಯಾ ಎಹ್ಸಾನ್ (41) ಅವರು ತಮ್ಮ ರಾವಲ್ಪಿಂಡಿಯ ಗುಲ್ಶನಾಬಾದ್ನಲ್ಲಿರುವ ನಿವಾಸದಲ್ಲಿ ಗುಂಡೇಟಿನಿಂದ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಅಹ್ಸಾನ್ ತಾಹಿರ್ ಖಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತ ಆರಂಭಿಕ ವಿಚಾರಣೆ ವೇಳೆ ಕೊಲೆಯನ್ನು ಒಪ್ಪಿಕೊಂಡಿದ್ದಾನೆ ಎಂದು ಪಾಕಿಸ್ತಾನ ಮೂಲದ ಮಾಧ್ಯಮಗಳು ವರದಿ ಮಾಡಿವೆ.
ಆಕಸ್ಮಿಕವಾಗಿ ಗುಂಡು ಹಾರಿತೆಂದು ಪತಿಯ ವಾದ:
ರಾವಲ್ಪಿಂಡಿ ಸಿಟಿ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಪಂಜಾಬ್ ವಿಧಿವಿಜ್ಞಾನ ವಿಜ್ಞಾನ ಸಂಸ್ಥೆ (PFSA) ತಂಡಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಪುರಾವೆಗಳನ್ನು ಸಂಗ್ರಹಿಸಿವೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ 30-ಬೋರ್ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಪತಿ ಅಹ್ಸಾನ್ ತಾಹಿರ್, “ತಾನು ಪಿಸ್ತೂಲ್ ಹಿಡಿದು ಪರಿಶೀಲಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದೆ. ಅದರಲ್ಲಿ ಗುಂಡು ತುಂಬಿರುವುದು ತನಗೆ ತಿಳಿದಿರಲಿಲ್ಲ” ಎಂದು ಹೇಳಿಕೊಂಡಿದ್ದಾನೆ. ಮನೆಯ ಕೆಲಸದವ ಹಾಗೂ ಕುಟುಂಬಸ್ಥರ ಪ್ರಕಾರವೂ ಈ ಘಟನೆ ಆಕಸ್ಮಿಕ ಎಂದು ಪತಿ ಹೇಳಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ತನಿಖೆ ಚುರುಕುಗೊಳಿಸಿದ ಪೊಲೀಸರು:
ಮೃತರ ಕುತ್ತಿಗೆಯ ಭಾಗಕ್ಕೆ ಗುಂಡು ತಗಲಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
41 ವರ್ಷದ ರಬಿಯಾ ಎಹ್ಸಾನ್ 92 ನ್ಯೂಸ್ ಚಾನೆಲ್ನಲ್ಲಿ ಹಿರಿಯ ಪತ್ರಕರ್ತರಾದ ಅಮೀರ್ ಮತೀನ್ ಮತ್ತು ರೌಫ್ ಕ್ಲಾಸ್ರಾ ಅವರೊಂದಿಗೆ ಕರೆಂಟ್ ಅಫೇರ್ಸ್ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದರು. ಮೃತರು 13 ಮತ್ತು 11 ವರ್ಷದ ಇಬ್ಬರು ಪುತ್ರಿ ಹಾಗೂ ತಾಯಿಯನ್ನು ಅಗಲಿದ್ದಾರೆ.
ಪಾಕಿಸ್ತಾನದಲ್ಲಿ ಆಕ್ರೋಶ:
ಮಾಧ್ಯಮ ರಂಗದ ಪ್ರಮುಖರು ಮತ್ತು ಸಾರ್ವಜನಿಕರು ರಬಿಯಾ ಸಾವು ಕಂಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಪ್ರಥಮ ಮಹಿಳೆ ಅಸೀಫಾ ಭುಟ್ಟೋ-ಜರ್ದಾರಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ. ಇತ್ತೀಚೆಗೆ ರಾವಲ್ಪಿಂಡಿಯಲ್ಲಿ ಡಿಜಿಟಲ್ ಮೀಡಿಯಾ ಎಕ್ಸಿಕ್ಯೂಟಿವ್ ಹಿನಾ ಜಾವೇದ್ ಅವರ ಹತ್ಯೆಯನ್ನೂ ಉಲ್ಲೇಖಿಸಿರುವ ಅವರು, ಉದ್ಯೋಗಸ್ಥ ಮಹಿಳೆಯರ ಮೇಲಿನ ಹಿಂಸಾಚಾರದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
- 92 News anchor Rabia Ahsan
- 92 ನ್ಯೂಸ್
- Ahsan Tahir Khan
- Aseefa Bhutto Zardari
- Kannada Keywords: ರಬಿಯಾ ಎಹ್ಸಾನ್
- Pakistan crime news
- Pakistan TV anchor killed
- Rabia Ahsan
- Rabia Ahsan murder case
- Rabia Ahsan shot dead
- Rawalpindi police
- ಅಸೀಫಾ ಭುಟ್ಟೋ ಜರ್ದಾರಿ
- ಅಹ್ಸಾನ್ ತಾಹಿರ್ ಖಾನ್
- ಪಾಕಿಸ್ತಾನ ಟಿವಿ ನಿರೂಪಕಿ ಕೊಲೆ
- ಪಾಕಿಸ್ತಾನ ಸುದ್ದಿ
- ರಬಿಯಾ ಎಹ್ಸಾನ್ ಹತ್ಯೆ
- ರಾವಲ್ಪಿಂಡಿ ಕ್ರೈಮ್





Leave a comment