Home ಉದ್ಯೋಗ ವಾರ್ತೆ ಮೈಕ್ರೋಸಾಫ್ಟ್‌ನಲ್ಲಿ 60,000 ಉದ್ಯೋಗಿಗಳಿಗೆ ಎಕ್ಸಿಟ್ ಆಫರ್: ವೈರಲ್ ಆಯ್ತು ಸತ್ಯ ನಾಡೆಳ್ಳ ‘2 ಕೋಟಿ ಎಐ ಏಜೆಂಟ್’ ಹೇಳಿಕೆ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಮೈಕ್ರೋಸಾಫ್ಟ್‌ನಲ್ಲಿ 60,000 ಉದ್ಯೋಗಿಗಳಿಗೆ ಎಕ್ಸಿಟ್ ಆಫರ್: ವೈರಲ್ ಆಯ್ತು ಸತ್ಯ ನಾಡೆಳ್ಳ ‘2 ಕೋಟಿ ಎಐ ಏಜೆಂಟ್’ ಹೇಳಿಕೆ

Share
ಸತ್ಯ ನಾಡೆಳ್ಳ
Share

ನವದೆಹಲಿ: ಜಾಗತಿಕ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್ (Microsoft) ತನ್ನ 60,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ (Voluntary Exit Offer) ಆಫರ್ ನೀಡಿದ ಬೆನ್ನಲ್ಲೇ, ಸಂಸ್ಥೆಯ ಸಿಇಒ ಸತ್ಯ ನಾಡೆಳ್ಳ ಅವರ ಎಐ (AI Agents) ಕುರಿತಾದ ಹಳೆಯ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಭವಿಷ್ಯದಲ್ಲಿ 2 ಲಕ್ಷ ಮಾನವ ಉದ್ಯೋಗಿಗಳೊಂದಿಗೆ 20 ಲಕ್ಷದಿಂದ ಬರೋಬ್ಬರಿ 2 ಕೋಟಿ ಎಐ ಏಜೆಂಟ್‌ಗಳು ಕೆಲಸ ಮಾಡಲಿವೆ ಎಂಬ ನಾಡೆಳ್ಳ ಅವರ ಹೇಳಿಕೆ ಉದ್ಯೋಗ ಕಡಿತ ಮತ್ತು ಕೃತಕ ಬುದ್ಧಿಮತ್ತೆಯ ಭವಿಷ್ಯದ ಕುರಿತು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪೋಡ್‌ಕಾಸ್ಟ್ ಒಂದರಲ್ಲಿ ಲಿಂಕ್ಡ್‌ಇನ್ ಸಹ-ಸಂಸ್ಥಾಪಕ ರೀಡ್ ಹಾಫ್‌ಮನ್ ಅವರೊಂದಿಗೆ ಮಾತನಾಡಿದ್ದ ಸತ್ಯ ನಾಡೆಳ್ಳ, ಕಂಪ್ಲೇಟಿಂಗ್ ಮತ್ತು ಕೋಡಿಂಗ್ ಜಗತ್ತಿನಲ್ಲಿ ಎಐ ತರಲಿರುವ ಕ್ರಾಂತಿಕಾರಿ ಬದಲಾವಣೆಗಳ ಬಗ್ಗೆ ವಿವರಿಸಿದ್ದರು.

60,000 ಉದ್ಯೋಗಿಗಳಿಗೆ ಎಕ್ಸಿಟ್ ಆಫರ್: ಭಾರತ, ಅಮೆರಿಕ, ಯುಕೆ ಮತ್ತು ಕೆನಡಾ ಸೇರಿದಂತೆ ವಿಶ್ವದಾದ್ಯಂತ ಲೆವೆಲ್ 70 ಮತ್ತು ಅದಕ್ಕಿಂತ ಕೆಳಗಿನ ಹಂತದ ಉದ್ಯೋಗಿಗಳಿಗೆ ಕಂಪನಿಯು ಸ್ವಯಂಪ್ರೇರಿತ ನಿರ್ಗಮನ ಯೋಜನೆಯನ್ನು ಘೋಷಿಸಿದೆ.

ಮಾನವ-ಎಐ ಸಹಯೋಗ: 1980ರ ದಶಕದಲ್ಲಿ ಕಂಪ್ಯೂಟರ್ ಹಾಗೂ ಟೈಪಿಂಗ್ ಕ್ರಾಂತಿ ಬಂದಂತೆ, ಭವಿಷ್ಯದಲ್ಲಿ ಮಾನವ ಉದ್ಯೋಗಿಗಳು ಮತ್ತು ಎಐ ಏಜೆಂಟ್‌ಗಳು ಒಟ್ಟಾಗಿ ಕೆಲಸ ಮಾಡುವ ಹೊಸ ಶಕೆಯು ಆರಂಭವಾಗಲಿದೆ ಎಂದು ನಾಡೆಳ್ಳ ಅಭಿಪ್ರಾಯಪಟ್ಟಿದ್ದರು.

ಉದ್ಯೋಗ ಭದ್ರತೆಯ ಆತಂಕ: ಮೈಕ್ರೋಸಾಫ್ಟ್ ಎಐ ಮೂಲಸೌಕರ್ಯ ಮತ್ತು ಕ್ಲೌಡ್ ತಂತ್ರಜ್ಞಾನದಲ್ಲಿ ಬೃಹತ್ ಹೂಡಿಕೆ ಮಾಡುತ್ತಿರುವ ಬೆನ್ನಲ್ಲೇ ಈ ನಿರ್ಗಮನ ಆಫರ್ ಬಂದಿರುವುದು, ಉದ್ಯೋಗಿಗಳ ಭವಿಷ್ಯದ ಮೇಲಿನ ಪರಿಣಾಮಗಳ ಕುರಿತು ಆತಂಕ ಮೂಡಿಸಿದೆ.

ಸ್ವಯಂಪ್ರೇರಿತ ನಿರ್ಗಮನ ಯೋಜನೆಯಿಂದ ಕೇವಲ ಶೇ. 5ಕ್ಕಿಂತ ಕಡಿಮೆ (ಸುಮಾರು 3,000) ಉದ್ಯೋಗಿಗಳು ಹೊರನಡೆಯಬಹುದು ಎಂದು ಸಂಸ್ಥೆ ನಿರೀಕ್ಷಿಸಿದ್ದು, ಬದಲಾಗುತ್ತಿರುವ ಮಾರುಕಟ್ಟೆ ಅಗತ್ಯಗಳಿಗೆ ತಕ್ಕಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೈಕ್ರೋಸಾಫ್ಟ್ ಸ್ಪಷ್ಟಪಡಿಸಿದೆ.

Share

Leave a comment

Leave a Reply

Your email address will not be published. Required fields are marked *