Home ಕ್ರೈಂ ನ್ಯೂಸ್ ದಿನಕ್ಕೆ 20 ಗಂಟೆ ಕೆಲಸ: 16 ವರ್ಷದ ಬಾಲಕಿಗೆ ಬಿಸಿ ಇಸ್ತ್ರಿ ಹಾಗೂ ಚಾಕುವಿನಿಂದ ಸುಟ್ಟು ಹಿಂಸೆ ನೀಡಿದ ಮಾಲೀಕಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ದಿನಕ್ಕೆ 20 ಗಂಟೆ ಕೆಲಸ: 16 ವರ್ಷದ ಬಾಲಕಿಗೆ ಬಿಸಿ ಇಸ್ತ್ರಿ ಹಾಗೂ ಚಾಕುವಿನಿಂದ ಸುಟ್ಟು ಹಿಂಸೆ ನೀಡಿದ ಮಾಲೀಕಿ!

Share
ಬಾಲಕಿ
Share

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಗೃಹ ಕಾರ್ಮಿಕಳಾಗಿ ಇರಿಸಿಕೊಂಡು, ದಿನಕ್ಕೆ 20 ಗಂಟೆಗಳ ಕಾಲ ಕೆಲಸ ಮಾಡಿಸಿಕೊಂಡು, ಬಿಸಿ ಇಸ್ತ್ರಿ ಪೆಟ್ಟಿಗೆ ಹಾಗೂ ಕಾಯಿಸಿದ ಚಾಕುವಿನಿಂದ ದೇಹದ ವಿವಿಧ ಭಾಗಗಳಲ್ಲಿ ಸುಟ್ಟು ಅಮಾನವೀಯ ಹಿಂಸೆ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಎನ್‌ಜಿಒ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

ಅಬುಲ್ ಫಜಲ್ ಎನ್ಕ್ಲೇವ್-II ರ ಮನೆಯೊಂದರಲ್ಲಿ ಕಳೆದ ಒಂದು ವರ್ಷದಿಂದ ಈ ಬಾಲಕಿಯನ್ನು ಪೋಷಕರಿಂದ ದೂರವಿಟ್ಟು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಬೆಳಗ್ಗೆ 6 ರಿಂದ ರಾತ್ರಿ 2 ರವರೆಗೆ ಮನೆ ಕೆಲಸ ಮಾಡಿಸಿಕೊಳ್ಳುತ್ತಿದ್ದು, ಸಣ್ಣಪುಟ್ಟ ತಪ್ಪಿಗೂ ಬಾಲಕಿಗೆ ಊಟ ನೀಡದೆ, ಬಿಸಿ ಕಬ್ಬಿಣದಿಂದ ಬೆನ್ನು, ಕೈ ಹಾಗೂ ಸೊಂಟದ ಭಾಗದಲ್ಲಿ ಸುಟ್ಟು ವಿಕೃತಿ ಮೆರೆಯಲಾಗಿದೆ. ಬಾಲಕಿಯ ದೂರಿನ ಮೇರೆಗೆ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ದೌರ್ಜನ್ಯದ ವಿವರ: ಪ್ರತಿದಿನ 20 ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿದ್ದು, ಕೇವಲ ಹಳಸಿದ ಆಹಾರ ನೀಡಿ, ಬಿಸಿ ಇಸ್ತ್ರಿ ಹಾಗೂ ಕಾಯಿಸಿದ ಚಾಕುವಿನಿಂದ ಬಾಲಕಿಗೆ ಮನಬಂದಂತೆ ಹಿಂಸೆ ನೀಡಲಾಗಿದೆ.

ಪೋಷಕರ ಭೇಟಿಗೆ ನಿಷೇಧ: ಒಂದು ವರ್ಷದ ಅವಧಿಯಲ್ಲಿ ಬಾಲಕಿಗೆ ಪೋಷಕರನ್ನು ಭೇಟಿ ಮಾಡಲು ಬಿಟ್ಟಿರಲಿಲ್ಲ. ಫೋನ್‌ನಲ್ಲಿ ಮಾತನಾಡಿಸುವಾಗಲೂ ಗಾಯಗಳು ಕಾಣದಂತೆ ಮುಖ ಮುಚ್ಚಿಸಲಾಗುತ್ತಿತ್ತು ಎಂದು ಎನ್‌ಜಿಒ ತಿಳಿಸಿದೆ.

ರಕ್ಷಣೆ ಮತ್ತು ಚಿಕಿತ್ಸೆ: ಎಸ್‌ಡಿಎಂ ಆದೇಶದ ಮೇರೆಗೆ ಕಾರ್ಮಿಕ ಇಲಾಖೆ ಹಾಗೂ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕಿಯನ್ನು ರಕ್ಷಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾನೂನು ಕ್ರಮ: ಬಾಲಕ ಮತ್ತು ಕಿಶೋರ್ ಕಾರ್ಮಿಕ ಕಾಯ್ದೆ ಹಾಗೂ ಜುವೆನೈಲ್ ಜಸ್ಟೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Share

Leave a comment

Leave a Reply

Your email address will not be published. Required fields are marked *

Related Articles