ಬೆಂಗಳೂರು : “ನನ್ನ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಗೃಹಲಕ್ಷ್ಮಿ ಹಣದಿಂದ ಸುಮಾರು 59 ಸಾವಿರದಷ್ಟು ಫೀಸ್ ಕಟ್ಟಿದ್ದೇನೆ. ಶಕ್ತಿ ಯೋಜನೆ ಇರುವ ಕಾರಣಕ್ಕೆ ಆಗಾಗ್ಗೆ ಮಗನನ್ನು ನೋಡಿಕೊಂಡು ಬರಲು ಅನುಕೂಲವಾಗಿದೆ” ಎಂದು ಚಿಕ್ಕಮಗಳೂರು ಜಿಲ್ಲೆಯ ಮಹಿಳೆಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಭಾವುಕತೆಯಲ್ಲಿ ಮಿಂದೆದ್ದಿತು.
“ನಿಮ್ಮ ಮಗ ಎಷ್ಟು ಮಾರ್ಕ್ಸ್ ತಗೊಂಡಿದಾನೆ ತಾಯಿ” ಎಂದು ಸಿಎಂ ಕೇಳಿದಾಗ, “ಮಗ ಪಿಯುಸಿಯಲ್ಲಿ 98 ಪರ್ಸೆಂಟ್ ತಗೊಂಡಿದ್ದಾನೆ” ಎಂದು ಹೇಳುವಾಗ ತಾಯಿಯ ಹುಮ್ಮಸ್ಸು ಇಮ್ಮಡಿಯಾಗಿತ್ತು.
ಹೌದು, ಸಿಎಂ ಡಿ ಕೆ ಶಿವಕುಮಾರ್ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಗೃಹಲಕ್ಮಿ ಯೋಜನೆ ಫಲಾನುಭವಿಗಳ ಜೊತೆ ಶುಕ್ರವಾರ ನಡೆಸಿದ ಸಂವಾದ ಇಂತಹ ಹಲವಾರು ಭಾವುಕ ಕ್ಷಣಗಳಿಗೆ ಜೊತೆಗೆ ಸ್ವಾವಲಂಬಿ
ಸಾಧನೆಯ ಕಥೆಗಳಿಗೆ ಸಾಕ್ಷಿಯಾಯಿತು.
ಸಿಎಂ ಆಗಮಿಸಿದೊಡನೆ ಅವರ ವಂದನೆಗೆ ಉತ್ಸಾಹದಿಂದ ಪ್ರತಿವಂದನೆ ಸಲ್ಲಿಸಿದ ಮಹಿಳೆಯರು, ಗೃಹಲಕ್ಷ್ಮಿ ಯೋಜನೆಯಿಂದ ತಮಗಾದ ಅನುಕೂಲ, ತಮ್ಮ ಅನುಭವಗಳನ್ನು ಮುಕ್ತವಾಗಿ ತೆರೆದಿಟ್ಟರು. ತಮ್ಮ ಊರಿನ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರಲು ಮರೆಯಲಿಲ್ಲ.





Leave a comment