ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಪಡೆದಿದ್ದ 60,000 ರೂ. ಸಾಲದ ಮರುಪಾವತಿ ವಿವಾದವು ರಕ್ತಪಾತಕ್ಕೆ ತಿರುಗಿದ್ದು, 52 ವರ್ಷದ ತರಕಾರಿ ಮಾರಾಟಗಾರರೊಬ್ಬರನ್ನು ಅವರ ಮೂವರು ಸೋದರಳಿಯಂದಿರೆ ಇಯಿಂದ ಕುತ್ತಿಗೆ ಹಾಗೂ ಹೊಟ್ಟೆಗೆ ಇರಿದು ಕ್ರೂರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು ಚೀನಾ ಜಡೇಜಾ ಎಂದು ಗುರುತಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗಾಗಿ ಸುಮಾರು 7 ತಿಂಗಳ ಹಿಂದೆ ತನ್ನ ಸೋದರಳಿಯ ಕಮಲೇಶ್‌ನಿಂದ 60,000 ರೂ. ಸಾಲ ಪಡೆದಿದ್ದರು. ಆದರೆ ವ್ಯಾಪಾರ ಸರಿಯಿಲ್ಲದ ಕಾರಣ ಸಾಲ ತೀರಿಸಲು ವಿಳಂಬವಾಗಿದ್ದು, ಹಣ ಮರಳಿಸುವಂತೆ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಮಾತಿನ ಚಕಮಕಿ ನಡೆದು ಗಲಾಟೆ ವಿಕೋಪಕ್ಕೆ ಹೋಗಿದೆ.
ಘಟನೆಯ ಹಿನ್ನೆಲೆ: ವೈದ್ಯಕೀಯ ಚಿಕಿತ್ಸೆಗೆ ಪಡೆದ 60,000 ರೂ. ಸಾಲವನ್ನು ಮರಳಿಸಲು ವಿಳಂಬವಾದ ಹಿನ್ನೆಲೆಯಲ್ಲಿ ವಾಗ್ವಾದ ನಡೆದಿದೆ.
ಸೋದರಳಿಯಂದಿರ ಕೃತ್ಯ: ಸೋಮವಾರ ಸಂಜೆ ಕಮಲೇಶ್, ವಿಜಯ್ ಹಾಗೂ ಅಮಿತ್ ಎಂಬ ಮೂವರು ಸಹೋದರರು ಚೀನಾ ಜಡೇಜಾ ಅವರನ್ನು ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸಿದ್ದಾರೆ.
ಚಾಕು ಇರಿತ ಹಾಗೂ ಸಾವು: ಜಗಳದ ವೇಳೆ ಕಮಲೇಶ್ ತನ್ನ ಬಳಿಯಿದ್ದ ಚಾಕುವಿನಿಂದ ಮಾವ ಚೀನಾ ಜಡೇಜಾ ಅವರ ಹೊಟ್ಟೆಗೆ ಇರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಅವರು ಮೃತಪಟ್ಟಿದ್ದಾರೆ.
ಈ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲೇಶ್ ಅಲಿಯಾಸ್ ಯೋಗೋ ಪರ್ಮಾರ್, ವಿಜಯ್ ಪರ್ಮಾರ್ ಮತ್ತು ಅಮಿತ್ ಅಲಿಯಾಸ್ ಹೊಜಾರಿ ಪರ್ಮಾರ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.





Leave a comment