ನವದೆಹಲಿ: ಪರಿಷ್ಕೃತ ಅಗ್ನಿಪತ್ (Agnipath) ಚೌಕಟ್ಟಿನಡಿ ಹೆಚ್ಚುವರಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಲಿರುವ ಅಗ್ನಿಪೀರರಿಗೆ (Agniveers) ಕುಟುಂಬ ನಿರ್ವಹಣೆ ಹಾಗೂ ಮದುವೆಗೆ ಸಂಬಂಧಿಸಿದ ನಿಯಮಗಳಲ್ಲಿ ವಿನಾಯತಿ ನೀಡುವ ಕುರಿತು ಸಶಸ್ತ್ರ ಪಡೆಗಳು ಗಂಭೀರವಾಗಿ ಪರಿಶೀಲಿಸುತ್ತಿವೆ. ಪ್ರಸ್ತುತ ಜಾರಿಯಲ್ಲಿರುವ ನಾಲ್ಕು ವರ್ಷಗಳ ಕಡ್ಡಾಯ ಮದುವೆ ನಿಷೇಧ ನಿಯಮ ಮುಂದುವರಿಯಲಿದ್ದು, ಭವಿಷ್ಯದಲ್ಲಿ ನಿಯಮ ಬದಲಾವಣೆಯ ಮೂಲಕ ಇದಕ್ಕೆ ಪರಿಹಾರ ಕಲ್ಪಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಅಗ್ನಿಪತ್ ಯೋಜನೆಯ ಅವಧಿಯನ್ನು ಆರಂಭಿಕ 4 ವರ್ಷಗಳಿಂದ ಹೆಚ್ಚುವರಿ 2 ವರ್ಷಗಳನ್ನು ಸೇರಿಸಿ ಒಟ್ಟು 6 ವರ್ಷಗಳಿಗೆ ವಿಸ್ತರಿಸಲಾಗಿದೆ.
ಸಶಸ್ತ್ರ ಪಡೆಗಳಲ್ಲಿ ಯುವ ಪಡೆಗೆ ಆದ್ಯತೆ ನೀಡುವ ಹಾಗೂ ಕಠಿಣ ತರಬೇತಿ ಮತ್ತು ಕಾರ್ಯಾಚರಣೆಯ ಶಿಸ್ತನ್ನು ಕಾಪಾಡುವ ಉದ್ದೇಶದಿಂದ ಮೊದಲ ನಾಲ್ಕು ವರ್ಷಗಳ ಅವಧಿಯಲ್ಲಿ ಮದುವೆಯಾಗುವುದನ್ನು ನಿಷೇಧಿಸಲಾಗಿದೆ. ಆದರೆ, ಈಗ ಸೇವಾವಧಿ 6 ವರ್ಷಗಳಿಗೆ ವಿಸ್ತರಣೆಯಾಗಿರುವುದರಿಂದ ಮತ್ತು ಯುವಕರು 20 ರ ಹರೆಯದ ಅಂತಿಮ ಘಟ್ಟ ತಲುಪುವುದರಿಂದ ವೈಯಕ್ತಿಕ ಹಾಗೂ ಕೌಟುಂಬಿಕ ಜವಾಬ್ದಾರಿಗಳು ಪ್ರಮುಖವಾಗಲಿವೆ ಎಂಬ ಅಂಶವನ್ನು ರಕ್ಷಣಾ ಸಚಿವಾಲಯ ಪರಿಗಣಿಸಿದೆ.
ಸೇವಾವಧಿ ವಿಸ್ತರಣೆ: ಕೇಂದ್ರ ಸರ್ಕಾರದ ಪರಿಷ್ಕೃತ ನಿರ್ಧಾರದಂತೆ ಅಗ್ನಿಪೀರರ ಸೇವಾವಧಿಯು 4 ವರ್ಷಗಳಿಂದ 6 ವರ್ಷಗಳಿಗೆ ವಿಸ್ತರಣೆಯಾಗಿದೆ.
ಮದುವೆ ನಿಷೇಧ ಮುಂದುವರಿಕೆ: ಸದ್ಯಕ್ಕೆ ಮೊದಲ 4 ವರ್ಷಗಳ ಕಾಲ ಅನ್ವಯವಾಗುವ ಮದುವೆ ನಿಷೇಧ ನಿಯಮದಲ್ಲಿ ಯಾವುದೇ ತಕ್ಷಣದ ಬದಲಾವಣೆ ಇಲ್ಲ, ಇದು ಕಟ್ಟುನಿಟ್ಟಾಗಿ ಮುಂದುವರಿಯುತ್ತದೆ.
ಸೇನಾ ನಿಯಮಗಳ ಜೊತೆ ಸಮತೋಲನ: ಕಾರ್ಯಾಚರಣೆಯ ಶಿಸ್ತು ಮತ್ತು ಸೇನಾ ನಿಯಮಗಳಿಗೆ ಧಕ್ಕೆಯಾಗದಂತೆ ವಿಸ್ತೃತ ಅವಧಿಯಲ್ಲಿ ಕೌಟುಂಬಿಕ ನಿಬಂಧನೆಗಳನ್ನು ಸಡಿಲಿಸುವ ಬಗ್ಗೆ ಉನ್ನತ ರಕ್ಷಣಾ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಅಗ್ನಿಪತ್ ಯೋಜನೆಯಡಿ ಶೇಕಡಾ 25ರಷ್ಟು ನಿಯಮಿತ ಸೈನಿಕರ ಆಯ್ಕೆ ಹಾಗೂ ಉಳಿದವರಿಗೆ ಹೆಚ್ಚುವರಿ ಎರಡು ವರ್ಷಗಳ ಅವಕಾಶ ನೀಡಿರುವುದರಿಂದ, ಸೈನಿಕರ ಮಾನಸಿಕ ಸ್ಥೈರ್ಯ ಮತ್ತು ಕಲ್ಯಾಣದ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.





Leave a comment