Home ಕ್ರೈಂ ನ್ಯೂಸ್ ಮದುವೆ ಎಂದರೆ ಸುಖ-ದುಃಖಗಳಲ್ಲಿ ಜತೆಯಾಗಿ ಬಾಳುವುದು: ಮಾನಸಿಕ ಅಸ್ವಸ್ಥತೆ ಮತ್ತು ಕ್ರೌರ್ಯದ ಆಧಾರದ ಮೇಲೆ ಪತಿಯ ವಿಚ್ಛೇದನ ಅರ್ಜಿ ತಿರಸ್ಕರಿಸಿದ ಹೈಕೋರ್ಟ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮದುವೆ ಎಂದರೆ ಸುಖ-ದುಃಖಗಳಲ್ಲಿ ಜತೆಯಾಗಿ ಬಾಳುವುದು: ಮಾನಸಿಕ ಅಸ್ವಸ್ಥತೆ ಮತ್ತು ಕ್ರೌರ್ಯದ ಆಧಾರದ ಮೇಲೆ ಪತಿಯ ವಿಚ್ಛೇದನ ಅರ್ಜಿ ತಿರಸ್ಕರಿಸಿದ ಹೈಕೋರ್ಟ್!

Share
ಹೈಕೋರ್ಟ್
Share

ರಾಂಚಿ (ಜಾರ್ಖಂಡ್): ಮದುವೆ ಎಂದರೆ ಕೇವಲ ಸುಖದ ಕ್ಷಣಗಳ ಪಾಲುದಾರಿಕೆಯಲ್ಲ, ಬದಲಾಗಿ ಸಂಕಷ್ಟ ಹಾಗೂ ಅನಾರೋಗ್ಯದ ಸಂದರ್ಭಗಳಲ್ಲೂ ಪರಸ್ಪರ ಬೆಂಬಲವಾಗಿ ನಿಲ್ಲುವ ಜೀವಮಾನದ ಬದ್ಧತೆಯಾಗಿದೆ ಎಂದು ಜಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿಯ ಮಾನಸಿಕ ಅಸ್ವಸ್ಥತೆ ಹಾಗೂ ಕ್ರೌರ್ಯದ ಆರೋಪ ಹೊರಿಸಿ ಪತಿ ದಾಖಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಚಾತ್ರಾ ಜಿಲ್ಲೆಯ ವಾಸಿಯಾಗಿರುವ ಮಾಜಿ CISF ಸಿಬ್ಬಂದಿಯಾಗಿರುವ ಪತಿ, ೨೦೧೬ರ ಜನವರಿಯಲ್ಲಿ ವಿವಾಹವಾಗಿದ್ದ ತನ್ನ ಪತ್ನಿಯ ವಿರುದ್ಧ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದನು. ಪತ್ನಿ ಕಾರಣವಿಲ್ಲದೆ ನಗುವುದು, ತನ್ನಷ್ಟಕ್ಕೆ ತಾನೇ ಮಾತನಾಡುವುದು ಸೇರಿದಂತೆ ಮಾನಸಿಕ ಅಸ್ಥಿರತೆ ಹೊಂದಿದ್ದಾಳೆ ಹಾಗೂ ಮದುವೆಗೂ ಮುಂಚೆ ಈ ವಿಷಯವನ್ನು ಮುಚ್ಚಿಡಲಾಗಿತ್ತು ಎಂದು ಪತಿ ಆರೋಪಿಸಿದ್ದನು. ಆದರೆ ಪತ್ನಿಯು ಈ ಆರೋಪಗಳನ್ನು ತಳ್ಳಿಹಾಕಿದ್ದು, ಪತಿಯ ಕುಟುಂಬದವರು ವರದಕ್ಷಿಕೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು.

ವೈದ್ಯಕೀಯ ತಪಾಸಣೆ ವರದಿ: ರಾಂಚಿಯ ‘ರಿನ್ಪಾಸ್’ (RINPAS) ವೈದ್ಯಕೀಯ ಮಂಡಳಿಯು ಪತ್ನಿಯನ್ನು ತಪಾಸಣೆ ನಡೆಸಿದ್ದು, ಆಕೆಯಲ್ಲಿ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆಯ ರೋಗಲಕ್ಷಣಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಾಕ್ಷ್ಯಾಧಾರಗಳ ಕೊರತೆ: ಪತಿ ಮತ್ತು ಆತನ ಸಾಕ್ಷಿಗಳು ಯಾವುದೇ ನಿರ್ದಿಷ್ಟ ದೈಹಿಕ ಹಲ್ಲೆ ಅಥವಾ ಮೌಖಿಕ ಕಿರುಕುಳದ ಘಟನೆಗಳನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪತ್ನಿಯ ಕಾಳಜಿ: ನ್ಯಾಯಾಲಯದ ವಿಚಾರಣೆ ವೇಳೆ ಪತ್ನಿ ಬಹಳ ಸ್ವಾಭಾವಿಕವಾಗಿ ಉತ್ತರಿಸಿದ್ದು, ತನ್ನ ಮಗನ ಸಂರಕ್ಷಣೆ ಮಾಡುತ್ತಿದ್ದಾಳೆ ಹಾಗೂ ಗಂಡನೊಂದಿಗೆ ಸಂಸಾರ ಮಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾಳೆ.

ನ್ಯಾಯಮೂರ್ತಿ ಸುಜಿತ್ ನಾರಾಯಣ ಪ್ರಸಾದ್ ಮತ್ತು ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರನ್ನೊಳಗೊಂಡ ವಿಭಾಗೀಯ ಪೀಠವು ಕಳಪೆ ಸಾಕ್ಷ್ಯಗಳು ಮತ್ತು ವೈದ್ಯಕೀಯ ವರದಿಯ ಕೊರತೆಯಿಂದಾಗಿ ಪತಿಯ ಅರ್ಜಿಯನ್ನು ವಜಾಗೊಳಿಸಿದ್ದು, ಚಾತ್ರಾ ಕುಟುಂಬ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles