Home ದಾವಣಗೆರೆ 2ನೇ ಮದುವೆಯಾದ ಖುಷಿಯಲ್ಲಿದ್ದ ಸಿಎಂ ಒಮರ್ ಅಬ್ದುಲ್ಲಾಗೆ ಟೆನ್ಶನ್ ಟೆನ್ಶನ್: 10-15 ಅತೃಪ್ತ ಶಾಸಕರಿಂದ ರಹಸ್ಯ ಸಭೆ, ಸಂಸದ ರಾಜೀನಾಮೆ!
ದಾವಣಗೆರೆನವದೆಹಲಿಬೆಂಗಳೂರು

2ನೇ ಮದುವೆಯಾದ ಖುಷಿಯಲ್ಲಿದ್ದ ಸಿಎಂ ಒಮರ್ ಅಬ್ದುಲ್ಲಾಗೆ ಟೆನ್ಶನ್ ಟೆನ್ಶನ್: 10-15 ಅತೃಪ್ತ ಶಾಸಕರಿಂದ ರಹಸ್ಯ ಸಭೆ, ಸಂಸದ ರಾಜೀನಾಮೆ!

Share
ಒಮರ್ ಅಬ್ದುಲ್ಲಾ
Share

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತರೂಢ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಳಗೆ ಭುಗಿಲೆದ್ದಿರುವ ಅಸಮಾಧಾನ ತೀವ್ರಗೊಂಡಿದ್ದು, ಸಂಪುಟ ವಿಸ್ತರಣೆ ಮತ್ತು ಪುನಾರಚನೆಯ ವಿವಾದದ ಬೆನ್ನಲ್ಲೇ ಸುಮಾರು 10 ರಿಂದ 15 ಅತೃಪ್ತ ಶಾಸಕರು ಶ್ರೀನಗರದಲ್ಲಿ ರಹಸ್ಯ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸಚಿವ ಸಂಪುಟದ ಆಯ್ಕೆ ಹಾಗೂ ಸಲಹೆಗಾರ ನಾಸಿರ್ ಅಸ್ಲಂ ವಾನಿ ಅವರ ಅತಿಯಾದ ಪ್ರಭಾವದ ವಿರುದ್ಧ ಈ ಶಾಸಕರು ತಿರುಗಿಬಿದ್ದಿದ್ದಾರೆ.

ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಆರು ಬಾರಿ ಶಾಸಕರಾಗಿರುವ ಮುಬಾರಕ್ ಗುಲ್ ತೀವ್ರ ಅಸಮಾಧಾನ ಹೊರಹಾಕಿದ್ದು, ಸ್ವತಂತ್ರವಾಗಿ ಸುದ್ದಿಗೋಷ್ಠಿ ನಡೆಸಲು ಸಜ್ಜಾಗಿದ್ದರು. ಇದರ ಜೊತೆಗೆ, ಶ್ರೀನಗರ ಸಂಸದ ಆಘಾ ಸೈಯದ್ ರೂಹುಲ್ಲಾ ಅವರು ಆರ್ಟಿಕಲ್ 370 ಮರುಸ್ಥಾಪನೆ ಹಾಗೂ ಸಾವಿಂಧಾನಿಕ ಹಕ್ಕುಗಳ ರಕ್ಷಣೆಯಲ್ಲಿ ಪಕ್ಷ ವಿಫಲವಾಗಿದೆ ಎಂದು ಆರೋಪಿಸಿ ಎನ್‌ಸಿ ಪ್ರಾಥಮಿಕ ಸದಸ್ಯತ್ವಕ್ಕೆ ಮಂಗಳವಾರ ರಾಜೀನಾಮೆ ನೀಡಿರುವುದು ಸರ್ಕಾರಕ್ಕೆ ದೊಡ್ಡ ಆಘಾತ ತಂದಿದೆ.

ಅತೃಪ್ತ ಶಾಸಕರ ಗಡುವು: ಎಲ್ಲಾ ಎಂಟು ಸಚಿವರನ್ನು ಹಾಗೂ ಸಿಎಂ ಸಲಹೆಗಾರ ನಾಸಿರ್ ಅಸ್ಲಂ ವಾನಿ ಅವರನ್ನು 15 ದಿನಗಳ ಒಳಗೆ ಬದಲಾಯಿಸಬೇಕು ಎಂದು ಅತೃಪ್ತ ಶಾಸಕರು ಆಗ್ರಹಿಸಿದ್ದಾರೆ.

ಸಂಖ್ಯಾಬಲದ ಸಮೀಕರಣ: 90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಬಹುಮತಕ್ಕೆ 46 ಸ್ಥಾನಗಳು ಬೇಕು. ಪ್ರಸ್ತುತ ಎನ್‌ಸಿ ಮೈತ್ರಿಕೂಟವು 54 ಶಾಸಕರ ಬಲ ಹೊಂದಿದ್ದು, ಬಂಡಾಯದ ತೀವ್ರತೆಯು ಸರ್ಕಾರದ ಅಸ್ತಿತ್ವಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.

ಮುಬಾರಕ್ ಗುಲ್ ನಡೆ: ಸಚಿವ ಸ್ಥಾನ ವಂಚಿತರಾಗಿರುವ ಹಿರಿಯ ನಾಯಕ ಮುಬಾರಕ್ ಗುಲ್ ಅವರ ಬೆಂಬಲಿಗರು ಶ್ರೀನಗರದಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಮುಖಂಡರ ಜೊತೆಗಿನ ಮಾತುಕತೆ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles