ಮುಂಬೈ: ಮುಂಬೈನ ಭಂಡೂಪ್ ಪ್ರದೇಶದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಬಡಿಸಿದ ಆಹಾರ ಸೇವಿಸಿ ವಧು, ವರ ಹಾಗೂ 30ಕ್ಕೂ ಹೆಚ್ಚು ಅತಿಥಿಗಳು ತೀವ್ರ ಅಸ್ವಸ್ಥಗೊಂಡಿರುವ ದಾರುಣ ಘಟನೆ ವರದಿಯಾಗಿದೆ. ಅತಿಥಿಗಳ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಎಚ್ಚೆತ್ತ ವಧು ಹಾಗೂ ವರನ ಕುಟುಂಬಸ್ಥರು ಅವರನ್ನು ಮುಲುಂಡ್‌ನಲ್ಲಿರುವ ಬಿಎಂಸಿ ನಿರ್ವಹಣೆಯ ಅಗರ್ವಾಲ್ ಆಸ್ಪತ್ರೆಗೆ ತುರ್ತಾಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಆಹಾರ ಸೇವಿಸಿದ ಕೆಲವೇ ಸಮಯದಲ್ಲಿ ವಾಂತಿ, ಭೇದಿ ಹಾಗೂ ತೀವ್ರ ಹೊಟ್ಟೆನೋವಿನಿಂದ ಬಳಲಿದ 27 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 11 ಮಹಿಳೆಯರು, 9 ಪುರುಷರು ಹಾಗೂ 7 ಮಕ್ಕಳು ಸೇರಿದ್ದಾರೆ. ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ನಿಗಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳಪೆ ಅಥವಾ ಹಳಸಿದ ಆಹಾರ ಹಾಗೂ ಮದುವೆಯ ಕೊನೆಯಲ್ಲಿ ಬಡಿಸಿದ ಖೋವಾ (ಕೋಯಾ) ಸೇವನೆಯಿಂದಲೇ ಈ ಅನಾಹುತ ಸಂಭವಿಸಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತ ತುಕಾರಾಮ್ ಮುಂಡೆ ಹಾಗೂ ಮುಂಬೈ ಪೊಲೀಸರು ಸಮಗ್ರ ತನಿಖೆ ನಡೆಸಿ ಅಡುಗೆ ತಯಾರಕ (ಕೇಟರರ್) ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪರವಾನಗಿ ರದ್ದುಪಡಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಆಹಾರ ವಿಷಪ್ರಾಶನ: ವಿವಾಹ ಮಹೋತ್ಸವದಲ್ಲಿ ಊಟ ಮಾಡಿದ ವಧು-ವರ ಸೇರಿದಂತೆ 30ಕ್ಕೂ ಅಧಿಕ ಮಂದಿಗೆ ವಾಂತಿ ಮತ್ತು ಭೇದಿಯಾಗಿದ್ದು, ಮುಲುಂಡ್‌ನ ಅಗರ್ವಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖೋವಾ ಸೇವನೆಯಿಂದ ಅಸ್ವಸ್ಥತೆ: ಅತಿಥಿಗಳು ಮತ್ತು ವಧು-ವರರಿಗೆ ಕೊನೆಯಲ್ಲಿ ಬಡಿಸಿದ ಖೋವಾದಿಂದಲೇ ಈ ಸಮಸ್ಯೆ ಉಂಟಾಗಿದೆ ಎಂದು ಸಂಬಂಧಿಕರು ದೂರಿದ್ದಾರೆ.
ಎಫ್‌ಡಿಎ ತನಿಖೆಗೆ ಒತ್ತಾಯ: ಕಳಪೆ ಆಹಾರ ನೀಡಿದ ಕೇಟರರ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಮಹಾರಾಷ್ಟ್ರ ಎಫ್‌ಡಿಎ ಆಯುಕ್ತ ತುಕಾರಾಮ್ ಮುಂಡೆ ಅವರಿಗೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.





Leave a comment