Home ದಾವಣಗೆರೆ ದಾವಣಗೆರೆ ಎಪಿಎಂಸಿಯಲ್ಲಿ ಆಂಧ್ರಪ್ರದೇಶದ ಭತ್ತದ ಅನಧಿಕೃತ ವ್ಯಾಪಾರ: ಲಾರಿ ತಡೆದು ರೈತರ ಆಕ್ರೋಶ, ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ದಾವಣಗೆರೆಬೆಂಗಳೂರುವಾಣಿಜ್ಯ

ದಾವಣಗೆರೆ ಎಪಿಎಂಸಿಯಲ್ಲಿ ಆಂಧ್ರಪ್ರದೇಶದ ಭತ್ತದ ಅನಧಿಕೃತ ವ್ಯಾಪಾರ: ಲಾರಿ ತಡೆದು ರೈತರ ಆಕ್ರೋಶ, ಅಧಿಕಾರಿಗಳ ವಿರುದ್ಧ ಪ್ರತಿಭಟನೆ

Share
ದಾವಣಗೆರೆ
Share

ದಾವಣಗೆರೆ ಎಪಿಎಂಸಿ ಪ್ರಾಂಗಣದಲ್ಲಿ ಅನಧಿಕೃತವಾಗಿ ಆಂಧ್ರಪ್ರದೇಶ ರಾಜ್ಯದಿಂದ ತಂದ ಭತ್ತ ವ್ಯಾಪಾರ ವಹಿವಾಟು ಮಾಡಲಾಗುತ್ತದೆ. ಅವರಗೆರೆ ಮತ್ತು ಸುತ್ತಮುತ್ತಲಿನ ರೈತರು ಭತ್ತದ ಲೋಡ್ ಲಾರಿ ಹಿಡಿದು ಎಪಿಎಂಸಿ ಕಚೇರಿಗೆ ತಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮತ್ತು ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೋಳೆನಹಳ್ಳಿ ಬಿ ಎಂ ಸತೀಶ್ ರವರು ಮಾತನಾಡಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಭತ್ತದ ವ್ಯಾಪಾರ ವಹಿವಾಟು ಕಡ್ಡಾಯವಾಗಿ ಇ-ಟೆಂಡರ್ ಪದ್ಧತಿಯಲ್ಲಿ ನಡೆಸಬೇಕು ಎಂಬ ನಿಯಮ ಇದೆ. ಆದರೆ ತದ್ವಿರುದ್ಧವಾಗಿ ನೆರೆ ರಾಜ್ಯದಿಂದ ತಂದ ಭತ್ತವನ್ನು ನೇರವಾಗಿ ಅನಧಿಕೃತವಾಗಿ ನಡೆಸಲಾಗುತ್ತಿದೆ. ಇದರಿಂದ ಭತ್ತದ ದರ ಕುಸಿತ ಕಂಡಿದೆ ಮತ್ತು ಮಾರುಕಟ್ಟೆ ಶುಲ್ಕ ಪಾವತಿ ಆಗುವುದಿಲ್ಲ. ಈ ರೀತಿಯ ಅನಧಿಕೃತ ವ್ಯಾಪಾರ ವಹಿವಾಟಿನಲ್ಲಿ ಎಪಿಎಂಸಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಹೇಳಿದರು.

ಎಪಿಎಂಸಿ ಕಚೇರಿ ಆವರಣದಲ್ಲಿ ಅನಧಿಕೃತವಾಗಿ ವ್ಯಾಪಾರ ವಹಿವಾಟಿನ ಭತ್ತದ ಲಾರಿ ಲೋಡ್ ಹಿಡಿದು ತಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಎಪಿಎಂಸಿ ಸಹಾಯಕ ಕಾರ್ಯದರ್ಶಿಗಳಾದ ಶ್ರೀಹರಿ, ಗಿರೀಶನಾಯ್ಕ, ಕಚೇರಿ ಸೂಪರ್ ವೈಸರ್ ಪ್ರಸನ್ನ ರವರು ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ಕಚೇರಿ ಒಳಗೆ ಹೊರಗೆ ಓಡಾಡುತ್ತಿದ್ದರು.

ಇದರಿಂದ ರೊಚ್ಚಿಗೆದ್ದ ರೈತರು ಕಚೇರಿಗೆ ನುಗ್ಗಿ ಅನಧಿಕೃತ ವ್ಯಾಪಾರ ವಹಿವಾಟು ನಡೆಸುತ್ತಿದ್ದವರನ್ನು ಕಲೆಸಬೇಕು ಎಂದು ಆಗ್ರಹಿಸಿದರು. ಆಗ ಭತ್ತ ತಂದಿದ್ದ ಭೀಮಣ್ಣ ಎಂಬ ವ್ಯಕ್ತಿಯನ್ನು ನಾನು ರೈತನಲ್ಲ. ರೈತರಿಂದ ಖರೀದಿಸಿ ಹೆಚ್ಚಿನ ಲಾಭಕ್ಕಾಗಿ ಅನಧಿಕೃತ ವ್ಯಾಪಾರ ವಹಿವಾಟು ನಡೆಸುವುದಾಗಿ ಹೇಳಿದ. ನಾನು ಎಪಿಎಂಸಿ ಮಾರಾಟ ಮಾಡಿರುವುದಕ್ಕೆ ಬಿಲ್ ಗಳಿವೆ. ಅದು ನನ್ನ ವೃತ್ತಿ ಎಂದು ವಾದಿಸಿದ. ಆಗ ಎಪಿಎಂಸಿ ಅಧಿಕಾರಿಗಳು ಇನ್ನು ಮುಂದೆ ಈ ರೀತಿಯ ಅನಧಿಕೃತ ವ್ಯಾಪಾರ ವಹಿವಾಟು ಮಾಡಬಾರದು ಎಂದು ಹೇಳಿ ಅವನನ್ನು ಕಳುಹಿಸಿದರು.

ಇದರಿಂದ ಎಪಿಎಂಸಿ ಅಧಿಕಾರಿಗಳು ಅನಧಿಕೃತ ವ್ಯಾಪಾರ ವಹಿವಾಟಿನಲ್ಲಿ ಭಾಗಿಯಾಗಿರುವುದು ರೈತರಿಗೆ ದೃಢವಾಯಿತು. ಜಿಲ್ಲಾ ರೈತರ ಒಕ್ಕೂಟದಿಂದ ಎಪಿಎಂಸಿ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಎಪಿಎಂಸಿಯಲ್ಲಿ ನಡೆಯುತ್ತಿರುವ ಅನಧಿಕೃತ ವ್ಯಾಪಾರ ವಹಿವಾಟಿನ ಗಮನಕ್ಕೆ ತಂದು, ಸೂಕ್ತ ತನಿಖೆ ನಡೆಸಲು ಆಗ್ರಹಿಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಗೋಪನಾಳ್ ಎಸ್.ಆರ್.ರಾಜೇಂದ್ರ, ಪರಮೇಶ್, ಅವರಗೆರೆ ಅಜ್ಜನಗೌಡ್ರು, ಪಿ.ಎಂ.ಮಂಜುನಾಥ್, ಸಿ.ನಾರಪ್ಪ, ಎಸ್.ಬಿ.ಶ್ರೀಧರ್, ಗೌಡ್ರಅಣ್ಣಪ್ಪ, ಕೆ.ಆರ್.ಶಿವಕುಮರ್, ಗೌಡ್ರಸುರೇಶ್, ಧನ್ಯಕುಮಾರ್, ಪಾಮೇನಳ್ಳಿ ಪರಮೇಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles