ಚನ್ನಗಿರಿ/ ದಾವಣಗೆರೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಚನ್ನಗಿರಿ ಹಾಗೂ ದಾವಣಗೆರೆ ಮಾರುಕಟ್ಟೆಯಲ್ಲಿ ಇಂದು ದಾಖಲಾದ ಅಡಿಕೆ, ಕಪ್ಪು ಮೆಣಸು ಮತ್ತು ಹಸಿ ಅಡಿಕೆಯ ಅಧಿಕೃತ ಧಾರಣೆ ವಿವರಗಳು ಹೊರಬಿದ್ದಿವೆ.
ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಯ ಗರಿಷ್ಠ ಬೆಲೆ 50,000 ಗಡಿ ದಾಟಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.
ರಾಶಿ ಅಡಿಕೆ ಬೆಲೆ (ಚನ್ನಗಿರಿ): ಕನಿಷ್ಠ ರೂ. 38,099, ಗರಿಷ್ಠ ರೂ. 50,512 ಹಾಗೂ ಸರಾಸರಿ ರೂ. 48,591 ದಾಖಲಾಗಿದೆ.
ಬೆಟ್ಟೆ, ಕಪ್ಪು ಕಾಳು ಮೆಣಸು: 2nd ಬೆಟ್ಟೆ ಅಡಿಕೆ ದರ ರೂ. 36,879 ತಲುಪಿದ್ದರೆ, ಕಪ್ಪು ಕಾಳುಮೆಣಸಿನ ಬೆಲೆ ರೂ. 68,799 ಕ್ಕೆ ಮಾರಾಟವಾಗಿದೆ.
ಹಸಿ ಅಡಿಕೆ ದರ (ದಾವಣಗೆರೆ): ದಾವಣಗೆರೆ ಮಾರುಕಟ್ಟೆಯಲ್ಲಿ ಹಸಿ ಅಡಿಕೆಗೆ ಪ್ರತಿ ಕ್ವಿಂಟಾಲ್‌ಗೆ ರೂ. 6,400 ಬೆಲೆ ನಿಗದಿಯಾಗಿದೆ.





Leave a comment