Home ದಾವಣಗೆರೆ ಸ್ಟಾಫ್ ನೋಟಿಸ್‌ಗೆ ಸಿಗದ ಉತ್ತರ, ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ಟಿಂಗ್ ಷಡ್ಯಂತ್ರ: ಕಾಂಗ್ರೆಸ್‌ನಿಂದ ಕೃಪಾ ಆಳ್ವಾ 6 ವರ್ಷ ಉಚ್ಚಾಟನೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಸ್ಟಾಫ್ ನೋಟಿಸ್‌ಗೆ ಸಿಗದ ಉತ್ತರ, ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ಟಿಂಗ್ ಷಡ್ಯಂತ್ರ: ಕಾಂಗ್ರೆಸ್‌ನಿಂದ ಕೃಪಾ ಆಳ್ವಾ 6 ವರ್ಷ ಉಚ್ಚಾಟನೆ!

Share
ಸಿದ್ದರಾಮಯ್ಯ
Share

ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್ ಆಪರೇಷನ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಕಠಿಣ ಕ್ರಮ ಕೈಗೊಂಡಿದೆ.

ಪಕ್ಷದ ನಾಯಕರ ವಿರುದ್ಧ ನಡೆಸಿರುವ ಷಡ್ಯಂತ್ರ ಹಾಗೂ ಪಕ್ಷವಿರೋಧಿ ಚಟುವಟಿಕೆಯ ಆರೋಪದ ಮೇಲೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಕೃಪಾ ಆಳ್ವಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಕಾಲ ಕಾಂಗ್ರೆಸ್‌ನ ಮೂಲ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.

ಪಕ್ಷಕ್ಕೆ ತೀವ್ರ ಮುಜುಗರ ಹಾಗೂ ನೋಟಿಸ್‌ಗೆ ನಿರ್ಲಕ್ಷ್ಯ:

ಕೆಪಿಸಿಸಿ ಉಪಾಧ್ಯಕ್ಷ ಎಂ. ನಾರಾಯಣಸ್ವಾಮಿ ಅವರು ಹೊರಡಿಸಿರುವ ಉಚ್ಚಾಟನಾ ಆದೇಶದ ಪ್ರಕಾರ, ಈ ಸ್ಟಿಂಗ್ ಆಪರೇಷನ್ ಪ್ರಕರಣ ಮತ್ತು ಮಾಧ್ಯಮಗಳಲ್ಲಿ ಬಂದ ನಕಾರಾತ್ಮಕ ವರದಿಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸಾರ್ವಜನಿಕವಾಗಿ ತೀವ್ರ ಮುಜುಗರ ಉಂಟಾಗಿದೆ. ಪ್ರಕರಣದಲ್ಲಿ ಕೃಪಾ ಆಳ್ವಾ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದ್ದರಿಂದ, ಸ್ಪಷ್ಟನೆ ನೀಡುವಂತೆ ಅವರಿಗೆ ಕೆಪಿಸಿಸಿ ಶೋಕಾಸ್ (ಕಾರಣ ಕೇಳಿ) ನೋಟಿಸ್ ಜಾರಿಗೊಳಿಸಿತ್ತು. ಆದರೆ, ಅವರು ನಿಗದಿತ ಸಮಯದೊಳಗೆ ಯಾವುದೇ ಸಮಜಾಯಿಷಿ ಅಥವಾ ಉತ್ತರ ನೀಡದ ಹಿನ್ನೆಲೆಯಲ್ಲಿ KPCC ಅಧ್ಯಕ್ಷರ ಸೂಚನೆಯಂತೆ ಈ ಉಚ್ಚಾಟನೆ ಕ್ರಮ ಕೈಗೊಳ್ಳಲಾಗಿದೆ.

ಸಿದ್ದರಾಮಯ್ಯ ಆರೋಪ ಹಾಗೂ ಪೊಲೀಸ್ ತನಿಖೆ:

ತಮ್ಮ ತೇಜೋವಧೆ ಮಾಡುವ ಉದ್ದೇಶದಿಂದ ಹಣೆದ ತಪ್ಪು ವಿಡಿಯೋ ಹಾಗೂ ಬ್ಲ್ಯಾಕ್‌ಮೇಲ್ ತಂತ್ರದ ಹಿಂದೆ ಕೃಪಾ ಆಳ್ವಾ ಹಸ್ತವಿದೆ ಎಂದು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. ಅಲ್ಲದೆ ಈ ವಿಡಿಯೋ ಪ್ರಸಾರ ಮಾಡದಂತೆ ಕೋರ್ಟ್‌ನಿಂದ ತಡೆಯಾಜ್ಞೆ (Injunction) ತಂದಿದ್ದರು. ಮತ್ತೊಂದೆಡೆ, ಈ ಕುರಿತು ತನಿಖೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು, ವಿಡಿಯೋದಲ್ಲಿ ಮಾಡಲಾಗಿರುವ ಲೈಂಗಿಕ ಶೋಷಣೆ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಯೋಜಿತವಾಗಿ ರೂಪಿಸಿದ ಕಟ್ಟುಕಥೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles