ನ್ಯೂಯಾರ್ಕ್ / ಬ್ರೂಕ್ಲಿನ್: ಅಮೆರಿಕದಿಂದ ಸಿರಿಯಾಕ್ಕೆ ಕರೆದೊಯ್ದು ಉಗ್ರಗಾಮಿಗೆ ಮದುವೆ ಮಾಡಿಸಲಾಗಿದ್ದ, ಐಸಿಸ್ ಉಗ್ರ ಸಂಘಟನೆಯಿಂದ ಶಸ್ತ್ರಾಸ್ತ್ರ ಹಾಗೂ ಮಿಲಿಟರಿ ತರಬೇತಿ ಪಡೆದ ಆರೋಪ ಎದುರಿಸುತ್ತಿದ್ದ ‘ಐಸಿಸ್ ಬ್ರೈಡ್’ ಹಲೀಮಾ ಸಲ್ಮಾನ್ (27) ಎಂಬಾಕೆಯನ್ನು ಅಮೆರಿಕದ ಫೆಡರಲ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.
ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿ ಮಿಲಿಟರಿ ತರಬೇತಿ ಪಡೆದ ಆರೋಪದ ಮೇಲೆ ಅಮೆರಿಕದಲ್ಲಿ ವಿಚಾರಣೆ ಎದುರಿಸಿದ ಮೊದಲ ಮಹಿಳೆ ಈಕೆಯಾಗಿದ್ದಾಳೆ.
ನ್ಯೂಯಾರ್ಕ್‌ನ ಬ್ರೂಕ್ಲಿನ್ ಫೆಡರಲ್ ಜ್ಯೂರಿ ಅಕ್ಟೋಬರ್ 27 ರಂದು ಹಲೀಮಾ ದೋಷಿ ಎಂದು ತೀರ್ಪು ನೀಡಿದ್ದು, 2027ರ ಫೆಬ್ರವರಿ 2 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ಬ್ರೂಕ್ಲಿನ್‌ನಲ್ಲಿ ಜನಿಸಿದ್ದ ಹಲೀಮಾಳನ್ನು ಆಕೆಯ ತಂದೆ 2017ರಲ್ಲಿ ತಮ್ಮ ಕುಟುಂಬವನ್ನು ಸಿರಿಯಾಕ್ಕೆ ಬಲವಂತವಾಗಿ ಕರೆದೊಯ್ದು, ಐಸಿಸ್ ಉಗ್ರ ಅಬು ಅಲಿಗೆ ಮದುವೆ ಮಾಡಿಕೊಟ್ಟಿದ್ದ.
ಬಲವಂತದ ಮದುವೆ ಹಾಗೂ ಗಂಡನ ಶೋಷಣೆಗೆ ಒಳಗಾಗಿದ್ದಾಗಿ ಹಲೀಮಾ ಪರ ವಕೀಲರು ವಾದಿಸಿದರೂ, ಆಕೆ ಎಕೆ-47 ರೈಫಲ್ ಹಿಡಿದುಕೊಂಡಿರುವ ವಿಡಿಯೋ ಹಾಗೂ ಮಹಿಳಾ ಉಗ್ರರ ‘ನುಸೈಬಾ ಕತೀಬಾ’ ಬೆಟಾಲಿಯನ್‌ನಲ್ಲಿ ತರಬೇತಿ ಪೂರ್ಣಗೊಳಿಸಿದ ದಾಖಲೆಗಳನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ. ಈ ಅಪರಾಧಕ್ಕೆ ಆಕೆಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.
ಅಮೆರಿಕದಲ್ಲಿ ಪ್ರಥಮ ವಿಚಾರಣೆ: ಐಸಿಸ್ ಸಂಘಟನೆ ಸೇರಿ ಶಸ್ತ್ರಾಸ್ತ್ರ ತರಬೇತಿ ಪಡೆದ ಆರೋಪದಲ್ಲಿ ಅಮೆರಿಕದಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸಿದ ಮೊದಲ ಮಹಿಳೆ ಹಲೀಮಾ ಸಲ್ಮಾನ್.
ಸಾಕ್ಷ್ಯಾಧಾರಗಳು ಭದ್ರ: ಎಕೆ-47 ರೈಫಲ್ ಬಳಕೆ ಹಾಗೂ ಐಸಿಸ್ ಮಹಿಳಾ ಪಡೆ ‘ನುಸೈಬಾ ಕತೀಬಾ’ ಬೆಟಾಲಿಯನ್‌ನಲ್ಲಿ ತರಬೇತಿ ಪಡೆದ ದಾಖಲೆಗಳನ್ನು ನ್ಯಾಯಾಲಯ ಪುರಸ್ಕರಿಸಿದೆ.
2027ರಲ್ಲಿ ಶಿಕ್ಷೆ ಪ್ರಕಟ: 10 ವರ್ಷಗಳವರೆಗೆ ಜೈಲು ಶಿಕ್ಷೆ ಎದುರಿಸುತ್ತಿರುವ ಹಲೀಮಾ ಸಲ್ಮಾನ್‌ಗೆ 2027ರ ಫೆಬ್ರವರಿಯಲ್ಲಿ ಅಮೆರಿಕ ಕೋರ್ಟ್ ಶಿಕ್ಷೆ ವಿಧಿಸಲಿದೆ.





Leave a comment