Home ದಾವಣಗೆರೆ ಪತಿ ಕೊಲ್ಲಲು ಪ್ರೇಮಿಯೊಂದಿಗೆ ಸೇರಿ ಪತ್ನಿ ಯತ್ನ: ಜಿಮ್ ಟ್ರೈನರ್ ಸಹವಾಸಕ್ಕೆ ಬಿದ್ದು ಗಂಡನಿಗೆ ಮುಹೂರ್ತ ಇಟ್ಟ ಸತಿ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ಪತಿ ಕೊಲ್ಲಲು ಪ್ರೇಮಿಯೊಂದಿಗೆ ಸೇರಿ ಪತ್ನಿ ಯತ್ನ: ಜಿಮ್ ಟ್ರೈನರ್ ಸಹವಾಸಕ್ಕೆ ಬಿದ್ದು ಗಂಡನಿಗೆ ಮುಹೂರ್ತ ಇಟ್ಟ ಸತಿ!

Share
ಪತಿ
Share

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಪತಿ ಮೇಲೆ ಆತನ ಪತ್ನಿಯು ಪ್ರೇಮಿ ಜಿಮ್ ಟ್ರೈನರ್‌ ಜೊತೆ ಸೇರಿಕೊಂಡು ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಯತ್ನ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಅಕ್ರಮ ಸಂಬಂಧದ ವಿಚಾರ ತಿಳಿದುಬಂದ ಹಿನ್ನೆಲೆಯಲ್ಲಿ ಇಬ್ಬರೂ ಸೇರಿ ಪತಿಯನ್ನು ಮುಗಿಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಸುಂದರಾ ಸೆಕ್ಟರ್ 1 ರ ಜಾಗೃತಿ ಆರ್ಡಬ್ಲ್ಯೂಎ ಸೊಸೈಟಿಯಲ್ಲಿ ಈ ಕೃತ್ಯ ನಡೆದಿದ್ದು, ಗಾಯಗೊಂಡ ಶಶಾಂಕ್ ಕಂಥಾರಿಯಾ ಅವರನ್ನು ಯಶೋದಾ ಮೆಡಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಪತ್ನಿ ಪ್ರಿಯಾ ಶರ್ಮಾ ಹಾಗೂ ಜಿಮ್ ಟ್ರೈನರ್ ಪ್ರತಾಪ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ: ಫಿಟ್‌ನೆಸ್ ಹೆಡ್‌ಕ್ವಾರ್ಟರ್ಸ್ ಜಿಮ್‌ನಲ್ಲಿ ತರಬೇತುದಾರನಾಗಿರುವ ಪ್ರತಾಪ್ ಸಿಂಗ್ ಜೊತೆ ಪ್ರಿಯಾ ಶರ್ಮಾ ಕಳೆದ 7-8 ತಿಂಗಳಿಂದ ಒಡನಾಟ ಹೊಂದಿದ್ದು, ಇದು ಪ್ರೇಮ ಸಂಬಂಧಕ್ಕೆ ತಿರುಗಿತ್ತು. ಈ ವಿಚಾರ ಪತಿಗೆ ತಿಳಿದು ಬೇರೆಡೆಗೆ ಮನೆ ಬದಲಾಯಿಸಲು ಸಿದ್ಧತೆ ನಡೆಸಿದ್ದ.

ಕೊಲೆಗೆ ಸಂಚು ಮತ್ತು ದಾಳಿ: ಅಕ್ಟೋಬರ್ 26 ರಂದು ಬೆಳಿಗ್ಗೆ ಪ್ರಿಯಾ ಜಿಮ್‌ಗೆ ಹೊರಡುವಾಗ ಮುಖ್ಯ ಗೇಟ್ ಅನ್ನು ತೆರೆದಿಟ್ಟಿದ್ದಳು. ಇದನ್ನು ಬಳಸಿಕೊಂಡು ಮನೆಗೆ ನುಗ್ಗಿದ ಪ್ರತಾಪ್, ಮಲಗಿದ್ದ ಶಶಾಂಕ್ ಮೇಲೆ ಕದ್ರಿಯಿಂದ ಮನಬಂದಂತೆ ಇರಿದು ಪರಾರಿಯಾಗಿದ್ದಾನೆ.

ಪೊಲೀಸರ ತ್ವರಿತ ಕಾರ್ಯಾಚರಣೆ: ಶಶಾಂಕ್ ಅವರ ಸಹೋದರ ನೀಡಿದ ದೂರಿನ ಮೇರೆಗೆ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles