Home ದಾವಣಗೆರೆ 23,098 ಮತಗಳ ಬೃಹತ್ ಅಂತರದಿಂದ ಕೈ ಅಭ್ಯರ್ಥಿ ಶಶಿ ಹುಲಿಕಂಟೆಮಠ ಸೋಲಿಸಿದ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್: ಫಲಿತಾಂಶ ನೋಡಿ ಕಾಂಗ್ರೆಸ್ ಶಾಕ್!
ದಾವಣಗೆರೆನವದೆಹಲಿಬೆಂಗಳೂರು

23,098 ಮತಗಳ ಬೃಹತ್ ಅಂತರದಿಂದ ಕೈ ಅಭ್ಯರ್ಥಿ ಶಶಿ ಹುಲಿಕಂಟೆಮಠ ಸೋಲಿಸಿದ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್: ಫಲಿತಾಂಶ ನೋಡಿ ಕಾಂಗ್ರೆಸ್ ಶಾಕ್!

Share
ಕೆ.ಎಂ. ಸುರೇಶ್
Share

ದಾವಣಗೆರೆ/ಬೆಂಗಳೂರು: ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ವಿರುದ್ಧ 23,098 ಮತಗಳ ಬೃಹತ್ ಅಂತರದ ಗೆಲುವು ಸಾಧಿಸಿದ್ದಾರೆ.

ಒಟ್ಟು 10 ಸುತ್ತುಗಳಲ್ಲಿ ನಡೆದ ರೋಚಕ ಮತ ಎಣಿಕೆಯಲ್ಲಿ ಆರಂಭದಿಂದಲೂ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದ ಕೆ.ಎಂ. ಸುರೇಶ್ ಅವರು ಪ್ರಚಂಡ ಜಯಗಳಿಸುವ ಮೂಲಕ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಮರುಸ್ಥಾಪಿಸಿದ್ದಾರೆ.

ಮತದಾನದ ಅಂಕಿ-ಅಂಶಗಳು: ಕ್ಷೇತ್ರದಲ್ಲಿ ಒಟ್ಟು 1,32,138 ಮತದಾರರಿದ್ದು, ಈ ಪೈಕಿ 1,12,062 ಮತಗಳು ಚಲಾವಣೆಯಾಗಿದ್ದವು. ಮತ ಎಣಿಕೆ ವೇಳೆ ಒಟ್ಟು 20,076 ಮತಗಳು ತಿರಸ್ಕೃತಗೊಂಡಿವೆ.

ಅಭ್ಯರ್ಥಿಗಳು ಪಡೆದ ಮತಗಳ ವಿವರ:

ಕೆ.ಎಂ. ಸುರೇಶ್ (ಬಿಜೆಪಿ): 66,020 ಮತಗಳು (ವಿಜೇತರು)

ಶಶಿ ಹುಲಿಕುಂಟೆ (ಕಾಂಗ್ರೆಸ್): 42,922 ಮತಗಳು

ಪಕ್ಷೇತರ ಅಭ್ಯರ್ಥಿಗಳು (ಒಟ್ಟು 8 ಜನ): 3,120 ಮತಗಳು

ಗೆಲುವಿನ ಅಂತರ: ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು 23,098 ಮತಗಳ ಸ್ಪಷ್ಟ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

10 ಸುತ್ತುಗಳ ಎಣಿಕೆ: ಮತ ಎಣಿಕೆ ಪ್ರಕ್ರಿಯೆಯು ಒಟ್ಟು 10 ರೌಂಡ್‌ಗಳಲ್ಲಿ ಸುದೀರ್ಘವಾಗಿ ನಡೆದು ಅಂತಿಮ ಫಲಿತಾಂಶ ಹೊರಬಿದ್ದಿದೆ.

Share

Leave a comment

Leave a Reply

Your email address will not be published. Required fields are marked *

Related Articles