Home ದಾವಣಗೆರೆ ಆಗ್ನೇಯ ಪದವೀಧರರ ಕ್ಷೇತ್ರ ಕಾಂಗ್ರೆಸ್ ಸೋಲಿನ ವಿಶ್ಲೇಷಣೆ: ಸ್ವಪಕ್ಷೀಯರ ಮುನಿಸು ಹಾಗೂ ನಾಯಕರ ನಿರ್ಲಕ್ಷ್ಯದಿಂದಲೇ ಶಶಿ ಹುಲಿಕುಂಟೆ ಪರಾಭವ?
ದಾವಣಗೆರೆನವದೆಹಲಿಬೆಂಗಳೂರು

ಆಗ್ನೇಯ ಪದವೀಧರರ ಕ್ಷೇತ್ರ ಕಾಂಗ್ರೆಸ್ ಸೋಲಿನ ವಿಶ್ಲೇಷಣೆ: ಸ್ವಪಕ್ಷೀಯರ ಮುನಿಸು ಹಾಗೂ ನಾಯಕರ ನಿರ್ಲಕ್ಷ್ಯದಿಂದಲೇ ಶಶಿ ಹುಲಿಕುಂಟೆ ಪರಾಭವ?

Share
ಆಗ್ನೇಯ
Share

ಬೆಂಗಳೂರು/ದಾವಣಗೆರೆ: ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಭರ್ಜರಿ ಜಯಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಭಾರೀ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಈ ಸೋಲಿಗೆ ಕೇವಲ ಎನ್‌ಡಿಎ ಮೈತ್ರಿಕೂಟದ ಬಲವಷ್ಟೇ ಅಲ್ಲ, ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರ ನಿರ್ಲಕ್ಷ್ಯ, ಆಂತರಿಕ ಕಲಹ ಹಾಗೂ ಪ್ರಮುಖ ನಾಯಕರ ಅಸಹಕಾರವೇ ಪ್ರಮುಖ ಕಾರಣ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.

ಚುನಾವಣೆಯಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸ್ಥಳೀಯ ಘಟಾನುಘಟಿ ನಾಯಕರು ಸಕ್ರಿಯವಾಗಿ ತೊಡಗಿಕೊಳ್ಳದೆ ತಟಸ್ಥರಾಗಿದ್ದರು ಎಂಬ ಆರೋಪಗಳು ಕೇಳಿಬಂದಿದ್ದು, ಇದು ಯುವ ಅಭ್ಯರ್ಥಿ ಶಶಿ ಹುಲಿಕುಂಟೆ ಅವರ ಸೋಲಿಗೆ ನೇರ ಕಾರಣವಾಯಿತು ಎಂದು ಪಕ್ಷದ ಕಾರ್ಯಕರ್ತರೇ ಬಹಿರಂಗವಾಗಿ ಅಳಲು ತೋಡಿಕೊಂಡಿದ್ದಾರೆ.

ನಾಯಕರ ಪ್ರಚಾರದ ಕೊರತೆ: ಮುಖ್ಯಮಂತ್ರಿಗಳು ಹಾಗೂ ಪ್ರಮುಖ ರಾಜ್ಯ ನಾಯಕರು ಈ ಚುನಾವಣೆಗಳ ಪ್ರಚಾರದ ಕಡೆಗೆ ಗಮನ ಹರಿಸಲಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಚಾರದಲ್ಲಿ ಕಾಣಿಸಿಕೊಳ್ಳದಿದ್ದರೆ, ಉಸ್ತುವಾರಿ ವಹಿಸಿದ್ದ ಡಾ. ಜಿ. ಪರಮೇಶ್ವರ್ ಕೂಡ ತುಮಕೂರು ದಸರಾದಲ್ಲಿ ಬ್ಯುಸಿಯಾಗಿ ನಾಮಕಾವಸ್ತೆಗೆ ಒಂದೇ ಒಂದು ಸಭೆಗೆ ಸೀಮಿತರಾದರು.

ಸ್ಥಳೀಯ ನಾಯಕರ ಅಸಹಕಾರ: ತುಮಕೂರು, ಕೋಲಾರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನ ಪ್ರಮುಖ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು (ಆರ್. ರಾಜೇಂದ್ರ ಸೇರಿದಂತೆ ಸ್ಥಳೀಯ ಘಟಾನುಘಟಿಗಳು) ಶಶಿ ಹುಲಿಕುಂಟೆ ಬೆನ್ನಿಗೆ ನಿಲ್ಲದೆ ಮೌನ ವಹಿಸಿದ್ದರು ಎಂಬ ಗಂಭೀರ ಆರೋಪವಿದೆ.

ದಾವಣಗೆರೆ ಪಾತ್ರ ಮತ್ತು ಮ್ಯಾಚ್‌ಫಿಕ್ಸಿಂಗ್ ಗುಸುಗುಸು: ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ನಾಯಕರ ವರ್ತನೆ ಹಾಗೂ ಆಂತರಿಕ ಒಪ್ಪಂದದಿಂದಾಗಿ ಕಾಂಗ್ರೆಸ್ ಮತಗಳು ಬಿಜೆಪಿ ಅಭ್ಯರ್ಥಿಗೆ ಒಲಿದಿವೆ ಎಂಬ ಮಾತುಗಳು ಕೇಳಿಬಂದಿದ್ದು, ವಿರೋಧ ಪಕ್ಷದ ಶಾಸಕರೇ ಇಲ್ಲಿ ಮ್ಯಾಚ್‌ಫಿಕ್ಸಿಂಗ್ ನಡೆದಿದೆ ಎಂದು ವ್ಯಂಗ್ಯವಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles