ಪಾಟ್ನಾ: ಬಿಹಾರದ ಸುಪಾಲ್ ಜಿಲ್ಲೆಯಲ್ಲಿ ಪ್ರೀತಿಸಿ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ವಂಜಿಗೆ ಬಂದಿದೆ. ವಿಚ್ಛೇದನ ನೀಡಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಪತಿ, ಪತ್ನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮೈಮೇಲೆ ಪೆಟ್ರೋಲ್ ಸುಟ್ಟು ಜೀವಂತವಾಗಿ ದಹಿಸಿರುವ ಘಟನೆ ತೀವ್ರ ಸಂಚಲನ ಮೂಡಿಸಿದೆ.
ಸಂಜೀವ್ ಸಾಹ್ ಎಂಬಾತನೇ ಈ ಕೃತ್ಯ ಎಸಗಿದ ಕ್ರೂರ ಪತಿಯಾಗಿದ್ದು, ದಾಳಿಯಲ್ಲಿ ಗಂಭೀರ ಗಾಯಗೊಂಡ 21 ವರ್ಷದ ದಾಮಿನಿ ಕುಮಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಸುಮಾರು ಎರಡು ವರ್ಷಗಳ ಕಾಲ ಪ್ರೀತಿಸಿ ಒಂಬತ್ತು ತಿಂಗಳ ಹಿಂದಷ್ಟೇ ಈ ಜೋಡಿ ಮದುವೆಯಾಗಿVತ್ತು. ಆದರೆ, ಕೆಲವೇ ದಿನಗಳಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಸಂಜೀವ್ ವಿಚ್ಛೇದನ ಬಯಸಿದ್ದನು. ಆದರೆ ದಾಮಿನಿ ಇದಕ್ಕೆ ಒಪ್ಪಿರಲಿಲ್ಲ. ಕೋಪಗೊಂಡ ಆರೋಪಿ, ಪೂರ್ವ ಕೋಸಿ ಒಡ್ಡು ಪ್ರದೇಶದ ನಿರ್ಜನ ಸ್ಥಳದಲ್ಲಿ ಕೃತ್ಯ ಎಸಗಿ ಪರಾರಿಯಾಗಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ತಂದೆಯನ್ನೂ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ಹಿನ್ನೆಲೆ: ವಿಚ್ಛೇದನ ನೀಡಲು ಪತ್ನಿ ದಾಮಿನಿ ಕುಮಾರಿ ಒಪ್ಪದ ಕಾರಣ, ಪತಿ ಸಂಜೀವ್ ಸಾಹ್ ಪೆಟ್ರೋಲ್ ಸುರಿದು ಜೀವಂತವಾಗಿ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾನೆ.
ಪ್ರೀತಿ ಮತ್ತು ಮದುವೆ: ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಇಬ್ಬರು ಎರಡು ವರ್ಷಗಳ ಪ್ರೀತಿಯ ಬಳಿಕ 9 ತಿಂಗಳ ಹಿಂದೆಷ್ಟೇ ಮದುವೆಯಾಗಿದ್ದರು.
ಪೊಲೀಸರ ಕ್ರಮ: ಸುಪಾಲ್ ಜಿಲ್ಲೆಯ ಪೊಲೀಸರು ಆರೋಪಿ ಸಂಜೀವ್ ಸಾಹ್‌ನನ್ನು ತಕ್ಷಣವೇ ಬಂಧಿಸಿದ್ದು, ಆತನ ತಂದೆ ಕಿನು ಸಾಹ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪತಿ ಒಪ್ಪಿಗೆ: ವಿಚಾರಣೆ ವೇಳೆ ತಾನೇ ಕೃತ್ಯ ಎಸಗಿರುವುದಾಗಿ ಆರೋಪಿ ಸಂಜೀವ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.





Leave a comment