ಗುವಾಹಟಿ: ಅಸ್ಸಾಂನ ಗುವಾಹಟಿಯ ಜನನಿಬಿಡ ಬೋರಾ ಸರ್ವಿಸ್ ಪ್ರದೇಶದಲ್ಲಿರುವ ‘ಹೋಟೆಲ್ ಬಿಲಾಸ್ ಇನ್’ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಹೋಟೆಲ್ ಮಾಲೀಕಿ, ಅವರ ಕುಟುಂಬದ ಮೂವರು ಸದಸ್ಯರು ಹಾಗೂ ಚಾಲಕ ಸೇರಿದಂತೆ ಒಟ್ಟು ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಆಸ್ತಿ ಹಾಗೂ ಲೀಸ್ ಒಪ್ಪಂದದ ವಿವಾದವೇ ಈ ದುರಂತಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ಮಾಲೀಕಿ ಹೆಲೆನಾ ಭರಲಿ, ಅವರ ಸಹೋದರ ಭೂದೇವ್ ಭರಲಿ, ಮಗ ದೇವರ್ಶಿ ಕಶ್ಯಪ್, ಸೊಸೆ ರಿನಿಕಿ ಕಶ್ಯಪ್ ಮತ್ತು ಅವರ ಚಾಲಕ ನಾರಾಯಣ ದಾಸ್ ಮೃತ ದುರ್ದೈವಿಗಳು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹೋಟೆಲ್ ಮೇಲ್ವಿಚಾರಕ ಸತ್ಯೇಂದ್ರ ಪಾಠಕ್ ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ನಡೆದ ಕೇವಲ ಒಂದು ಗಂಟೆಯೊಳಗೆ ಆರೋಪಿ ಘನಕಾಂತ ಗೋಗೋಯ್ ಎಂಬಾತನನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ .32 ಬೋರ್ ಲೈಸೆನ್ಸ್ ಹೊಂದಿರುವ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ: ಹೋಟೆಲ್ ಲೀಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾಲೀಕರ ಕಡೆಯವರಿಗೂ ಹಾಗೂ ಹೋಟೆಲ್ ಅನ್ನು ಗುತ್ತಿಗೆಗೆ ಪಡೆದಿದ್ದ ವ್ಯಕ್ತಿಗೂ ಮಧ್ಯೆ ಉಂಟಾದ ಆಸ್ತಿ ವಿವಾದವೇ ಈ ಸಾಮೂಹಿಕ ಹತ್ಯೆಗೆ ಕಾರಣ.
ಮೃತರ ವಿವರ: ಹೋಟೆಲ್ ಮಾಲೀಕಿ ಹೆಲೆನಾ ಭರಲಿ, ಅವರ ಸಹೋದರ ಭೂದೇವ್ ಭರಲಿ, ಮಗ ದೇವರ್ಶಿ ಕಶ್ಯಪ್, ಸೊಸೆ ರಿನಿಕಿ ಕಶ್ಯಪ್ ಮತ್ತು ಚಾಲಕ ನಾರಾಯಣ ದಾಸ್.
ಆರೋಪಿ ಬಂಧನ ಮತ್ತು ಪೊಲೀಸ್ ಕ್ರಮ: ಹೋಟೆಲ್ ಅನ್ನು ಸುಮಾರು ಒಂದು ವರ್ಷದ ಹಿಂದೆ ಲೀಸ್‌ಗೆ ಪಡೆದಿದ್ದ ಆರೋಪಿ ಘನಕಾಂತ ಗೋಗೋಯ್‌ನನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದು, ಪ್ರಕರಣದ ಕುರಿತು ವೈಜ್ಞಾನಿಕ ತನಿಖೆ ಮುಂದುವರಿದಿದೆ.
ಕಾಂಗ್ರೆಸ್ ಆಕ್ರೋಶ: ಗುವಾಹಟಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಅಸ್ಸಾಂ ಕಾಂಗ್ರೆಸ್ ತೀವ್ರ ಕಳಳವಳ ವ್ಯಕ್ತಪಡಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸೋಮವಾರ ರಾತ್ರಿ 9 ರ ಸುಮಾರಿಗೆ ನಡೆದ ಈ ಕೃತ್ಯವು ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದು, ಅಸ್ಸಾಂ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿವೆ.





Leave a comment