Home ಕ್ರೈಂ ನ್ಯೂಸ್ ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ‘ಬಾಪ್’ ಹೇಳಿಕೆ ವಿವಾದ: ಪಾಟ್ನಾ ಸಮಾವೇಶದಲ್ಲಿ ಭಾರೀ ಗಲಾಟೆ, ಬಿಜೆಪಿ ರೋಷಾವೇಷ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ‘ಬಾಪ್’ ಹೇಳಿಕೆ ವಿವಾದ: ಪಾಟ್ನಾ ಸಮಾವೇಶದಲ್ಲಿ ಭಾರೀ ಗಲಾಟೆ, ಬಿಜೆಪಿ ರೋಷಾವೇಷ!

Share
ಮಲ್ಲಿಕಾರ್ಜುನ ಖರ್ಗೆ
Share

ಪಾಟ್ನಾ/ಹೊಸದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಶ್ರೀ ಕೃಷ್ಣ ಸಿಂಗ್ ಅವರ 139ನೇ ಜನ್ಮದಿನೋತ್ಸವದ ಅಂಗವಾಗಿ ಪಾಟ್ನಾದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀಡಿದ ‘ಮೋದಿ ಕಾ ಬಾಪ್ ಭೀ ಜಾಯೇಗಾ’ (ಮೋದಿಯ ಅಪ್ಪನೂ ಅಧಿಕಾರದಿಂದ ಹೋಗಬೇಕಾಗುತ್ತದೆ) ಎಂಬ ವಿವಾದಾತ್ಮಕ ಹೇಳಿಕೆ ದೇಶಾದ್ಯಂತ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ಸಮಾವೇಶದ ನಡುವೆ ಸಭಿಕರ ಗುಂಪಿನಿಂದ “…ಮೋದಿ ಹೋಗುವುದಿಲ್ಲ” ಎಂಬ ಧ್ವನಿ ಕೇಳಿಬಂದ ಕೂಡಲೇ ಆಕ್ರೋಶಗೊಂಡ ಖರ್ಗೆ ವೇದಿಕೆಯಿಂದಲೇ ಈ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.

ಈ ಹೇಳಿಕೆಯ ಬೆನ್ನಲ್ಲೇ ಸಭೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಆ ವ್ಯಕ್ತಿಯನ್ನು ತಳ್ಳಿ, ಕೆಳಗೆ ಬಿಸಾಕಿ ಹಲ್ಲೆ ನಡೆಸಿ ಸಭಾಂಗಣದಿಂದ ಹೊರಹಾಕಿದ್ದರು. ಆದರೆ ಈ ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಆ ವ್ಯಕ್ತಿ ಸಂತೋಷ್ ಕುಮಾರ್, ತಾನು ಪ್ರಧಾನಿ ಮೋದಿಯನ್ನು ಸಮರ್ಥಿಸಿ ಮಾತನಾಡಲಿಲ್ಲ ಬದಲಾಗಿ ತನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. “ದಂಗೆ ಅಥವಾ ಕ್ರಾಂತಿಯೆದ್ದ ಹೊರತು ಮೋದಿ ಅಧಿಕಾರ ಬಿಟ್ಟು ಹೋಗುವುದಿಲ್ಲ ಎಂದು ನಾನು ಹೇಳಲು ಹೊರಟಿದ್ದೆ, ಆದರೆ ನನ್ನ ಮಾತಿನ ಅರ್ಧ ಭಾಗ ಮಾತ್ರ ಕೇಳಿ ಈ ಗೊಂದಲ ಸೃಷ್ಟಿಯಾಯಿತು” ಎಂದು ಅವರು ತಿಳಿಸಿದ್ದಾರೆ.

ವಿವಾದದ ಮೂಲ: ಸಮಾವೇಶದಲ್ಲಿ ಖರ್ಗೆ ಅವರು ಚುನಾವಣೆ ಮತ್ತು ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡುತ್ತಿದ್ದಾಗ, ಸಭೆಯಲ್ಲಿದ್ದ ಸಂತೋಷ್ ಕುಮಾರ್ ಎನ್ನುವವರು ಮಾತನಾಡಲು ಯತ್ನಿಸಿದ್ದು ಗಲಾತ್ರೆಗೆ ಕಾರಣವಾಯಿತು.

ಬಿಜೆಪಿಯಿಂದ ತೀವ್ರ ಆಕ್ರೋಶ: ಖರ್ಗೆ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವರು ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರು ಪದೇ ಪದೇ ಪ್ರಧಾನಿ ಮೋದಿ ಹಾಗೂ ಅವರ ತಂದೆಯನ್ನು ಅವಮಾನಿಸುತ್ತಿದ್ದು, ರಾಜಕೀಯ ಮರ್ಯಾದೆಯ ಎಲ್ಲಾ ಎಲ್ಲೆಗಳನ್ನು ಮೀರುತ್ತಿದ್ದಾರೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.

ಸ್ಥಳೀಯ ನಾಯಕರ ಟೀಕೆ: ಬಿಹಾರ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದು, ವಿರೋಧ ಪಕ್ಷದ ಬಳಿ ಅಭಿವೃದ್ಧಿಪರ ವಿಚಾರಗಳಿಲ್ಲದೆ ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಈ ನೇರ ವಾಕ್ಸಮರವು ಮುಂಬರುವ ದಿನಗಳಲ್ಲಿ ರಾಜಕೀಯವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Share

Leave a comment

Leave a Reply

Your email address will not be published. Required fields are marked *