Home ಕ್ರೈಂ ನ್ಯೂಸ್ ನಾವು ಬಾಂಗ್ಲಾದೇಶ ಅಥವಾ ನೇಪಾಳ ಅಲ್ಲ, ಸಂವಿಧಾನವೇ ನಮ್ಮ ಶಸ್ತ್ರ, 2029ರ ಲೋಕಸಭಾ ಚುನಾವಣೆವರೆಗೂ ಹೋರಾಟ: ನಟ ಪ್ರಕಾಶ್ ರಾಜ್
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನಾವು ಬಾಂಗ್ಲಾದೇಶ ಅಥವಾ ನೇಪಾಳ ಅಲ್ಲ, ಸಂವಿಧಾನವೇ ನಮ್ಮ ಶಸ್ತ್ರ, 2029ರ ಲೋಕಸಭಾ ಚುನಾವಣೆವರೆಗೂ ಹೋರಾಟ: ನಟ ಪ್ರಕಾಶ್ ರಾಜ್

Share
ಪ್ರಕಾಶ್ ರಾಜ್
Share

ನವದೆಹಲಿ: ಬಾಂಗ್ಲಾದೇಶ ಮತ್ತು ನೇಪಾಳದ ಮಾದರಿಯಲ್ಲಿ ಹಿಂಸಾತ್ಮಕ ಕ್ರಾಂತಿಗಳ ಮೂಲಕವಲ್ಲದೆ, ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಹಾಗೂ ಸಾವಿಧಾನಿಕ ಮಾರ್ಗದ ಮೂಲಕವೇ ವ್ಯವಸ್ಥೆಯ ಬದಲಾವಣೆ ತರಲಾಗುವುದು ಎಂದು ಖ್ಯಾತ ನಟ ಹಾಗೂ ಕಾರ್ಯಕರ್ತ ಪ್ರಕಾಶ್ ರಾಜ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ತಿರಂಗಾ ಯಾತ್ರೆಗೆ ಮುನ್ನ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ವಶಕ್ಕೆ ಪಡೆದಿರುವುದನ್ನು ತೀವ್ರವಾಗಿ ಖಂಡಿಸಿದ ಅವರು ಈ ಹೇಳಿಕೆ ನೀಡಿದ್ದಾರೆ.

ಚುನಾವಣಾ ಆಯೋಗದ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲVಯ ಲೋಪದೋಷಗಳ ವಿರುದ್ಧ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ವೇಳೆ ಈ ಬಂಧನ ನಡೆದಿದೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್ ರಾಜ್, ಕೇಂದ್ರವು ಪ್ರತಿಭಟನಾಕಾರರ ಧಿಯನ್ನು ಹತ್ತಿಕ್ಕಲು ಬಲಪ್ರಯೋಗಿಸುತ್ತಿದೆ ಎಂದು ಆರೋಪಿಸಿದರು.

ಪ್ರಜಾಸತ್ತಾತ್ಮಕ ಹೋರಾಟ: ದೇಶದಲ್ಲಿ ಅಧಿಕಾರ ಬದಲಾವಣೆಯು ಚುನಾವಣೆಗಳು ಮತ್ತು ಸಂವಿಧಾನಬದ್ಧ ಹಕ್ಕುಗಳ ಚಲಾವಣೆಯ ಮೂಲಕವೇ ಹೊರತು ಅರಾಜಕತೆಯಿಂದ ಅಲ್ಲ.

ಸಂವಿಧಾನದ ರಕ್ಷಣೆ: ಭಾರತವು ನೇಪಾಳ ಅಥವಾ ಬಾಂಗ್ಲಾದೇಶವಲ್ಲ. ನಮ್ಮ ಬಳಿ ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಭಗತ್ ಸಿಂಗ್ ನೀಡಿದ ಸಂವಿಧಾನ ಹಾಗೂ ಮತದಾನದ ಹಕ್ಕಿದೆ.

ತಿರಂಗಾ ಯಾತ್ರೆಗೆ ತಡೆ: ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿದ ಅವರು, ‘ಹರ್ ಘರ್ ತಿರಂಗಾ’ ಎಂದು ಘೋಷಣೆ ಕೂಗುವ ಸರ್ಕಾರವೇ ಯುವಕರು ತ್ರಿವರ್ಣ ಧ್ವಜ ಹಿಡಿದು ನಡೆಯುವುದನ್ನು ತಡೆಯುತ್ತಿೇಕೆ ಎಂದು ಪ್ರಶ್ನಿಸಿದರು.

ಸಂಸತ್ ಅಧಿವೇಶನದಲ್ಲಿ ಧ್ವನಿ: ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯದ ಬಗ್ಗೆ ವಿರೋಧ ಪಕ್ಷಗಳು ಮುಂಬರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಅವರು ಆಗ್ರಹಿಸಿದರು.

ರೈತರು, ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ವಿವಿಧ ನಾಗರಿಕ ಸಂಘಟನೆಗಳ ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *