Home ದಾವಣಗೆರೆ 2ನೇ ದಿನವೇ 200 ಕೋಟಿ ಕ್ಲಬ್ ಸೇರಿದ ರಜನೀಕಾಂತ್ ‘ಜೈಲರ್ 2’: ವಿದೇಶದಲ್ಲಿ ಸೂಪರ್ ಸ್ಟಾರ್ ಹವಾ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

2ನೇ ದಿನವೇ 200 ಕೋಟಿ ಕ್ಲಬ್ ಸೇರಿದ ರಜನೀಕಾಂತ್ ‘ಜೈಲರ್ 2’: ವಿದೇಶದಲ್ಲಿ ಸೂಪರ್ ಸ್ಟಾರ್ ಹವಾ!

Share
ಜೈಲರ್ 2
Share

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸನ್ಸೇಷನ್ ಸೃಷ್ಟಿಸಿದೆ. ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಈ ಚಿತ್ರ ಜಾಗತಿಕವಾಗಿ 200 ಕೋಟಿ ರೂಪಾಯಿ ಗಳಿಕೆಯ ಗಡಿಯನ್ನು ದಾಟಿ ಅಭೂತಪೂರ್ವ ಮುನ್ನಡೆ ಸಾಧಿಸಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ತಮಿಳು ಆಕ್ಷನ್ ಡ್ರಾಮಾ ಚಿತ್ರವು ಮೊದಲ ದಿನ 127 ಕೋಟಿ ರೂ. ಜಾಗತಿಕ ಕಲೆಕ್ಷನ್‌ನೊಂದಿಗೆ ಶುರುವಾಗಿತ್ತು. ಎರಡನೇ ದಿನ ಭಾರತದಲ್ಲಿ ಶೇ. 40ರಷ್ಟು ಕಲೆಕ್ಷನ್ ಇಳಿಕೆ ಕಂಡರೂ, ವಿದೇಶಿ ಮಾರುಕಟ್ಟೆಯಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಪ್ರಸ್ತುತ ಚಿತ್ರದ ಒಟ್ಟು ಜಾಗತಿಕ ಗಳಿಕೆ 209.10 ಕೋಟಿ ರೂಪಾಯಿಗೆ ತಲುಪಿದೆ.

ಎರಡನೇ ದಿನದ ಭಾರತದ ಗಳಿಕೆ: ‘ಜೈಲರ್ 2’ ಎರಡನೇ ದಿನ ಭಾರತದಲ್ಲಿ 35.60 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಇದರಲ್ಲಿ ತಮಿಳು ಆವೃತ್ತಿಯಿಂದ 25.25 ಕೋಟಿ ರೂ., ತೆಲುಗಿನಿಂದ 7.25 ಕೋಟಿ ರೂ. ಹಾಗೂ ಹಿಂದಿ ಆವೃತ್ತಿಯಿಂದ 2.75 ಕೋಟಿ ರೂ. ಹರಿದುಬಂದಿದೆ.

ವಿದೇಶಿ ಮಾರುಕಟ್ಟೆಯಲ್ಲಿ ದಾಖಲೆ: ಚಿತ್ರವು ವಿದೇಶಿ ಮಾರುಕಟ್ಟೆಯಲ್ಲಿ ಒಟ್ಟು 97 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು, ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಹಾಗೂ ಮೊದಲ ಭಾಗ ‘ಜೈಲರ್’ ಸಿನಿಮಾಗಳ ಓವರ್‌ಸೀಸ್ ದಾಖಲೆಯನ್ನು ಮುರಿದಿದೆ.

ಮೊದಲ ಭಾಗಕ್ಕಿಂತ ಮುನ್ನಡೆ: 2023ರಲ್ಲಿ ಬಿಡುಗಡೆಯಾಗಿದ್ದ ‘ಜೈಲರ್’ ಸಿನಿಮಾ ಎರಡನೇ ದಿನದ ಅಂತ್ಯಕ್ಕೆ 142.53 ಕೋಟಿ ರೂ. ಗಳಿಸಿತ್ತು. ಆದರೆ ‘ಜೈಲರ್ 2’ ಕೇವಲ 2 ದಿನಗಳಲ್ಲಿ 200 ಕೋಟಿ ಗಡಿ ದಾಟಿ ಮುನ್ನುಗ್ಗುತ್ತಿದೆ.

ಚಿತ್ರಮಂದಿರಗಳ ಹೌಸ್‌ಫುಲ್ ಪ್ರದರ್ಶನ: ತಮಿಳುನಾಡಿನಲ್ಲಿ ಶುಕ್ರವಾರ ಶೇ. 63ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದು, ನೈಟ್ ಶೋಗಳಲ್ಲಿ ಗರಿಷ್ಠ ಶೇ. 85.92ರಷ್ಟು ಪ್ರೇಕ್ಷಕರು ಹರಿದುಬಂದಿದ್ದಾರೆ.

ಹಿಂದಿ ಮಲ್ಟಿಪ್ಲೆಕ್ಸ್ ಆಪರೇಟರ್‌ಗಳು ಹಾಗೂ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ನಡುವಿನ ಒಟಿಟಿ ರಿಲೀಸ್ ವಿಂಡೋ ಗೊಂದಲದಿಂದಾಗಿ ಉತ್ತರ ಭಾರತದಲ್ಲಿ ಥಿಯೇಟರ್ ಪ್ರದರ್ಶನಕ್ಕೆ ಕೊಂಚ ಹಿನ್ನಡೆಯಾಗಿದ್ದರೂ, ಜಾಗತಿಕ ಮಟ್ಟದಲ್ಲಿ ರಜನಿಕಾಂತ್ ಸಿನಿಮಾ ಧೂಳೆಬ್ಬಿಸುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles