Home ಕ್ರೈಂ ನ್ಯೂಸ್ ಬೆಂಗಳೂರಿನಲ್ಲಿ ಮಹಿಳಾ ಸುರಕ್ಷತೆಗೆ ದೊಡ್ಡ ಪೆಟ್ಟು: ರಾಪಿಡೋ ರೈಡರ್ ಶಾಶ್ವತವಾಗಿ ಬಂದ್ ಮಾಡಿದ ಕಂಪನಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬೆಂಗಳೂರಿನಲ್ಲಿ ಮಹಿಳಾ ಸುರಕ್ಷತೆಗೆ ದೊಡ್ಡ ಪೆಟ್ಟು: ರಾಪಿಡೋ ರೈಡರ್ ಶಾಶ್ವತವಾಗಿ ಬಂದ್ ಮಾಡಿದ ಕಂಪನಿ!

Share
ರಾಪಿಡೋ
Share

ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ರಾಪಿಡೋ ಪಿಂಕ್ ರೈಡರ್‌ನಿಂದ ಅಸುರಕ್ಷಿತ ಹಾಗೂ ಅನುಚಿತ ಅನುಭವವಾಗಿದ್ದು, ಹೆಲ್ಮೆಟ್ ನೀಡುವಾಗ ಕೈ ಹಿಡಿದು ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಶ್ರೀಷ್ಟಿ ಎಂಬ ಹೆಸರಿನ ಎಕ್ಸ್ (X) ಬಳಕೆದಾರೆಯು ತಮಗಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಳೆಯ ಕಾರಣದಿಂದ ರೈಡ್ ರದ್ದುಗೊಳಿಸದಂತೆ ರೈಡರ್ ಪದೇ ಪದೆ ಮನವಿ ಮಾಡಿಕೊಂಡಿದ್ದ. ಪ್ರಯಾಣದ ವೇಳೆ ಅತಿಯಾಗಿ ಮಾತನಾಡಲು ಯತ್ನಿಸಿದ್ದಲ್ಲದೆ, ತಲುಪಬೇಕಾದ ಸ್ಥಳಕ್ಕೆ ಬಂದ ನಂತರವೂ ಹೆಲ್ಮೆಟ್ ಹಿಂದಿರುಗಿಸುವ ನೆಪದಲ್ಲಿ ಕೈ ಹಿಡಿದು ನಗುತ್ತಾ ಅಸಹನೀಯವಾಗಿ ವರ್ತಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಕಂಪನಿಯ ತುರ್ತು ಕ್ರಮ: ಮಹಿಳೆಯ ಸುರಕ್ಷತೆಗೆ ಪ್ರಾಮುಖ್ಯತೆ ನೀಡಿರುವ ರಾಪಿಡೋ ಸಂಸ್ಥೆಯು, ತಕ್ಷಣವೇ ಸ್ಪಂದಿಸಿ ಸಂಬಂಧಿತ ರೈಡರ್ ಅನ್ನು ತಮ್ಮ ಪ್ಲಾಟ್‌ಫಾರ್ಮ್‌ನಿಂದ ಶಾಶ್ವತವಾಗಿ ನಿಷೇಧಿಸಿದೆ (Permanent Suspension).

ಪೊಲೀಸ್ ತನಿಖೆ ಹಾಗೂ ಭದ್ರತಾ ಕಾಳಜಿ: ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಬೆಂಗಳೂರು ಪೊಲೀಸರು, ಸಂತ್ರಹಿತೆಯಿಂದ ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕ ವಿವರಗಳನ್ನು ಕೋರಿದ್ದು, ಕೂಡಲೇ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಪ್ರಯಾಣಿಕರ ಸುರಕ್ಷತೆ: ಬೈಕ್ ಟ್ಯಾಕ್ಸಿ, ಆಟೋರಿಕ್ಷಾ ಹಾಗೂ ಕ್ಯಾಬ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮತ್ತಷ್ಟು ಕಠಿಣ ಸುರಕ್ಷತಾ ಕ್ರಮಗಳು ಹಾಗೂ ಪರಿಶೀಲನೆ ಅತ್ಯಗತ್ಯ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಾವತಿ ಮಾಡುವ ವೇಳೆ ಕ್ಯೂಆರ್ ಕೋಡ್ ನೀಡದೆ ಮೊಬೈಲ್ ನಂಬರ್ ಕೇಳಿ ಕಿರುಕುಳ ನೀಡಿದಲ್ಲದೆ, ಅಪಾರ್ಟ್‌ಮೆಂಟ್ ಬಳಿಯೇ ದೀರ್ಘಕಾಲ ನಿಂತು ಆತಂಕ ಸೃಷ್ಟಿಸಿದ್ದ ರೈಡರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *