Home ಕ್ರೈಂ ನ್ಯೂಸ್ ರಾಜಸ್ಥಾನ ಗಡಿಯಲ್ಲಿ ಉಗ್ರರ ಸಂಚು ಭಗ್ನ: ಡ್ರಗ್ಸ್ ಹುಡುಕಲು ಹೋದ ಪೊಲೀಸರಿಗೆ ಸಿಕ್ಕಿತು RDX ಬಾಂಬ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರಾಜಸ್ಥಾನ ಗಡಿಯಲ್ಲಿ ಉಗ್ರರ ಸಂಚು ಭಗ್ನ: ಡ್ರಗ್ಸ್ ಹುಡುಕಲು ಹೋದ ಪೊಲೀಸರಿಗೆ ಸಿಕ್ಕಿತು RDX ಬಾಂಬ್!

Share
ರಾಜಸ್ಥಾನ
Share

ಶ್ರೀಗಂಗಾನಗರ: ರಾಜಸ್ಥಾನದ ಶ್ರೀಗಂಗಾನಗರ ವಲಯದಲ್ಲಿ ಪಾಕಿಸ್ತಾನದ ಗಡಿಯಿಂದ ಹಾರಿಬಂದ ಡ್ರೋನ್ ಮೂಲಕ ಮಾದಕ ದ್ರವ್ಯ ತರಲಾಗುತ್ತಿದೆ ಎಂದು ಶಂಕಿಸಿ ದಾಳಿ ನಡೆಸಿದ ರಾಜಸ್ಥಾನ ವಿರೋಧಿ ಮಾದಕದ್ರವ್ಯ ಪಡೆಗೆ (ANTF) ಆಘಾತಕಾರಿ ಸತ್ಯವೊಂದು ಬೆಳಕಿಗೆ ಬಂದಿದೆ. ಗಡಿ ದಾಟಿ ಬಂದಿದ್ದ ಡ್ರೋನ್‌ನಿಂದ ಡ್ರಗ್ಸ್ ಬದಲಿಗೆ ಅತ್ಯಂತ ಭೀಕರ ಹಾಗೂ ತಕ್ಷಣವೇ ಸ್ಫೋಟಿಸಬಹುದಾದ ಆರ್‌ಡಿಎಕ್ಸ್ (RDX), ಐಇಡಿ (IED) ಸ್ಫೋಟಕಗಳು, ಟರ್ಕಿ ನಿರ್ಮಿತ ಪಿಿಸ್ತೂಲ್ ಹಾಗೂ ನೂರಾರು ಜೀವಂತ ಕಾರತೂಸುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮುಂಬರುವ ಹಬ್ಬದ ಸೀಸನ್ ಅಥವಾ ಪಂಜಾಬ್ ಚುನಾವಣೆ ವೇಳೆಯಲ್ಲಿ ಪ್ರಮುಖ ಉಗ್ರ ಕೃತ್ಯ ಎಸಗುವ ಉದ್ದೇಶದಿಂದ ಈ ಸ್ಫೋಟಕಗಳನ್ನು ರವಾನಿಸಲಾಗಿದೆ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ. ಮಧ್ಯರಾತ್ರಿ ಗಡಿಯಿಂದ ಕೇವಲ 5 ಕಿ.ಮೀ ದೂರದಲ್ಲಿರುವ ರಾವೋಲಾ ತಾಲೂಕಿನ 12 ಕೆಡಿ ಗ್ರಾಮದ ಕೃಷಿ ಭೂಮಿಯಲ್ಲಿ ಬಿದ್ದಿದ್ದ ಪಾರ್ಸಲ್‌ಗಳನ್ನು ವಶಪಡಿಸಿಕೊಳ್ಳಲು ಬಂದಿದ್ದ ಪಂಜಾಬ್ ಮೂಲದ ಇಬ್ಬರು ಯುವಕರನ್ನು ಎಎನ್‌ಟಿಎಫ್ ಸಿಬ್ಬಂದಿ ಸ್ಥಳದಲ್ಲೇ ಬಂಧಿಸಿದ್ದಾರೆ.

ಅಪಾರ ಪ್ರಮಾಣದ ಸ್ಫೋಟಕ ವಶ: 7.75 ಕೆಜಿ ಆರ್‌ಡಿಎಕ್ಸ್, ಐಇಡಿ ಸ್ಫೋಟಕಗಳು, ಟೈಮರ್ ಸಾಧನ, ಡಿಟೋನೇಟರ್, 2 ಟರ್ಕಿ ನಿರ್ಮಿತ ಜಿಗ್ನಾದ ಪಿಸ್ತೂಲ್‌ಗಳು ಹಾಗೂ 867 ಜೀವಂತ ಕಾರತೂಸುಗಳು ಪತ್ತೆಯಾಗಿವೆ.

ಭೀಕರ ಹಾನಿಯ ಸಂಚು: ಈ ಬಾಂಬ್‌ಗಳನ್ನು ತಕ್ಷಣವೇ ಜೋಡಿಸಿ ಸ್ಫೋಟಿಸುವಂತೆ ಸಿದ್ಧಪಡಿಸಲಾಗಿತ್ತು. ಸ್ಫೋಟಗೊಂಡರೆ ಸೆಕೆಂಡಿಗೆ 9.5 ಕಿ.ಮೀ ವೇಗದಲ್ಲಿ ಶ್ರ್ಯಾಪ್ನೆಲ್ (ಕಬ್ಬಿಣದ ಚೂರುಗಳು) ಹರಡಿ ಅಪಾರ ಜೀವಹಾನಿ ಉಂಟುಮಾಡುವ ಸಾಮರ್ಥ್ಯ ಹೊಂದಿದ್ದವು.

ಪಂಜಾಬ್ ಮೂಲದ ಆರೋಪಿಗಳ ಬಂಧನ: ಫಿರೋಜ್‌ಪುರದ ಲಖ್ವಿಂದರ್ ಹಾಗೂ ಜಲಂಧರ್‌ನ ಸುಖ್ವಿಂದರ್ ಬಂಧಿತ ಆರೋಪಿಗಳು. ಇವರು ಸೆಪ್ಟೆಂಬರ್ 13 ರಂದು ಪಂಜಾಬ್‌ನ ಜಲಾಲಾಬಾದ್ ಪೊಲೀಸ್ ಠಾಣೆ ಮೇಲಿನ ಗ್ರೆನೇಡ್ ದಾಳಿಯಲ್ಲೂ ಭಾಗಿಯಾಗಿದ್ದರು.

ಪಾಕ್ ಹ್ಯಾಂಡ್ಲರ್‌ಗಳ ಕೈವಾಡ: ಬಂಧಿತರು ಗಡಿಯಾಚೆಗಿನ ಉಮರ್ ಚಾಚಾ, ದುಂಗರ್ ಚಾಚಾ ಹಾಗೂ ಶಾ ಪಠಾಣ್ ಎಂಬ ಹ್ಯಾಂಡ್ಲರ್‌ಗಳ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದರು.

ಘಟನೆಯ ತೀವ್ರತೆಯನ್ನು ಪರಿಗಣಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹಾಗೂ ರಾಜಸ್ಥಾನ ಭಯೋತ್ಪಾದನಾ ನಿಗ್ರಹ ಪಡೆ ಜಂಟಿ ತನಿಖೆ ಆರಂಭಿಸಿದ್ದು, ಆರೋಪಿಗಳ ವಿರುದ್ಧ ಯುಎಪಿಎ (UAPA) ಹಾಗೂ ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles