Home ಕ್ರೈಂ ನ್ಯೂಸ್ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು: ದೆಹಲಿಯಲ್ಲಿ ಮುಂದುವರಿದ ‘ಸಿಜೆಪಿ’ ಪ್ರತಿಭಟನೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು: ದೆಹಲಿಯಲ್ಲಿ ಮುಂದುವರಿದ ‘ಸಿಜೆಪಿ’ ಪ್ರತಿಭಟನೆ!

Share
ಚುನಾವಣಾ
Share

ನವದೆಹಲಿ: ಮತದಾರರ ಪಟ್ಟಿ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಎರಡನೇ ದಿನದ ಮುನ್ನವೇ ಸಿಜೆಪಿ ಪ್ರಮುಖ ನಾಯಕರಾದ ಅಭಿಜಿತ್ ದೀಪಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ದೆಹಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.

ವಿಮಾನದಲ್ಲಿ ನವದೆಹಲಿಗೆ ಆಗಮಿಸಿದ ತಕ್ಷಣವೇ ಈ ಮೂವರನ್ನು ವಿಮಾನದ ಒಳಗಡೆಯೇ ವಶಕ್ಕೆ ಪಡೆಯಲಾಗಿದ್ದು, ಇಂದು ದೆಹಲಿ ಕಾಂಟೋನ್ಮೆಂಟ್‌ನ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

ಜಂತರ್ ಮಂತರ್ ಚಲೋಗೆ ಕರೆ:

ಸಾಮಾಜಿಕ ಜಾಲತಾಣಗಳ ಮೂಲಕ ಯುವಜನತೆಯನ್ನು ಸಂಘಟಿಸಿ ಜಂತರ್ ಮಂತರ್‌ಗೆ ಆಗಮಿಸುವಂತೆ ಸಿಜೆಪಿ ಕರೆ ನೀಡಿತ್ತು. ನಾಯಕರ ಬಂಧನದ ಹೊರತಾಗಿಯೂ ಪ್ರತಿಭಟನೆ ಮುಂದುವರಿಯಲಿದ್ದು, ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡುವವರೆಗೂ ವಿರಾಮವಿಲ್ಲ ಎಂದು ಸಿಜೆಪಿ ಮುಖಂಡ ಅಜಿಂಕ್ಯ ಶಿಂದೆ ತಿಳಿಸಿದ್ದಾರೆ.

ನಗರದಲ್ಲೆಲ್ಲಾ ಪೊಲೀಸ್ ಬಂದೋಬಸ್ತ್:

ಶನಿವಾರ ನಡೆದ ಮೊದಲ ದಿನದ ಪ್ರತಿಭಟನೆಯಲ್ಲಿ 3,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ತಡರಾತ್ರಿ ಬಿಡುಗಡೆ ಮಾಡಿದ್ದರು. ಜಂತರ್ ಮಂತರ್ ಸುತ್ತಲೂ ಹಿಂದೆಂದೂ ಕಾಣದ ರೀತಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಯೂಟ್ಯೂಬರ್ ಧ್ರುವ್ ರಥಿ ಸೇರಿದಂತೆ ಪ್ರಮುಖರನ್ನು ಶನಿವಾರ ತಡರಾತ್ರಿ ಬಿಡುಗಡೆ ಮಾಡಲಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ವಿಚಾರಣೆ:

ಶನಿವಾರ ಪ್ರತಿಭಟನೆಯ ನೆಪದಲ್ಲಿ ದೆಹಲಿ ಮೆಟ್ರೋ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು ಇಂದು ವಿಶೇಷ ಸಭೆ ನಡೆಸಿ ವಿಚಾರಣೆ ನಡೆಸಲಿದೆ.

ರಾಜಕೀಯ ಕೆಸರೆರಚಟ:

ಪ್ರತಿಪಕ್ಷಗಳ ಬೆಂಬಲ ಹೊಂದಿರುವ ಸಿಜೆಪಿಯನ್ನು “ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ದೇಶವಿರೋಧಿ ಶಕ್ತಿಗಳ ಏಜೆಂಟ್” ಎಂದು ಬಿಜೆಪಿ ಕಿಡಿಕಾರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕಿದೆ, ಆದರೆ ಅರಾಜಕತೆ ಸೃಷ್ಟಿಸುವುದು ಯಾರ ಹಕ್ಕೂ ಅಲ್ಲ” ಎಂದು ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles