Home ದಾವಣಗೆರೆ ಸೇನಾ ಪದಕ ವಿಜೇತರಿಗೆ ಉಚಿತ ರೈಲು ಪ್ರಯಾಣ: ನವೆಂಬರ್ 1 ರಿಂದ IRCTCಯಲ್ಲಿ ಟಿಕೆಟ್ ಬುಕಿಂಗ್ ಆರಂಭ, ಆನ್‌ಲೈನ್ ನೋಂದಣಿ ಹೇಗೆ?
ದಾವಣಗೆರೆನವದೆಹಲಿಬೆಂಗಳೂರು

ಸೇನಾ ಪದಕ ವಿಜೇತರಿಗೆ ಉಚಿತ ರೈಲು ಪ್ರಯಾಣ: ನವೆಂಬರ್ 1 ರಿಂದ IRCTCಯಲ್ಲಿ ಟಿಕೆಟ್ ಬುಕಿಂಗ್ ಆರಂಭ, ಆನ್‌ಲೈನ್ ನೋಂದಣಿ ಹೇಗೆ?

Share
ರೈಲು
Share

ದಾವಣಗೆರೆ: ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಭಾರತೀಯ ರೈಲ್ವೇ ಪ್ರಾಧಿಕಾರವು ಉಚಿತ ರೈಲು ಪ್ರಯಾಣ ಸೇವೆಯನ್ನು ಆರಂಭಿಸಿದೆ. ಸೇನಾ, ವಾಯು ಸೇನಾ ಮತ್ತು ನೌಕಾ ಸೇನಾ ವಿಭಾಗಗಳಲ್ಲಿ ಶೌರ್ಯ ಪ್ರಶಸ್ತಿ ಪಡೆದ ಅರ್ಹ ವಿಜೇತರಿಗೆ ಈ ಉಚಿತ ರೈಲು ಪ್ರಯಾಣ ಸೌಲಭ್ಯ ಲಭ್ಯವಾಗಲಿದೆ.

ಈ ಉಚಿತ ಪ್ರಯಾಣದ ಸೌಲಭ್ಯವನ್ನು ಪಡೆಯಲು ಅರ್ಹ ಫಲಾನುಭವಿಗಳು ಆನ್‌ಲೈನ್ ಪೋರ್ಟಲ್‌ನಲ್ಲಿ ತಮ್ಮ ಮಾಹಿತಿಗಳನ್ನು ನೋಂದಾಯಿಸಿಕೊಳ್ಳಬೇಕಿದೆ. ಸೆಪ್ಟೆಂಬರ್ 15 ರಿಂದಲೇ ನೋಂದಣಿ ಪ್ರಕ್ರಿಯೆಯು ಅಧಿಕೃತವಾಗಿ ಆರಂಭಗೊಂಡಿದ್ದು, ನೋಂದಾಯಿಸಿಕೊಂಡ ಫಲಾನುಭವಿಗಳು ಶೀಘ್ರದಲ್ಲೇ ಉಚಿತ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಪಡೆಯಬಹುದು.

ಉಚಿತ ಟಿಕೆಟ್ ಬುಕಿಂಗ್: ನೋಂದಾಯಿತ ಫಲಾನುಭವಿಗಳು ನವೆಂಬರ್ 1 ರಿಂದ IRCTC ಪೋರ್ಟಲ್‌ನಲ್ಲಿ ಉಚಿತ ಪ್ರಯಾಣದ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ.

ಸಂಗಾತಿಗೆ ಉಚಿತ ಪ್ರಯಾಣ: ಈ ಉಚಿತ ಪ್ರಯಾಣ ಸೇವೆಯು ಶೌರ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಅವರೊಂದಿಗೆ ಪ್ರಯಾಣಿಸುವ ಓರ್ವ ಸಂಗಾತಿಗೆ (Spouse) ಮಾತ್ರ ಅನ್ವಯವಾಗಲಿದೆ.

ಆನ್‌ಲೈನ್ ನೋಂದಣಿ ಲಿಂಕ್: ರೈಲು ಪಾಸ್‌ಗಳನ್ನು ಪಡೆಯಲು ಬಯಸುವವರು https://irccp.indianrail.gov.in/IRCCP ಜಾಲತಾಣದಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಈ ಯೋಜನೆಯ ಕುರಿತು ಹೆಚ್ಚಿನ ವಿವರಗಳು ಹಾಗೂ ಮಾಹಿತಿಗಾಗಿ ಸೈನಿಕರು ಮತ್ತು ಅವರ ಕುಟುಂಬದವರು 08182-220925 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles