Home ಕ್ರೈಂ ನ್ಯೂಸ್ “ಬಾಯ್‌ಫ್ರೆಂಡ್ ಜೊತೆ ಏನ್ ಮಾಡ್ತೀಯಾ?” ವಿದ್ಯಾರ್ಥಿನಿಯರಿಗೆ ಅಶ್ಲೀಲ ಪ್ರಶ್ನೆ ಕೇಳುತ್ತಿದ್ದ ಪ್ರೊಫೆಸರ್‌ ಹುದ್ದೆಯಿಂದ ವಜಾ: ಸಾಬೀತಾದ ಕಾಂಗ್ರೆಸ್ ಸಂಸದನ ಕುಚೇಷ್ಟೆಗಳ ಡೀಟೈಲ್ಸ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಬಾಯ್‌ಫ್ರೆಂಡ್ ಜೊತೆ ಏನ್ ಮಾಡ್ತೀಯಾ?” ವಿದ್ಯಾರ್ಥಿನಿಯರಿಗೆ ಅಶ್ಲೀಲ ಪ್ರಶ್ನೆ ಕೇಳುತ್ತಿದ್ದ ಪ್ರೊಫೆಸರ್‌ ಹುದ್ದೆಯಿಂದ ವಜಾ: ಸಾಬೀತಾದ ಕಾಂಗ್ರೆಸ್ ಸಂಸದನ ಕುಚೇಷ್ಟೆಗಳ ಡೀಟೈಲ್ಸ್!

Share
ವಿದ್ಯಾರ್ಥಿನಿ
Share

ನವದೆಹಲಿ: ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಾಗಿರುವ ಅಂಗೋಮ್ಚಾ ಬಿಮೋಲ್ ಅಕೋಯ್‌ಜಾಮ್ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಲೈಂಗಿಕ ಕಿರುಕುಳ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ವಿದ್ಯಾರ್ಥಿನಿಯರ ಜೊತೆ ಅಸಭ್ಯ ನಡೆ, ಲೈಂಗಿಕ ದೌರ್ಜನ್ಯ ಹಾಗೂ ವೃತ್ತಿಪರ ಗಡಿಗಳನ್ನು ಮೀರಿದ ಆರೋಪಗಳ ಕುರಿತು ತನಿಖೆ ನಡೆಸಿದ್ದ ವಿಶ್ವವಿದ್ಯಾಲಯದ ಆಂತರಿಕ ಸಮಿತಿಯು (Internal Committee) ಅವರ ಮೇಲಿದ್ದ 9 ಪ್ರಮುಖ ಆರೋಪಗಳು ಸಾಬೀತಾಗಿವೆ ಎಂದು ವರದಿ ನೀಡಿದೆ. ಸಮಿತಿಯ ಶಿಫಾರಸಿನ ಮೇರೆಗೆ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಅವರನ್ನು ಹುದ್ದೆಯಿಂದ ವಜಾಗೊಳಿಸಿ ಆದೇಶಿಸಿದೆ.

ಸಮಿತಿ ತನಿಖೆಯಲ್ಲಿ ಸಾಬೀತಾದ 9 ಪ್ರಮುಖ ಗಂಭೀರ ಆರೋಪಗಳು:

ವೈಯಕ್ತಿಕ ಜೀವನದ ಕುರಿತು ಅಸಭ್ಯ ಪ್ರಶ್ನೆಗಳು: ತರಗತಿಗಳಲ್ಲಿ ವಿದ್ಯಾರ್ಥಿನಿಯರ ವೈಯಕ್ತಿಕ ಡೇಟಿಂಗ್ ಮತ್ತು ಪ್ರೇಮ ಜೀವನದ ಕುರಿತು ಕೇಳುವುದು.

ವೈವಾ  ಪರೀಕ್ಷೆ ವೇಳೆ ಮಾನಸಿಕ ಕಿರುಕುಳ: “ನಿನಗೆ ಬಾಯ್‌ಫ್ರೆಂಡ್ ಇದ್ದಾನಾ?”, “ಅವನ ಜೊತೆ ಏನೇನು ಚಟುವಟಿಕೆ ಮಾಡುತ್ತೀಯಾ?”, “ನನ್ನ ವಯಸ್ಸಿನ ವ್ಯಕ್ತಿ ನಿನ್ನ ವಯಸ್ಸಿನ ಹುಡುಗಿಯನ್ನು ಇಷ್ಟಪಟ್ಟರೆ ನಿನ್ನ ಅಭಿಪ್ರಾಯವೇನು?” ಎಂಬಂತಹ ಅನುಚಿತ ಪ್ರಶ್ನೆಗಳನ್ನು ವೈವಾ ವೇಳೆ ಕೇಳಿರುವುದು.

ಲೈಂಗಿಕ ಶಬ್ದಗಳ ಬಳಕೆ: ‘Quickie’ ನಂತಹ ಲೈಂಗಿಕ ಅರ್ಥ ನೀಡುವ ಪದಗಳ ಅರ್ಥವನ್ನು ತರಗತಿಯಲ್ಲಿ ಕೇಳಿ, ಸನ್ನೆಗಳ ಮೂಲಕ ಅಸಭ್ಯವಾಗಿ ವಿವರಿಸುವುದು.

ಅನಪೇಕ್ಷಿತ ದೈಹಿಕ ಸ್ಪರ್ಶ: ವಿದ್ಯಾರ್ಥಿನಿಯರ ಕೈ ಹಿಡಿದುಕೊಳ್ಳುವುದು ಮತ್ತು ಅವರ ಸಮ್ಮತಿ ಇಲ್ಲದಿದ್ದರೂ ಚಿವುಟ್ಟುವುದು.

ಅಶ್ಲೀಲ ಚಿತ್ರ ಪ್ರದರ್ಶನ: ಯಾವುದೇ ಮುನ್ನೆಚ್ಚರಿಕೆ ನೀಡದೆ ತರಗತಿಯಲ್ಲಿ ‘Lust Stories’ ನಂತಹ ಲೈಂಗಿಕ ದೃಶ್ಯಗಳಿರುವ ಸಿನಿಮಾವನ್ನು ಪ್ರದರ್ಶಿಸಿ ಮುಜುಗರ ಉಂಟುಮಾಡಿರುವುದು.

ಅನಗತ್ಯ ಸಾಮೀಪ್ಯ ಹಾಗೂ ಜನಾಂಗೀಯ ಹೇಳಿಕೆ: ತರಗತಿಯಲ್ಲಿ ವಿದ್ಯಾರ್ಥಿನಿಯರ ಬಳಿ ಅನಗತ್ಯವಾಗಿ ಹತ್ತಿರ ಬರುವುದು ಮತ್ತು ಬಿಹಾರಿ ಹಾಗೂ ಬೆಂಗಾಲಿ ಸಮುದಾಯದವರ ಬಗ್ಗೆ ಹಗುರವಾಗಿ ಮಾತನಾಡುವುದು.

ಮನೆಯಲ್ಲಿ ಮದ್ಯಪಾನ: ಸ್ವತಃ ತಮ್ಮ ನಿವಾಸದಲ್ಲಿ ವಿದ್ಯಾರ್ಥಿಗಳೊಂದಿಗೆ ಮದ್ಯಪಾನ ಮಾಡುವುದು ಮತ್ತು ಅನಗತ್ಯ ಆಪ್ತತೆ ಬೆಳೆಸಿಕೊಳ್ಳುವುದು.

ಅನಿಯಮಿತ ವೈವಾ ಪರೀಕ್ಷೆಗಳು: ತಡರಾತ್ರಿ 11:40ರ ವರೆಗೆ ತಮ್ಮ ಖಾಸಗಿ ನಿವಾಸದಲ್ಲಿ ವಿದ್ಯಾರ್ಥಿನಿಯರಿಗೆ ವೈವಾ ಪರೀಕ್ಷೆ ನಡೆಸುವುದು.

ವಿದ್ಯಾರ್ಥಿನಿಯರ ಬಗ್ಗೆ ಹಗುರ ಮಾತು: ವೈವಾ ವೇಳೆ ವಿದ್ಯಾರ್ಥಿನಿಯರನ್ನು ಅಳಿಸಿ, ಅವರನ್ನು ‘ಕಂಗನಾ ರಣಾವತ್’ ಹಾಗೂ ಇತರ ನಟಿಯರಿಗೆ ಹೋಲಿಸಿ ಗೇಲಿ ಮಾಡುವುದು.

ಈ ಎಲ್ಲಾ ಆಧಾರಗಳನ್ನು ಪರಿಶೀಲಿಸಿದ ಜೆಎನ್‌ಯು ಆಂತರಿಕ ಸಮಿತಿಯು, ಪ್ರೊಫೆಸರ್ ನಡೆ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಗೌರವದ ಎಲ್ಲೆಯನ್ನು ಮೀರಿದೆ ಎಂದು ಸ್ಪಷ್ಟಪಡಿಸಿದೆ. ಆದರೆ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಪ್ರೊ. ಬಿಮೋಲ್ ಅಕೋಯ್‌ಜಾಮ್ ತಳ್ಳಿಹಾಕಿದ್ದು, ಇವೆಲ್ಲವೂ ಕಲ್ಪಿತ ಹಾಗೂ ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.