ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಹಾಗೂ ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯಲು ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮಗಳಿಗೆ ಮುಂದಾಗಿದೆ. ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿ ಬಳಸುವ ‘ಹಾಫ್ ಹೆಲ್ಮೆಟ್’ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ಫುಟ್ಪಾತ್ಗಳ ಮೇಲೆ ಬೈಕ್ ಚಲಾಯಿಸುವ ಸವಾರರಿಗೆ ಭಾರೀ ದಂಡ ವಿಧಿಸಲಿದೆ.
ಸಾಮಾನ್ಯವಾಗಿ ಕಡಿಮೆ ಬೆಲೆಗೆ ಸಿಗುವ ಹಾಫ್ ಹೆಲ್ಮೆಟ್ಗಳು ತಲೆಯ ಮೇಲ್ಭಾಗವನ್ನು ಮಾತ್ರ ಮುಚ್ಚುತ್ತವೆ. ಅಪಘಾತ ಸಂಭವಿಸಿದಾಗ ಸವಾರನ ಮುಖ, ಗಲ್ಲ, ಕಿವಿ ಮತ್ತು ಕುತ್ತಿಗೆ ಭಾಗಗಳಿಗೆ ಯಾವುದೇ ರಕ್ಷಣೆ ಸಿಗುವುದಿಲ್ಲ. ಬಿಐಎಸ್ ಅಥವಾ ಐಎಸ್ಐ ಮಾನದಂಡ ಹೊಂದಿಲ್ಲದ ಇಂತಹ ಹೆಲ್ಮೆಟ್ಗಳು ಅಪಘಾತದ ವೇಳೆ ಪ್ರಾಣಾಪಾಯವನ್ನು ಹೆಚ್ಚಿಸುತ್ತವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ಫುಟ್ಪಾತ್ ರೈಡಿಂಗ್ ಹಾಗೂ ಒನ್ವೇ ಉಲ್ಲಂಘನೆಗೆ ಭಾರಿ ದಂಡ:
ಕಾಲ್ನಡಿಗೆ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಚಾರ ದಂಡದ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ:
ಫುಟ್ಪಾತ್ ಚಾಲನೆ: ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನ ಚಲಾಯಿಸಿದರೆ ಪ್ರಸ್ತುತ ಇರುವ ₹500 ದಂಡವನ್ನು ಮೊದಲ ಬಾರಿಯ ಅಪರಾಧಕ್ಕೆ ₹5,000 ಕ್ಕೆ ಹೆಚ್ಚಿಸಲು ಮತ್ತು ಎರಡನೇ ಬಾರಿಯ ಅಪರಾಧಕ್ಕೆ ₹10,000 ದಂಡ ವಿಧಿಸಲು ಪ್ರಸ್ತಾಪಿಸಲಾಗಿದೆ.
ಒನ್ವೇ ನಿಯಮ ಉಲ್ಲಂಘನೆ: ಒನ್ವೇ (One-Way) ರಸ್ತೆಗಳಲ್ಲಿ ವಿರುದ್ಧ ದಿಸೆಯಲ್ಲಿ ವಾಹನ ಚಲಾಯಿಸುವವರಿಗೆ ದಂಡದ ಪ್ರಮಾಣವನ್ನು 10 ಪಟ್ಟು (₹10,000) ಹೆಚ್ಚಿಸಲು ನಿರ್ಧರಿಸಲಾಗಿದೆ.
- Byrathi Suresh transport minister
- Footpath riding fine Bangalore
- Half helmet ban in Karnataka
- ISI helmet rule India
- Karnataka traffic fines hike
- Karnataka traffic rules update
- One way traffic violation fine
- Road safety Karnataka 2026
- ಕರ್ನಾಟಕ ಹಾಫ್ ಹೆಲ್ಮೆಟ್ ಬ್ಯಾನ್
- ದ್ವಿಚಕ್ರ ವಾಹನ ಹೆಲ್ಮೆಟ್ ನಿಯಮ
- ಫುಟ್ಪಾತ್ ರೈಡಿಂಗ್ ದಂಡ
- ಬೆಂಗಳೂರು ಸಂಚಾರ ನಿಯಮ
- ಬೈರತಿ ಸುರೇಶ್
- ಸಂಚಾರ ದಂಡ ಹೆಚ್ಚಳ
- ಸಾರಿಗೆ ಇಲಾಖೆ ನಿಯಮಗಳು





Leave a comment